ವಿಜಯನಗರ/ಚಿಕ್ಕಮಗಳೂರು: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಗಾಳೆಮ್ಮನಗುಡಿ ಗ್ರಾಮದ ನರ್ಸರಿ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ಸವಾರ (Road Accident) ಸ್ಥಳದಲ್ಲಿಯೇ ಮೃತಪಪಟ್ಟಿರುವ ಘಟನೆ ನಡೆದಿದೆ. ಸದ್ಯ ಮೃತನ ಗುರುತು ಪತ್ತೆಯಾಗಿಲ್ಲ, ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಸ್ಥಳಕ್ಕೆ ಮರಿಯಮ್ಮನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.
ಬುಲೆರೋ ಪಿಕಪ್ ವಾಹನ ಡಿಕ್ಕಿ ಪಾದಚಾರಿ ಸಾವು
ಚಿಕ್ಕಮಗಳೂರಿನ ಉದ್ದೇಬೋರನಹಳ್ಳಿ ಗ್ರಾಮದಲ್ಲಿ ಅತಿ ವೇಗವಾಗಿ ಬಂದ ಬುಲೆರೋ ಪಿಕಪ್ ವಾಹನವು ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ನೇಮರಾಜ (55) ಮೃತದುರ್ದೈವಿ.
ಇದನ್ನೂ ಓದಿ: Road Accident: ಅತಿ ವೇಗ ತಂದ ಆಪತ್ತು; ನೆಲಮಂಗಲದಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಒಬ್ಬನ ಮೃತ್ಯು, ಮತ್ತಿಬ್ಬರು ಗಂಭೀರ
ನೇಮರಾಜ ಉದ್ದೇಬೋರನಹಳ್ಳಿ ನಿವಾಸಿ ಆಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.