Site icon Vistara News

Road Accident | ಸ್ಕೂಟರ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಖಾಸಗಿ ಬಸ್‌; ಮಗಳು ಸಾವು, ತಂದೆ ಗಂಭೀರ

karwar accident

ಕಾರವಾರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಬಿಣಗಾ ಬಳಿ ಖಾಸಗಿ ಬಸ್‌ವೊಂದು ಹಿಂದಿನಿಂದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತವಾದ (Road Accident) ಸ್ಥಳದಲ್ಲೇ ಮಗಳು ಮೃತಪಟ್ಟಿದ್ದು, ತಂದೆಗೆ ಗಂಭೀರ ಗಾಯಗಳಾಗಿವೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಲವಿಟಾ ಜಾರ್ಜ್ ಫರ್ನಾಂಡಿಸ್ (13) ಮೃತ ಬಾಲಕಿಯಾಗಿದ್ದಾಳೆ. ಬಾಲಕಿ ತಂದೆ ಜಾರ್ಜ್ ಫರ್ನಾಂಡಿಸ್‌ (41) ಅವರಿಗೆ ಗಂಭೀರ ಗಾಯಗಳಾಗಿವೆ. ಇವರು ಬಟ್ಟೆ ಖರೀದಿಸಲು ಸ್ಕೂಟರ್‌ನಲ್ಲಿ ಕಾರವಾರಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.

ಬೆಂಗಳೂರಿನಿಂದ ಕಾರವಾರಕ್ಕೆ ಬರುತ್ತಿದ್ದ ಸೀಬರ್ಡ್ ಬಸ್ ಬೈಕ್‌‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ವೇಗವಾಗಿದ್ದರಿಂದ ಸ್ಕೂಟರ್‌ ಕೆಳಕ್ಕೆ ರಭಸವಾಗಿ ಬಿದ್ದಿದೆ. ಬಿದ್ದ ಹೊಡೆತಕ್ಕೆ ಲವಿಟಾ ತಲೆಗೆ ಬಲವಾಗಿ ಹೊಡೆತ ಬಿದ್ದಿದ್ದು, ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.

ಗಂಭೀರವಾಗಿ ಗಾಯಗೊಂಡ ಬಾಲಕಿ ತಂದೆ ಜಾರ್ಜ್‌ರನ್ನು ಕಾರವಾರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರವಾರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Fire Accident‌ | ರಾತ್ರಿ ಪಾರ್ಟಿ ಮಾಡಿ ಗುಡಿಸಲಲ್ಲಿ ಮಲಗಿದ್ದಾಗ ಬೆಂಕಿ ಅವಘಡ; ಒಬ್ಬ ಸಜೀವ ದಹನ

Exit mobile version