Site icon Vistara News

Road accident | ಶಿಡ್ಲಘಟ್ಟದಲ್ಲಿ ಪಲ್ಟಿಯಾದ ಕಾರು: ಇಬ್ಬರು ಸ್ಥಳದಲ್ಲೇ ಸಾವು, ನಾಲ್ವರಿಗೆ ಗಾಯ

car accident

ಚಿಕ್ಕಬಳ್ಳಾಪುರ: ಚಾಲಕನ ಅಜಾಗರೂಕ ಚಾಲನೆಯಿಂದಾಗಿ ಕಾರೊಂದು ಪಲ್ಟಿಯಾಗಿ ರಸ್ತೆಯ ಬದಿಗೆ ಬಿದ್ದಿದ್ದು, ಇಬ್ಬರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ನಾಲ್ವರಿಗೆ ಗಾಯಗಳಾಗಿವೆ.

ಶಿಡ್ಲಘಟ್ಟ ತಾಲೂಕಿನ‌ ಕದಿರನಾಯಕನಹಳ್ಳಿ ಹೊಸಹಳ್ಳಿ ಮಾರ್ಗ ಕಾರು ವೇಗವಾಗಿ ಸಾಗುವ ವೇಳೆ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಕಡೆಗೆ ಸಾಗುವಾಗ ಈ ಘಟನೆ ನಡೆದಿದೆ. ಮೃತಪಟ್ಟವರಲ್ಲಿ ಒಬ್ಬರನ್ನು ಆಂಧ್ರ ಮೂಲದ ಪುರುಷೋತ್ತಮ(೨೩) ಎಂದು ಗುರುತಿಸಲಾಗಿದೆ.

ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಗಾಯಳುಗಳನ್ನು ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ | Road Accident | ಆಳದ ಕಂದಕಕ್ಕೆ ಬಿದ್ದ ವಾಹನ; 12 ಮಂದಿ ದುರ್ಮರಣ

Exit mobile version