ಕಾರವಾರ: ಭಾರೀ ಗಾತ್ರದ ಸರಕು ಹೊತ್ತು ಸಾಗುತ್ತಿದ್ದ ಲಾರಿಯೊಂದು ತಿರುವು ತೆಗೆದುಕೊಳ್ಳುತ್ತಿದ್ದ ವೇಳೆ ಲೈಟ್ ಕಂಬ ತಾಗಿ ಕಾರಿನ ಮೇಲೆ ಬಿದ್ದ (Road Accident) ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.
ನಗರದ ರಾಷ್ಟ್ರೀಯ ಹೆದ್ದಾರಿ 66ಕ್ಕೆ ನಿರ್ಮಿಸಲಾದ ಫ್ಲೈಓವರ್ ಮೇಲಿಂದ ಆಗಮಿಸುತ್ತಿದ್ದ ಲಾರಿ ಟನಲ್ ಬಳಿ ಬೈತಖೋಲದತ್ತ ತೆರಳಲು ಬಲಕ್ಕೆ ತಿರುವು ತೆಗೆದುಕೊಂಡಿದೆ. ಈ ವೇಳೆ ಫ್ಲೈಓವರ್ ಮೇಲಿದ್ದ ಲೈಟಿನ ಕಂಬಕ್ಕೆ ಲಾರಿಯ ಮೇಲಿದ್ದ ಸರಕು ಬಡಿದಿದ್ದು, ಪರಿಣಾಮ ಹೆದ್ದಾರಿಯ ಸರ್ವಿಸ್ ರಸ್ತೆ ಮೇಲೆ ಟನಲ್‌ನತ್ತ ಆಗಮಿಸುತ್ತಿದ್ದ ಕಾರಿನ ಮೇಲೆ ಲೈಟ್ ಕಂಬ ಮುರಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಕಾರಿನ ಚಾವಣಿ ಜಖಂ ಆಗಿದೆ. ಸ್ಥಳಕ್ಕೆ ಕಾರವಾರ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಲಾರಿ ಚಾಲಕನ ಅಜಾಕರೂಕತೆಯಿಂದಲೇ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಕ್ರೇನ್ ಕರೆಯಿಸಿ ಬಿದ್ದಿದ್ದ ಲೈಟ್ ಕಂಬವನ್ನು ತೆರವುಗೊಳಿಸುವ ಮೂಲಕ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಘಟನೆ ಸಂಬಂಧ ಕಾರವಾರ ಸಂಚಾರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: Yash-Radhika: ಪ್ರೇಮಿಗಳ ದಿನದಂದು ಉದಯಪುರಕ್ಕೆ ಹಾರಿದ ಯಶ್-ರಾಧಿಕಾ; ಕ್ಯೂಟ್ ಫೋಟೊ ಹಂಚಿಕೊಂಡ ನಟಿ