Site icon Vistara News

Road Accident | ಬ್ರೇಕ್ ಫೇಲ್ ಆದ ಟ್ರ್ಯಾಕ್ಟರ್; ಅಪಘಾತದಲ್ಲಿ ಚಾಲಕ ಸಾವು

road accident

ಧಾರವಾಡ: ಇಲ್ಲಿನ ಕಲಘಟಗಿ ರಸ್ತೆಯ ಎಸ್‌ಡಿಎಂ ಕಾಲೇಜು ಬಳಿ ಟ್ರ್ಯಾಕ್ಟರ್‌ವೊಂದರ ಬ್ರೇಕ್‌ ಫೇಲ್‌ ಆಗಿದ್ದು, ಅಪಘಾತದಲ್ಲಿ (Road Accident) ತೀವ್ರ ಗಾಯಗೊಂಡ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮಹೇಶ್ (60) ಮೃತಪಟ್ಟ ಟ್ರ್ಯಾಕ್ಟರ್ ಚಾಲಕ.

ಜೆಸಿಬಿ ಸಹಾಯದಿಂದ ಟ್ರ್ಯಾಕ್ಟರ್‌ ಮೇಲಕ್ಕೆ ಎತ್ತಿರುವ ಚಿತ್ರಣ

ಧಾರವಾಡದ ಹಾವೇರಿ ಪೇಟೆಯ ನಿವಾಸಿಯಾಗಿದ್ದ ಚಾಲಕ ಮಹೇಶ್, ಟ್ರ್ಯಾಕ್ಟರ್‌ನಲ್ಲಿ ಜಲ್ಲಿಕಲ್ಲು ಮತ್ತು ಮರಳು ಸಾಗಿಸುತ್ತಿದ್ದರು. ಈ ವೇಳೆ ಟ್ರ್ಯಾಕ್ಟರ್‌ ಬ್ರೇಕ್‌ ಫೇಲ್‌ ಆಗಿದ್ದು, ಪಕ್ಕದಲ್ಲಿದ್ದ ಚರಂಡಿಗೆ ಇಳಿದಿದೆ. ಮಧ್ಯದಲ್ಲಿ ಸಿಲುಕಿದ ಮಹೇಶ್‌ಗೆ ತೀವ್ರ ಪೆಟ್ಟಾಗಿದ್ದು ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ವಿದ್ಯಾಗಿರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಜೆಸಿಬಿ ಸಹಾಯದಿಂದ ಟ್ರ್ಯಾಕ್ಟರ್‌ ಅನ್ನು ಮೇಲಕ್ಕೆ ಎತ್ತಿದ್ದು, ಟ್ರ್ಯಾಕ್ಟರ್‌ನಡಿ ಸಿಲುಕಿದ್ದ ಮಹೇಶ್‌ ಮೃತದೇಹವನ್ನು ಹೊರತೆಗೆದು ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ | Mangalore Blast | ನನ್ನ ಮಗ ಪ್ರತಿಭಾವಂತ, ನಿನ್ನೆ ಅವನ ಹುಟ್ಟುಹಬ್ಬವಿತ್ತು ಎಂದು ಕಣ್ಣೀರಿಟ್ಟ ಪ್ರೇಮ್‌ ರಾಜ್‌ ತಾಯಿ

Exit mobile version