Site icon Vistara News

Road Accident: ಅತಿ ವೇಗ ಚಾಲನೆ ತಂದ ಆಪತ್ತು; ಹಾರಿ ಹೋಯ್ತು ಬೈಕ್‌ ಸವಾರನ ಪ್ರಾಣಪಕ್ಷಿ

#image_title

ಚಿಕ್ಕಮಗಳೂರು: ಅತಿ ವೇಗ ಚಾಲನೆಯಿಂದಾಗಿ (Road Accident) ಬೈಕ್‌ ಸವಾರನೊಬ್ಬನ ಪ್ರಾಣಪಕ್ಷಿ ಹಾರಿಹೋಗಿದೆ. ಇಲ್ಲಿನ ಬಾರ್ ಲೈನ್ ರಸ್ತೆಯ ಮಂಗಳ ಹೋಟೆಲ್‌ ಮುಂಭಾಗ ವೇಗವಾಗಿ ಬಂದ ಬೈಕ್‌ ಸವಾರ ಶ್ರೇಯಸ್ (22) ನೇರವಾಗಿ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ತಲೆಗೆ ಗಂಭೀರವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಭೀಕರ ಅಪಘಾತದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಅತಿ ವೇಗವೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ. ಬೈಕ್ ಚಲಾಯಿಸುತ್ತಿದ್ದ ಶ್ರೇಯಸ್‌ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದರೆ ಇತ್ತ ಹಿಂಬದಿ ಸವಾರನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶ್ರೇಯಸ್‌ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಚಿಕ್ಕಮಗಳೂರು ನಗರದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಬೈಕ್‌ ಸವಾರ ಶ್ರೇಯಸ್‌

ಕಾರವಾರದಲ್ಲಿ ಸ್ಕೂಟಿ-ಕಾರು ನಡುವೆ ಮುಖಾಮುಖಿ ಡಿಕ್ಕಿ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ರಾಷ್ಟ್ರೀಯ ಹೆದ್ದಾರಿ 66ರ ಸರ್ವಿಸ್ ರಸ್ತೆಯಲ್ಲಿ ಸ್ಕೂಟಿ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ ಆಗಿದೆ. ಪರಿಣಾಮ ಸ್ಕೂಟಿ ಸವಾರ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ಸೋಮಶೇಖರ ನಾಯ್ಕ(57) ಗಾಯಗೊಂಡ ಸ್ಕೂಟಿ ಸವಾರ.

ಇದನ್ನೂ ಓದಿ: Leopard Trapped: ಇಲ್ಲಿ ಚಿರತೆಗಳು ಮುದುಡಿ ಮಲಗಿವೆ, ಆಕಳ ಕರುವಿನ ನೋಟಕ್ಕೇ ಗಡಗಡ ನಡುಗುತ್ತಿವೆ.. ಏನಿದು ವಿಚಿತ್ರ!?

ಸೋಮಶೇಖರ ಹೊನ್ನಾವರ ತಾಲೂಕಿನ ನಿವಾಸಿ ಆಗಿದ್ದು, ಫ್ಲೈಓವರ್ ಕಡೆಯಿಂದ ನಗರದತ್ತ ಆಗಮಿಸುತ್ತಿದ್ದರು. ಏಕಾಏಕಿ ಸರ್ವಿಸ್ ರಸ್ತೆಗೆ ಸ್ಕೂಟಿ ನುಗ್ಗಿಸಿದ ಪರಿಣಾಮ ಗೋವಾ ಕಡೆಯಿಂದ ಅರಗಾದತ್ತ ತೆರಳುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಸೋಮಶೇಖರ ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Exit mobile version