ಬೀದರ್: ಬೈಕ್ ಸವಾರನೊಬ್ಬ ಓವರ್ ಸ್ಪೀಡ್ ಆಗಿ ಚಲಾಯಿಸಿ ಬಸ್ ಅನ್ನು ಓವರ್ ಟೇಕ್ ಮಾಡಿ ತಿರುವು ತೆಗೆದುಕೊಳ್ಳುವಾಗ ಸ್ಕಿಡ್ ಆಗಿದ್ದು, ಬಸ್ ಚಕ್ರಕ್ಕೆ (Road Accident) ಸಿಲುಕಿ ಮೃತಪಟ್ಟ ಘಟನೆ ಭಾಲ್ಕಿಯಲ್ಲಿ ನಡೆದಿದೆ. ಇದು ನಿರ್ಲಕ್ಷ್ಯ ಚಾಲನೆಯ ಪರಮಾವಧಿ ಎಂದು ಸಾರ್ವಜನಿಕವಾಗಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ.
ಭಾಲ್ಕಿ ಪಟ್ಟಣದಲ್ಲಿ ಈ ಅಪಘಾತ ಸಂಭವಿಸಿದ್ದು, ಅವಘಡದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 28 ವರ್ಷದ ಪ್ರಜೋತ್ ಶಿವಕುಮಾರ್ ವಂಕೆ ಮೃತ ಯುವಕ.
ಖಾಸಗಿ ಬಸ್‌ವೊಂದು ತಿರುವು ಪಡೆದುಕೊಳ್ಳುತ್ತಿದೆ. ಅದೇ ಸಂದರ್ಭದಲ್ಲಿ ವೇಗವಾಗಿ ಬಂದ ಬೈಕ್ ಅನ್ನು ಬೆಂಡ್ ಮಾಡಿ ತಿರುವು ಮಾಡಲು ಮುಂದಾಗಲಾಗಿದೆ. ಆದರೆ, ಬೈಕ್ ನಿಯಂತ್ರಣಕ್ಕೆ ಸಿಗದೆ ಸ್ಕಿಡ್ ಆಗಿ ಹಾಗೇ ನೆಲದಲ್ಲಿ ಉಜ್ಜಿಕೊಂಡು ಹೋಗಿದೆ. ಇದು ಬಸ್ ಚಾಲಕನ ಗಮನಕ್ಕೆ ಬಂದಿಲ್ಲ. ಹಾಗಾಗಿ ಸವಾರ ಚಕ್ರಕ್ಕೆ ಸಿಲುಕಿದ್ದಾನೆ. ಈ ದೃಶ್ಯವನ್ನು ಅಲ್ಲೇ ಪಕ್ಕದಲ್ಲಿ ನಡೆದುಹೋಗುತ್ತಿದ್ದ ವ್ಯಕ್ತಿಯೊಬ್ಬ ನೋಡಿ ತಲೆ ಮೇಲೆ ಕೈಹೊತ್ತುಕೊಂಡಿದ್ದಾನೆ. ಭಾಲ್ಕಿ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | New year 2023 | ನೂತನ ವರ್ಷದ ಆರಂಭದಲ್ಲೇ ನಡೆಯಲಿದೆ ವಿವಿಧ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ