Site icon Vistara News

Road accident : ಶ್ರೀ ಕ್ಷೇತ್ರ ಸಿಗಂದೂರು ಬಳಿ ರಸ್ತೆಯಿಂದ ಕೆಳಗೆ ಉರುಳಿದ ಟೆಂಪೊ ಟ್ರಾವೆಲರ್ , ಪ್ರವಾಸಿ ಮಹಿಳೆ ಸಾವು

Sigandur bus accident

#image_title

ಶಿವಮೊಗ್ಗ: ಜಿಲ್ಲೆಯ ಪ್ರಸಿದ್ಧ ತೀರ್ಥ ಕ್ಷೇತ್ರವಾಗಿರುವ ಶ್ರೀ ಕ್ಷೇತ್ರ ಸಿಗಂದೂರು ಬಳಿ ಬಸ್ ಒಂದು ಪಲ್ಟಿಯಾಗಿ ಒಬ್ಬ ಪ್ರವಾಸಿಗರು ಮೃತಪಟ್ಟಿದ್ದಾರೆ. ಸಾಗರ ತಾಲೂಕಿನ ಕ್ಷೇತ್ರಕ್ಕೆ ಬರುವ ವೇಳೆ ಬಸ್‌ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ತಗ್ಗಿಗೆ ಉರುಳಿಬಿದ್ದಿದೆ. ಇದರಿಂದ ಒಬ್ಬರು ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ.

ಕೊಲ್ಲೂರಿಂದ ಸಿಗಂದೂರಿಗೆ ಬರುತ್ತಿದ್ದ ಬೆಂಗಳೂರಿನ ಟೆಂಪೋ ಟ್ರಾವೆಲ್ಲರ್‌ ಇದಾಗಿದ್ದು, ಬೆಂಗಳೂರಿನ ದೇವನಹಳ್ಳಿ ಮೂಲದ 60 ವರ್ಷದ ವೃದ್ದೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

20 ಜನರ ತಂಡ ದೇವನ ಹಳ್ಳಿಯಿಂದ ಪ್ರವಾಸಕ್ಕೆ ಬಂದಿತ್ತು. ಕೊಲ್ಲೂರು ದೇವಿಯ ದರ್ಶನ ಮುಗಿಸಿ ಸಿಗಂದೂರಿಗೆ ಬರುತ್ತಿದ್ದಾಗ ಕಾರ್ಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಕೊಪ್ಪದಲ್ಲಿ ವಾಹನ ಕೆಳಗೆ ಉರುಳಿದೆ. ಚಾಲಕನ ನಿರ್ಲಕ್ಷತನದ ಚಾಲನೆಯೇ ದುರಂತಕ್ಕೆ ಕಾರಣ ಎನ್ನಲಾಗಿದೆ.

ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ನಾಲ್ವರ ದುರ್ಮರಣ

ಪುಣೆ: ಖಾಸಗಿ ಬಸ್​​ಗೆ ಸರಕು ಸಾಗಣೆ ಟ್ರಕ್​ ಹಿಂದಿನಿಂದ ಡಿಕ್ಕಿಯಾಗಿ (Road Accident) ನಾಲ್ವರು ಮೃತಪಟ್ಟು, 22 ಮಂದಿ ಗಾಯಗೊಂಡ ಘಟನೆ ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ನಡೆದಿದೆ. ಪುಣೆಯ ಅಂಬೆಗಾಂವ್​ ಏರಿಯಾದ ನರ್ಹೆ ಎಂಬ ಹಳ್ಳಿಯ ಬಳಿ ಇರುವ ಸೇತುವೆಯೊಂದರ ಮೇಲೆ ಮುಂಜಾನೆ 3ಗಂಟೆ ಹೊತ್ತಿಗೆ ಭೀಕರ ಅಪಘಾತ ಆಗಿದೆ. ಈ ಸ್ಥಳ ಸ್ವಾಮಿ ನಾರಾಯಣ ದೇವಸ್ಥಾನದ ಸಮೀಪವೇ ಇದೆ.

ಈ ಖಾಸಗಿ ಬಸ್​​ ಸತಾರಾದಿಂದ ಥಾಣೆಯ ದೊಂಬಿವಿಲಿಗೆ ಸಂಚಾರ ಮಾಡುತ್ತಿತ್ತು. ಸುಮಾರು 31 ಟನ್​​ಗಳಷ್ಟು ಸಕ್ಕರೆ ಚೀಲ ಹೊತ್ತು ಬಂದ ಟ್ರಕ್​, ಸೂರ್ಯನಾರಾಯಣ ದೇವಸ್ಥಾನ ಸಮೀಪ ಇರುವ ಸೇತುವೆಯ ಮೇಲೆ ಬಸ್​​ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಲಾರಿಯೂ ಪಲ್ಟಿಯಾಗಿದೆ. ಬಸ್​​ನ ಹಿಂಭಾಗವಂತೂ ನುಜ್ಜುಗುಜ್ಜಾಗಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಗಾಯಾಳುಗಳನ್ನೆಲ್ಲ ಸಮೀಪದ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಬಸ್​​ನಲ್ಲಿದ್ದ ಮೂವರು ಪ್ರಯಾಣಿಕರು ಮತ್ತು ಟ್ರಕ್​​ನ ಡ್ರೈವರ್​ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಎನ್​ಸಿಪಿ ಪಕ್ಷದ ಸಂಸದೆ ಸುಪ್ರಿಯಾ ಸುಳೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಘಟನೆ ಬಗ್ಗೆ ಮಾಹಿತಿ ನೀಡಿದ ಪುಣೆ ಜಿಲ್ಲಾ ಪರಿಷತ್ ಸಿಇಒ ಆಯುಷ್ ಪ್ರಸಾದ್ ಅವರು ‘ಟ್ರಕ್​ ಚಾಲಕ ನಿಯಂತ್ರಣ ಕಳೆದುಕೊಂಡಿದ್ದೇ ಬಸ್​ಗೆ ಡಿಕ್ಕಿ ಹೊಡೆಯಲು ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ರಾತ್ರಿ ಹೊತ್ತಲ್ಲಿ ವಾಹನ ಚಲಾಯಿಸುವವರು ತುಂಬ ಎಚ್ಚರಿಕೆಯಿಂದ ಇರಬೇಕು. ಅದರಲ್ಲೂ ವಾಹನದ ಬ್ರೇಕ್​​ ಸರಿಯಾಗಿದೆಯಾ, ಮತ್ತೇನಾದರೂ ತೊಂದರೆಯಿದೆಯಾ ಎಂಬುದನ್ನು ಚೆಕ್​ ಮಾಡಿಕೊಳ್ಳಬೇಕು. ರಸ್ತೆ ಮೇಲೆ ಏಕಾಗ್ರತೆ ಇರಬೇಕು’ ಎಂದು ಹೇಳಿದ್ದಾರೆ.

ಇದನ್ನೂ ಓದಿ : Road Accident: ಕೆಎಸ್‌ಆರ್‌ಟಿಸಿ ಚಾಲಕನ ನಿಯಂತ್ರಣ ತಪ್ಪಿ ಬಸ್‌ ಪಲ್ಟಿ; ಪ್ರಾಣಾಪಾಯದಿಂದ ಪ್ರಯಾಣಿಕರು ಪಾರು

Exit mobile version