Site icon Vistara News

Road Accident : ಭೀಕರ ಅಪಘಾತದಲ್ಲಿ ಅಮ್ಮ-ಮಗ ಸೇರಿ ಮೂವರು ದಾರುಣ ಸಾವು

Lorry hit sctoor

ತುಮಕೂರು: ಇಲ್ಲಿನ ಕೊರಟಗೆರೆ ತಾಲೂಕಿನ ಅರಸಾಪುರ ಗೇಟ್ ಬಳಿ ದ್ವಿಚಕ್ರ ವಾಹನ ಮತ್ತು ಲಾರಿ ನಡುವೆ (Road Accident) ಡಿಕ್ಕಿಯಾಗಿದ್ದು, ಮೂವರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಅನಿತಾ (40), ಬಾಲಾಜಿ (18), ಪವನ್ (20) ಮೃತ ದುರ್ದೈವಿಗಳು.

ಒಂದೇ ಕುಟುಂಬದವರು ಮೂವರು ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ನಡೆದಿದೆ. ಮಧುಗಿರಿ ಮೂಲದ ವೀರೇನಹಳ್ಳಿ ತಾಂಡದ ವಾಸಿಗಳಾಗಿದ್ದು, ತಾಯಿ, ಮಗ ಹಾಗೂ ಅಣ್ಣನ ಮಗ ದುರಂತ ಸಾವು ಕಂಡಿದ್ದಾರೆ. ಮಧುಗಿರಿಯಿಂದ ಗೌರಿಬಿದನೂರು ಕಡೆಗೆ ಹೋಗುವಾಗ ಲಾರಿ ಡಿಕ್ಕಿ ಹೊಡೆದ ಪರಿಣಾಮ ಚಕ್ರದಡಿ ಸಿಲುಕಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇತ್ತ ಅಪಘಾತ ನಡೆಯುತ್ತಿದ್ದಂತೆ ಸ್ಥಳದಿಂದ ಲಾರಿ ಚಾಲಕ ಪರಾರಿ ಆಗಿದ್ದಾನೆ. ಘಟನಾ ಸ್ಥಳಕ್ಕೆ ಕೊರಟಗೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕೊರಟಗೆರೆ ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಅಪಘಾತದ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿ ಆಗಿರುವ ಚಾಲಕನಿಗೆ ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: Actor Nagabhushana: ನಾಗಭೂಷಣ ಕಾರು ಅಪಘಾತ; ಸ್ಟೇಷನ್‌ ಬೇಲ್‌ ಮೇಲೆ ಬಿಡುಗಡೆ!

ರೈಲಿಗೆ ತಲೆಕೊಟ್ಟು ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ತುಮಕೂರು: ಸಾಲಬಾಧೆಗೆ ಬೇಸತ್ತು ಒಂದೇ ಕುಟುಂಬದ ಮೂವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ (Self Harming) ಶರಣಾಗಿದ್ದಾರೆ. ತುಮಕೂರಿನ (Tumkur News) ಪಂಡಿತನಹಳ್ಳಿ ರೈಲ್ವೆ ಹಳಿ ಬಳಿ ರೈಲಿಗೆ ಸಿಲುಕಿ ತಂದೆ, ತಾಯಿ, ಮಗಳು ಮೃತಪಟ್ಟಿದ್ದಾರೆ. ಸಿದ್ದಗಂಗಯ್ಯ (62), ಸುನಂದಮ್ಮ, ಗೀತಾ ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು.

ತುಮಕೂರಿನ ಮರಳೂರು ನಿವಾಸಿಯಾಗಿದ್ದ ಸಿದ್ದಗಂಗಯ್ಯ ಕಳೆದ ಎರಡು ವರ್ಷಗಳ ಹಿಂದೆ ಕೆಇಬಿಯಲ್ಲಿ ನಿವೃತ್ತಿ ಹೊಂದಿದ್ದರು. ಸಾಕಷ್ಟು ಸಾಲ ಮಾಡಿಕೊಂಡಿದ್ದ ಸಿದ್ದಗಂಗಯ್ಯ, ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಕೆ.ಸಿ. ಜನರಲ್ ಆಸ್ಪತ್ರೆ ಬಳಿ ಟೀ ಶಾಪ್ ಇಟ್ಟುಕೊಂಡು ಜೀವ ಸಾಗಿಸುತ್ತಿದ್ದರು.

ಇದನ್ನೂ ಓದಿ: ವಿಸ್ತಾರ Explainer: Disease X: ಏನಿದು ʼಎಕ್ಸ್‌ʼ ಸೋಂಕು? 5 ಕೋಟಿ ಜನರ ಬಲಿ ತೆಗೆದುಕೊಳ್ಳಲಿದೆಯಾ?

ಆದರೆ ಸಾಲಗಾರರ ಕಾಟಕ್ಕೆ ಬೇಸತ್ತು ಇಡೀ ಕುಟುಂಬ ಸೋಮವಾರ ಬೆಳಗಿನ ಜಾವವೇ ಆಟೋದಲ್ಲಿ ಪಂಡಿತನಹಳ್ಳಿ ರೈಲ್ವೆ ಬಳಿ ಬಂದಿದ್ದಾರೆ. ಬಳಿಕ ರೈಲ್ವೆಗೆ ಹಳಿ ಮೇಲೆ ಅಡ್ಡಲಾಗಿ ಮಲಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ರೈಲು ಹತ್ತಿದ ಪರಿಣಾಮ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಸ್ಥಳೀಯರು ಮೃತದೇಹವನ್ನು ಕಂಡು ಕೂಡಲೇ ಯಶವಂತಪುರ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತದೇಹಗಳನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದಾರೆ. ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version