Site icon Vistara News

Road Accident | ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೃದ್ಧೆಗೆ ಲಾರಿ ಡಿಕ್ಕಿ; ಗಂಭೀರ ಗಾಯ

road accident

ಆನೇಕಲ್: ಇಲ್ಲಿನ ಆನೇಕಲ್ ತಾಲೂಕಿನ ಮುಗಳೂರಿನಲ್ಲಿ 80ರ ವಯೋವೃದ್ಧೆಯ ಮೇಲೆ ಲಾರಿಯೊಂದು ಹರಿದಿದ್ದು, ಗಂಭೀರ ಗಾಯಗೊಂಡಿರುವ (Road Accident) ಘಟನೆ ನಡೆದಿದೆ.

ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೃದ್ಧೆ ಲಕ್ಷ್ಮೀದೇವಮ್ಮ (80) ಎಂಬುವವರಿಗೆ ಲಾರಿಯೊಂದು ಹಿಂದಿನಿಂದ ಬಂದು ಗುದ್ದಿದ್ದು ಎರಡು ಕಾಲುಗಳಿಗೆ ಗಂಭೀರ ಗಾಯವಾಗಿದೆ. ಘಟನೆಯಿಂದ ಆಕ್ರೋಶಗೊಂಡ ಜನರು ಲಾರಿ ಚಾಲಕನಿಗೆ ಧರ್ಮದೇಟು ನೀಡಿದ್ದಾರೆ.

ರಸ್ತೆಯಲ್ಲಿ ಲಕ್ಷ್ಮೀದೇವಮ್ಮ ನಡೆದುಕೊಂಡು ಹೋಗುತ್ತಿದ್ದ ವೇಳೆ ಚಾಲಕ ಲಾರಿಯನ್ನು ರಿವರ್ಸ್‌ ತೆಗೆದುಕೊಂಡಿದ್ದು, ಆಗ ಡಿಕ್ಕಿ ಹೊಡೆದಿದೆ. ತೀವ್ರ ರಕ್ತಸ್ರಾವಗೊಂಡ ಲಕ್ಷ್ಮೀದೇವಿಯವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯರು ಸೇರಿ ಚಾಲಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಸರ್ಜಾಪುರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ | Naked body found | ಲಾಡ್ಜ್‌ನಲ್ಲಿ ನಗ್ನ ಸ್ಥಿತಿಯಲ್ಲಿ ಪುರುಷನ ಶವ ಪತ್ತೆ: ರೂಮಿಗೆ ಬಂದಿದ್ದ ಆ ಮಹಿಳೆ ಯಾರು?

Exit mobile version