ಕಂಪ್ಲಿ (ಬಳ್ಳಾರಿ): ತಿರುಪತಿಗೆ ಹೋಗಿ ಹಿಂತಿರುಗುವ ವೇಳೆ ಕ್ರೂಸರ್ ಮತ್ತು ಲಾರಿ ಮಧ್ಯೆ ಅಪಘಾತ (Road Accident) ಸಂಭವಿಸಿ ಕಂಪ್ಲಿ ಪಟ್ಟಣದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಆಂಧ್ರಪ್ರದೇಶದ ವೈಎಸ್‌ಆರ್ ಜಿಲ್ಲೆಯ ಕೊಂಡಾಪುರ ಮಂಡಲದ ಏಟೂರು ಗ್ರಾಮದ ಬಳಿ ಸೋಮವಾರ ಬೆಳಿಗ್ಗೆ ಸಂಭವಿಸಿದೆ.
ಕ್ರೂಸರ್ ಮತ್ತು ಲಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಕ್ರೂಸರ್‌ನಲ್ಲಿದ್ದ 17 ಜನರಲ್ಲಿ ಕಂಪ್ಲಿಯ ಮಹಿಳೆ ಸೇರಿ ಏಳು ಜನ ಮೃತಪಟ್ಟಿದ್ದಾರೆ. ಗುತ್ತಿಗೆದಾರ ಜಿ.ಭಾಸ್ಕರರೆಡ್ಡಿ ಇವರ ಪತ್ನಿ ಲಕ್ಷ್ಮಿದೇವಿ (40) ಸ್ಥಳದಲ್ಲಿಯೇ ಮೃತಪಟ್ಟ ಮಹಿಳೆ.
ಇದನ್ನೂ ಓದಿ: Unique ID for doctors : ಎಲ್ಲ ವೈದ್ಯರಿಗೆ ವಿಶಿಷ್ಟ ಐಡಿ ಕಡ್ಡಾಯ, ಏನಿದು?
ಮೃತರ ಮಕ್ಕಳಾದ ಮೇಘನಾ ರೆಡ್ಡಿ (19), ಶಿಲ್ಪಾ ರೆಡ್ಡಿ (17) ಅವರು ಗಂಭೀರವಾಗಿ ಗಾಯಗೊಂಡಿದ್ದು ಅನಂತಪುರದ ಕೀಮ್ಸ್ ಸವೇರಾ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ. ಮೃತರ ಅಂತ್ಯಕ್ರಿಯೆಯು ವೈಎಸ್‌ಆರ್ ಜಿಲ್ಲೆಯ ಜಮ್ಮಲಮಡುಗು ಪಟ್ಟಣದಲ್ಲಿ ಜರುಗಿದೆ.