Site icon Vistara News

Road accident | ರೋಡ್‌ ಹಂಪ್‌ ಗೊತ್ತಾಗದೆ ಹಾರಿ ಬಿದ್ದು ಟಾಟಾ ಏಸ್‌ಗೆ ಬಡಿದ ಸ್ಕೂಟರ್‌: ಇಬ್ಬರು ಸ್ಥಳದಲ್ಲೇ ಸಾವು

accident near arakalagoodu

ಹಾಸನ: ಬೈಕ್ ಹಾಗೂ ಟಾಟಾ ಏಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ (Road accident) ಸ್ಕೂಟರ್‌ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮಾದೀಹಳ್ಳಿ ಬಳಿ ನಡೆದ ಘಟನೆಯಲ್ಲಿ ಮೃತಪಟ್ಟವರನ್ನು ಪರಶುರಾಮ್ (45), ಕುಮಾರ್ (45) ಎಂದು ಗುರುತಿಸಲಾಗಿದೆ.

ಪರಶುರಾಮ್‌ ಮತ್ತು ಕುಮಾರ್‌ ಅವರು ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಸಿದ್ದಾಪುರ ಗ್ರಾಮದವರು. ಅವರು ಹಾಸನದ ಅರಕಲಗೂಡಿಗೆ ಹೋಗಿ ಮರಳಿ ಬರುವಾಗ ಮಾದೀಹಳ್ಳಿಯಲ್ಲಿ ಈ ದುರಂತ ಸಂಭವಿಸಿದೆ.

ಮಾದೀಹಳ್ಳಿಯಲ್ಲಿ ಒಂದು ರೋಡ್‌ ಹಂಪ್‌ ಇದ್ದು, ಇದಕ್ಕೆ ಬಿಳಿ ಬಣ್ಣ ಬಳಿಯದೆ ಇರುವುದರಿಂದ ಈ ಭಾಗದಲ್ಲಿ ಅಪರೂಪಕ್ಕೆ ಓಡಾಡುವವರಿಗೆ ಕಾಣುವುದಿಲ್ಲ. ಪರಶುರಾಮ್‌ ಮತ್ತು ಕುಮಾರ್‌ ಅವರಿಗೆ ಹಂಪ್‌ನ ಅರಿವಿರಲಿಲ್ಲ ಅನಿಸುತ್ತದೆ. ಅವರು ಸ್ಕೂಟರನ್ನು ಓಡಿಸುತ್ತಿದ್ದಾಗ ಒಮ್ಮೆಗೇ ಹಂಪ್‌ ಮೇಲೆ ಹತ್ತಿಸಿದರು. ಆಗ ಹಂಪ್‌ನ ಹೊಡೆತಕ್ಕೆ ಸ್ಕೂಟರ್‌ ಹಾರಿಬಿದ್ದಿದೆ. ನಿಯಂತ್ರಣ ತಪ್ಪಿದ ಸ್ಕೂಟರ್‌ ಹೋಗಿ ಎದುರಿನಿಂದ ಬಂದ ಟಾಟಾ ಏಸ್‌ಗೆ ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಮೃತದೇಹಗಳು ಒಂದು ಕಡೆ ಬಿದ್ದಿದ್ದರೆ ಸ್ಕೂಟರ್‌ ಬಹಳಷ್ಟು ದೂರದಲ್ಲಿ ಬಿದ್ದಿದೆ.

ಅರಕಲಗೂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Serias Accident | ಯಾದಗಿರಿಯಲ್ಲಿ ಸರಣಿ ಅಪಘಾತ; ಕಾರಿನಲ್ಲಿದ್ದ ನಾಲ್ವರಿಗೆ ಗಂಭೀರ ಗಾಯ

Exit mobile version