Site icon Vistara News

Road Accident | ನಡೆದು ಹೋಗುತ್ತಿದ್ದ ವಿದ್ಯಾರ್ಥಿಗಳಿಬ್ಬರಿಗೆ ಕಾರು ಡಿಕ್ಕಿ: ಗಂಭೀರ ಗಾಯ

Car Accident sagara

ಸಾಗರ: ಸಾಗರ-ಆನಂದಪುರ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳಿಗೆ ಕಾರು ಡಿಕ್ಕಿ ಹೊಡೆದು (Road Accident) ಗಾಯಗೊಂಡ ಘಟನೆ ಪೊಲೀಸ್ ಠಾಣೆಯ ಮುಂಭಾಗದ ತಿರುವಿನಲ್ಲಿ ನಡೆದಿದೆ.

ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯರಿಬ್ಬರು ಶಾಲೆ ಮುಗಿಸಿ ತಮ್ಮ ಊರಾದ ಮೊದ್ಲೇಸರ ಕಡೆಗೆ ನಡೆದುಕೊಂಡು ಹೋಗುತಿದ್ದ ಸಂದರ್ಭದಲ್ಲಿ ಪೊಲೀಸ್ ಠಾಣೆ ಮುಂಭಾಗದ ತಿರುವಿನಲ್ಲಿ ಸಾಗರ ಕಡೆಯಿಂದ ಆನಂದಪುರ ಕಡೆಗೆ ಬರುತಿದ್ದ ಕಾರು ಮುಂಭಾಗದಿಂದ ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆದಿದೆ.

ಈ ವೇಳೆ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಆನಂದಪುರದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ | ಲಕ್ಷದ್ವೀಪ ಸಂಸದ ಮೊಹಮ್ಮದ್​ ಫೈಜಲ್​​ ಲೋಕಸಭೆಯಿಂದ ಅನರ್ಹ; 10 ವರ್ಷ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ

Exit mobile version