ಚಿಕ್ಕಬಳ್ಳಾಪುರ/ ಹೊಸಕೋಟೆ : ಬಸ್ ರಶ್ ಇದ್ದ ಕಾರಣ ಬಾಗಿಲ ಬಳಿ ನೇತಾಡುತ್ತಾ ನಿಂತಿದ್ದ ವಿದ್ಯಾರ್ಥಿನಿಯೊಬ್ಬಳು ಆಯತಪ್ಪಿ ಬಿದ್ದಿದ್ದಾಳೆ. ಚಿಕ್ಕಬಳ್ಳಾಪುರ ತಾಲೂಕಿನ ಜಾತವಾರ ಹೊಸಹಳ್ಳಿ ಗೇಟ್ ಘಟನೆ ನಡೆದಿದೆ.
ಬಸ್‌ನಲ್ಲಿ ಜನ ತುಂಬಿದ್ದರಿಂದ ಫುಟ್ ಬೋರ್ಡ್ ಬಳಿ ವಿದ್ಯಾರ್ಥಿನಿ ನಿಂತಿದ್ದಳು. ಬಸ್ ಮುಂದೆ ಹೋಗುತ್ತಿದ್ದಂತೆ ಕೈನಲ್ಲಿ ಹಿಡಿದುಕೊಂಡಿದ್ದ ಸರಳಿನ ಮೇಲೆ ಹಿಡಿತ ತಪ್ಪಿತು. ಹೀಗಾಗಿ ಆಯತಪ್ಪಿ ನೆಲಕ್ಕೆ ಬಿದ್ದು ಕೂಡಲೇ ಮೇಲಕ್ಕೆ ಎದ್ದಿದ್ದಾಳೆ. ವಿದ್ಯಾರ್ಥಿನಿ ಬಿದ್ದಿದ್ದನ್ನು ಗಮನಿಸಿದ ಚಾಲಕ ಬಸ್ ನಿಲ್ಲಿಸಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಜಾತವಾರದಿಂದ ಚಿಕ್ಕಬಳ್ಳಾಪುರಕ್ಕೆ ಶಾಲೆಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಬಸ್ ಪೂರ್ತಿ ರಶ್ ಇರುವ ಕಾರಣ ಹರಸಾಹಸಪಟ್ಟು ನಿಂತಿದ್ದಳು. ಸ್ವಲ್ಪ ಯಾಮಾರಿದ್ದರೂ ಬಸ್ ಚಕ್ರಕ್ಕೆ ಸಿಲುಕಿಕೊಳ್ಳಬೇಕಾಗಿತ್ತು. ಈ ಎಲ್ಲ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆಯಿಡಿದಿದ್ದಾರೆ.
ಲಾರಿ ಹರಿದು ಸರ್ಕಾರಿ ಶಿಕ್ಷಕಿ ಛಿದ್ರ ಛಿದ್ರ
ಬೆಂಗಳೂರು ಗ್ರಾಮಾಂತರದ ಹೊಸಕೋಟೆ ತಾಲೂಕಿನ ದೇವನಗುಂದಿ ಕ್ರಾಸ್ ಬಳಿ ಚಲಿಸುತ್ತಿದ್ದ ಸ್ಕೂಟರ್‌ಗೆ ಲಾರಿ ಡಿಕ್ಕಿ ಹೊಡೆದಿದೆ. ಸ್ಕೂಟರ್‌ನಿಂದ ಕೆಳಗೆ ಬಿದ್ದ ಶಿಕ್ಷಕಿ ಮೇಲೆಯೇ ಲಾರಿ ಹರಿದಿದೆ. ವಾಗಟ ಗ್ರಾಮದ ಶಿಕ್ಷಕಿ ವೇದಾವತಿ (35) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಾಗಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ವೇದಾವತಿ ಕರ್ತವ್ಯ ನಿರ್ವಹಿಸಿದ್ದರು. ಶಾಲೆಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಈ ಅವಘಡ ನಡೆದಿದೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಶಿಕ್ಷಕಿಯ ಎರಡು ಕೈಗಳು ಕಟ್ ಆಗಿದ್ದು, ಛಿದ್ರ ಛಿಧ್ರವಾಗಿ ಮಾಂಸದ ತುಂಡುಗಳು ರಸ್ತೆಗೆ ಬಿದ್ದಿದ್ದವು. ಸ್ಥಳಕ್ಕೆ ಹೊಸಕೋಟೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ