Site icon Vistara News

Road Accident | ಬಾಗಲಕೋಟೆಯಲ್ಲಿ ಕಾರಿಗೆ ಡಿಕ್ಕಿ ಹೊಡೆದ ಲಾರಿ; ಧಾರವಾಡದ ಚಾಲಕ ಸಾವು

ಬಾಗಲಕೋಟೆ: ಇಲ್ಲಿನ ಹುನಗುಂದ ತಾಲೂಕಿನ ರಕ್ಕಸಗಿ ಗ್ರಾಮದ ಬಳಿ ಭಾನುವಾರ ರಾತ್ರಿ ಕಾರು ಹಾಗೂ ಲಾರಿ ನಡುವೆ ಮುಖಾಮುಖಿ (Road Accident) ಡಿಕ್ಕಿಯಾಗಿದೆ. ಕಾರಿಗೆ ರಭಸವಾಗಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಕಾರು ಚಾಲಕನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಮೂಲತಃ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ತಿರ್ಲಾಪುರ ಗ್ರಾಮದ ನಿವಾಸಿ ಶಿವರಾಜ ಹಿರೆಮನಿ (೩೧) ಮೃತ ದುರ್ದೈವಿ. ಗದಗ ಜಿಲ್ಲೆ ಗಜೇಂದ್ರಗಡದಲ್ಲಿ ಪಶುಸಂಗೋಪನಾ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಶಿವರಾಜ ಅವರು ಬಾಗಲಕೋಟೆ ತಾಲೂಕಿನ ಅಚನೂರ ಗ್ರಾಮದ ಹನುಮಂತ ದೇವಸ್ಥಾನಕ್ಕೆ ಹೋಗಿದ್ದರು.

ವಾಪಸ್ ಗಜೇಂದ್ರಗಡ ಪಟ್ಟಣಕ್ಕೆ ಹೊರಡುವ ವೇಳೆ ಈ ದುರಂತ ನಡೆದಿದೆ. ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಶಿವರಾಜ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳಕ್ಕೆ ಅಮೀನಗಢ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ | ಕ್ಯಾಂಟರ್‌-ಸ್ಕೂಟರ್‌ ಅಪಘಾತದಲ್ಲಿ ತಂದೆ-ಮಗ ಮೃತ್ಯು, ತುಂಬಿದ ಕೆರೆಗೆ ನುಗ್ಗಿದ ಬಸ್‌, ಪ್ರಯಾಣಿಕರು ಪಾರು

Exit mobile version