Site icon Vistara News

Road Accident : ಭೀಕರ ಅಪಘಾತ; ನವರಾತ್ರಿ ಪೂಜೆಗೆ ಹೋದ ಮಹಿಳೆಯರು ಮಸಣ ಸೇರಿದರು

Road accident

ಬಾಗಲಕೋಟೆ/ಭಟ್ಕಳ: ಪ್ರತ್ಯೇಕ ಕಡೆಗಳಲ್ಲಿ ರಸ್ತೆ ಅಪಘಾತಗಳು (Road Accident) ಸಂಭವಿಸಿದ್ದು, ಮೂವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ರಕ್ಕಸಗಿಯಲ್ಲಿ ಭೀಕರ ಅಪಘಾತ ನಡೆದಿದೆ. ಅಪಘಾತದಲ್ಲಿ ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

Rail silp in kopala

ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಮಾರಲದಿನ್ನಿ ಎಲ್‌ಟಿ ನಿವಾಸಿಗಳಾದ ಸೀತಮ್ಮ ರಾಮಪ್ಪ (60), ಗಿರಿಯಮ್ಮ ರಾಠೋಡ(55) ಮೃತ ದುರ್ದೈವಿಗಳು. ನವರಾತ್ರಿ ಹಿನ್ನೆಲೆ ಗುಳೇದಗುಡ್ಡಲ್ಲಿ ಪೂಜೆಗಾಗಿ ಟಾಟಾ ಏಸ್‌ ವಾಹನದಲ್ಲಿ 10ಕ್ಕೂ ಹೆಚ್ಚು ಮಂದಿ ಹೋಗುತ್ತಿದ್ದರು. ಈ ವೇಳೆ ಬಾಗಲಕೋಟೆಯಿಂದ ಕೊಪ್ಪಳಕ್ಕೆ ಹೊರಟಿದ್ದ ಕ್ರೆಟಾ ಕಾರು ನಡುವೆ ಡಿಕ್ಕಿಯಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಟಾಟಾಏಸ್‌ ವಾಹನವೇ ಛಿದ್ರಗೊಂಡಿದೆ. ಕಾರು ಮುಂಭಾಗವು ಸಂಪೂರ್ಣ ಹಾನಿಯಾಗಿದೆ.

Rail silp in kopala

ಅಪಘಾತ ನಡೆಯುತ್ತಿದ್ದಂತೆ ಸ್ಥಳೀಯರು ಸಹಾಯಕ್ಕೆ ಧಾವಿಸಿ, ಟಾಟಾಏಸ್‌ನಲ್ಲಿ ಸಿಲುಕಿದವರನ್ನು ರಕ್ಷಿಸಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಮೀನಗಡ ಪೊಲೀಸರು, ಗಾಯಾಳುಗಳನ್ನು ಬಾಗಲಕೋಟೆ ಆಸ್ಪತ್ರೆಗೆ ರವಾನಿಸಿದ್ದಾರೆ. ಕಾರಿನಲ್ಲಿದ್ದ ಚಾಲಕನಿಗೂ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ : Murder Case : ಅನೈತಿಕ ಸಂಬಂಧಕ್ಕೆ ಬಲಿಯಾದ ಕೂಲಿಕಾರ

ಕಾರು-ಲಾರಿ ನಡುವೆ ಅಪಘಾತ, ಮಹಿಳೆ ಸಾವು

ಉತ್ತರಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣ ರಾಷ್ಟ್ರೀಯ ಹೆದ್ದಾರಿ 66ರ ಬೈಪಾಸ್ ಬ್ರಿಡ್ಜ್ ಬಳಿ ಕಾರು ಹಾಗೂ ಲಾರಿ ನಡುವೆ ಭೀಕರ‌ ಅಪಘಾತ ನಡೆದಿದೆ. ಘಟನೆಯಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದರೆ, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ರೀಟಾ ಡಿಸೋಜಾ (37) ಮೃತ ದುರ್ದೈವಿ.

Rail silp in kopala

ಉಡುಪಿಯಿಂದ ಗೋವಾ ತೆರಳುತ್ತಿದ್ದ ವೇಳೆ ಈ ಅವಘಡ ನಡೆದಿದೆ. ಇಬ್ಬರು ಗಾಯಾಳನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಭಟ್ಕಳ‌ ಶಹರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹಳಿ ತಪ್ಪಿದ ರೈಲು!

ಕೊಪ್ಪಳ ಜಿಲ್ಲೆಯ ಕಾರಟಗಿ ರೈಲ್ವೆ ಸ್ಟೇಷನ್ ಬಳಿ ರೈಲೊಂದು ಹಳಿ ತಪ್ಪಿದೆ. ಯಶವಂತಪುರದಿಂದ ಕಾರಟಗಿಗೆ ಬರುತ್ತಿದ್ದಾಗ ಸ್ಟೇಷನ್ ಸುಮಾರು 300 ಮೀಟರ್ ಅಂತರವಿದ್ದಾಗ ಹಳಿ ತಪ್ಪಿದೆ. ರೈಲು ವೇಗವು ಕಡಿಮೆ ಇದ್ದ ಪರಿಣಾಮ ದೊಡ್ಡ ಅನಾಹುತವೊಂದು ತಪ್ಪಿದೆ. ಸ್ಥಳಕ್ಕೆ ರೈಲ್ವೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Rail silp in kopala

ಡೇಂಜರ್ಸ್‌ ಸರ್ಕಾರಿ ಬಸ್‌!

ಚಿಕ್ಕಮಗಳೂರು-ಆಲ್ದೂರು ಮಾರ್ಗದ ಲೋಕಲ್ ಬಸ್ ಅವಾಂತರಕ್ಕೆ ಜನರು ಕಿಡಿಕಾರಿದ್ದಾರೆ. ಸರ್ಕಾರಿ ಬಸ್ಸಿನ ಚಕ್ರಕ್ಕೆ ನಟ್‌ಗಳೇ ಇಲ್ಲ. 8 ನಟ್ ಇರಬೇಕಾದ ಜಾಗದಲ್ಲಿ 3 ನಟ್ ಅಷ್ಟೆ ಇದ್ದರೂ, ಚಾಲಕ ಬಸ್ಸನ್ನು ಓಡಿಸುತ್ತಿದ್ದಾರೆ. ನಿತ್ಯ ಶಾಲಾ-ಕಾಲೇಜಿಗೆ ನೂರಾರು ಮಕ್ಕಳು ಓಡಾಡುತ್ತಾರೆ. ಏನಾದರು ಹೆಚ್ಚು ಕಡಿಮೆಯಾದರೆ ಜವಾಬ್ದಾರಿ ಯಾರು. ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version