Site icon Vistara News

Road Accident: ಹಾವೇರಿಯಲ್ಲಿ ರಸ್ತೆ ಅಪಘಾತ, ಮಹಿಳೆ ಸಾವು; ಬೆಂಗಳೂರಿನಲ್ಲಿ ವಾಹನ ಸವಾರರು ಪವಾಡಸದೃಶ ಪಾರು

Woman dies in road accident in Haveri and Motorist escapes unhurt in Bengaluru

Woman dies in road accident in Haveri and Motorist escapes unhurt in Bengaluru

ಹಾವೇರಿ/ಬೆಂಗಳೂರು: ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಸೋಮಗಾರ ಕ್ರಾಸ್ ಬಳಿ ಟಾಟಾ ಏಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ (Road Accident) ಹೊಡೆದಿದೆ. ಪರಿಣಾಮ ಟಾಟಾ ಏಸ್‌ನಲ್ಲಿದ್ದ ಮಹಿಳೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.

ಶಂಶಾದ ಬೇಗಂ (50) ಮೃತ ದುರ್ದೈವಿ. ಅಪಘಾತದಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದ್ದರೆ, ನಾಲ್ವರು ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ನೇರೆಗಲ ಗ್ರಾಮಕ್ಕೆ ಹೊರಟ್ಟಿದ್ದಾಗ ಈ ದುರಂತ ಸಂಭವಿಸಿದೆ.

ಆಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದ್ದು, ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಆಟೋ-ಬೈಕ್‌ ನಡುವೆ ಡಿಕ್ಕಿ

ವಾಹನ ಸವಾರರು ರಸ್ತೆಗಿಳಿಯುವ ಮುನ್ನ ಮೈ ಎಲ್ಲ ಕಣ್ಣಾಗಿ ಇರಬೇಕು. ಸ್ವಲ್ಪ ಮೈ ಮರೆತರೂ ಪ್ರಾಣಪಕ್ಷಿ ಹಾರಿ ಹೋಗುವುದು ಗ್ಯಾರೆಂಟಿ. ಬೆಂಗಳೂರಿನ ಇಂದಿರಾನಗರದ ಕೃಷ್ಣ ಟೆಂಪಲ್ ಜಂಕ್ಷನ್ ಬಳಿ ಆಟೋ- ಬೈಕ್‌ ನಡುವೆ ಅಪಘಾತ ಸಂಭವಿಸಿದೆ.

ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಅಪಘಾತದ ದೃಶ್ಯ

ಮುಖ್ಯರಸ್ತೆಯಲ್ಲಿ ವೇಗವಾಗಿ ಬರುತ್ತಿದ್ದ ಆಟೋಗೆ ಅಡ್ಡ ರಸ್ತೆಯಿಂದ ಮುಖ್ಯ ರಸ್ತೆಗೆ ಬೈಕ್‌ ಸವಾರನೊಬ್ಬ ಏಕಾಏಕಿ ಬಂದಿದ್ದಾನೆ. ಈ ವೇಳೆ ನಿಯಂತ್ರಣಕ್ಕೆ ಸಿಗದೆ ಆಟೋ ಹಾಗೂ ಬೈಕ್‌ ಡಿಕ್ಕಿ ಆಗಿದೆ. ಪರಿಣಾಮ ಆಟೋ ಒಳಗಿದ್ದ ಚಾಲಕ ರಸ್ತೆಗೆ ಬಿದ್ದರೆ, ಬೈಕ್‌ ಸವಾರನೂ ಪಲ್ಟಿ ಹೊಡೆದಿದ್ದಾನೆ.

ಇದನ್ನೂ ಓದಿ: Fire Accident: ವಿಜಯಪುರದಲ್ಲಿ ಗುಡಿಸಲಿಗೆ ತಗುಲಿದ ಆಕಸ್ಮಿಕ ಬೆಂಕಿ; ವೃದ್ಧ ದಂಪತಿ ಸಜೀವ ದಹನ

ಅಪಘಾತದ ಭಯಾನಕ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆ ಆಗಿದ್ದು, ಅದೃಷ್ಟವಶಾತ್‌ ಘಟನೆಯಲ್ಲಿ ಆಟೋ ಚಾಲಕ ಮತ್ತು ಬೈಕ್ ಸವಾರನಿಗೆ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜೀವನ್ ಬಿಮಾನಗರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅಡ್ಡರಸ್ತೆಯಿಂದ ಮುಖ್ಯರಸ್ತೆಗೆ ಬರುವ ಮುನ್ನ ವಾಹನ ಸವಾರರು ನೋಡಿಕೊಂಡು ವಾಹನ ಚಲಾಯಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಕೋಲಾರದಲ್ಲಿ ಸರಣಿ ಅಪಘಾತ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿದೆ. ಎರಡು ಕಾರು, ಬೈಕ್ ನಡುವೆ ಅಪಘಾತ ಆಗಿದ್ದು, ದ್ವಿಚಕ್ರ ಸವಾರನಿಗೆ ಕಾಲು ಮುರಿದಿದೆ. ಜತೆಗೆ ಕಾರುಗಳು ಹಾಗೂ ಬೈಕ್‌ ಜಖಂಗೊಂಡಿವೆ. ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೊಸಕೋಟೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ರೀಡಾ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version