Site icon Vistara News

Road Accident: ದಾವಣಗೆರೆ ಸಮೀಪ ಬೈಕ್‌ಗೆ ಬಸ್ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು

Road Accident

#image_title

ದಾವಣಗೆರೆ: ತಾಲೂಕಿನ ಮದಾಪುರ ಕ್ರಾಸ್ ಬಳಿ ಬೈಕ್‌ಗೆ ಬಸ್ ಡಿಕ್ಕಿಯಾಗಿ (Road Accident) ಇಬ್ಬರು ಸವಾರರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ. ವಿಜಯ್ ನಾಯ್ಕ್ (30), ಪೂರ್ಯಾ ನಾಯ್ಕ್ (35) ಮೃತ ಸವಾರರು.

ಭದ್ರಾವತಿ ಕಡೆ ಹೋಗುತ್ತಿದ್ದ ಬೈಕ್ ಸವಾರರಿಗೆ ಹಿಂಬದಿಯಿಂದ ಖಾಸಗಿ ಬಸ್ ಡಿಕ್ಕಿ ಹೊಡೆದಿದ್ದರಿಂದ ದುರಂತ ಸಂಭವಿಸಿದೆ. ಅಪಘಾತದ ಬಳಿ ಬಸ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಮೃತರು ಶಿವಮೊಗ್ಗದ ವಿನೋಭನಗರದ ನಿವಾಸಿಗಳಾಗಿದ್ದಾರೆ. ಸ್ಥಳಕ್ಕೆ ಹದಡಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ | Suicide case : ಕೆಎಎಸ್‌ ಅಧಿಕಾರಿ ರೇಷ್ಮಾ ತಾಳಿಕೋಟಿ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ನೇಣು ಬಿಗಿದುಕೊಂಡು 13 ವರ್ಷದ ಬಾಲಕ ಆತ್ಮಹತ್ಯೆ

ಮಂಗಳೂರು: ಮರಕ್ಕೆ ನೇಣುಬಿಗಿದುಕೊಂಡು 13 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವುದು ಮಂಗಳೂರು ಹೊರವಲಯದ ಸುರತ್ಕಲ್ ಬಳಿ ನಡೆದಿದೆ. ಕುತ್ತೆತ್ತೂರು ಗ್ರಾಮದ ಬಜಾವು ಪಾದೆಮನೆ ನಿವಾಸಿ ಹರ್ಷಿತ್ ಮೃತ ಬಾಲಕ. ಆತ್ಮಹತ್ಯೆ ನಿಖರ ಕಾರಣ ತಿಳಿದುಬಂದಿಲ್ಲ. ಸುರತ್ಕಲ್‌ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Exit mobile version