ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕೆಎಸ್‌ಆರ್‌ಟಿಸಿ ಡಿಪೊ ಸಮೀಪ ಬೈಕ್‌ಗಳ ಮುಖಾಮುಖಿ ಡಿಕ್ಕಿಯಾಗಿದ್ದು, ಯುವಕನೊಬ್ಬ ಮೃತಪಟ್ಟಿದ್ದಾನೆ. ಈ ಸುದ್ದಿ ತಿಳಿದ ಯುವಕನ ಸ್ನೇಹಿತನಿಗೆ ಹೃದಯಾಘಾತವಾಗಿದೆ. ಪುಣೇದಹಳ್ಳಿಯ ಆನಂದ (30) ಮೃತ ದುರ್ದೈವಿ.
ಅಪಘಾತದಲ್ಲಿ ಆನಂದ್ ಮೃತಪಟ್ಟಿದ್ದರೆ, ಉಳಿದ ಮೂವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳು ಮೊಹಮ್ಮದ್ ಮಲ್ಲಿಕ್ (19) ಎಂಬಾತನನ್ನು ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನವರಾಜ್, ಜಾವೀದ್ ಎಂಬುವವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹುಟ್ಟು ಹುಬ್ಬಕ್ಕೆ ಕೇಕ್ ತರಲು ಹೊರಟಿದ್ದ ಸ್ನೇಹಿತರು
ಸ್ನೇಹಿತನ ಹುಟ್ಟುಹಬ್ಬಕ್ಕೆಂದು ಆನಂದ್, ನವರಾಜ್ ಕೇಕ್ ತರಲು ಹೊರಟಿದ್ದರು. ಶಿಕಾರಿಪುರದಿಂದ ಪುಣೇದಹಳ್ಳಿಗೆ ವಾಪಸ್ ಆಗುವಾಗ ಬೈಕ್‌ಗಳ ನಡುವೆ ಮುಖಾಮುಖಿಯಾಗಿದೆ. ಪರಿಣಾಮ ಆನಂದ್ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ. ಸ್ನೇಹಿತನ ಸಾವಿನ ಸುದ್ದಿ ಕೇಳಿ ಸಾಗರ್ ಎಂಬುವವರಿಗೆ ಹೃದಯಾಘಾತವಾಗಿದೆ. ಸದ್ಯ ಸಾಗರ್ ಸ್ಥಿತಿ ಚಿಂತಾಜನಕವಾಗಿದೆ.
ಇದನ್ನೂ ಓದಿ: Wife Missing : ಗಂಡ ಬಾತ್‌ರೂಂನಲ್ಲಿ, ಹೆಂಡತಿ ಪ್ರಿಯತಮನ ಜತೆಯಲ್ಲಿ ಪರಾರಿ!
ಡ್ರೈವರ್‌ಗೆ ತಲೆಸುತ್ತು! ಡಿವೈಡರ್‌ಗೆ ಡಿಕ್ಕಿಯಾಗಿ ಕಾರು ಪಲ್ಟಿ
ರಾಮನಗರ: ಇಲ್ಲಿನ ಮಾಯಾಗನಹಳ್ಳಿ ಬಳಿ ಕಾರು ಚಲಾಯಿಸುತ್ತಿದ್ದ ವೇಳೆ ಚಾಲಕನಿಗೆ ತಲೆ ಸುತ್ತಾಗಿದೆ. ಕಾರು ನಿಯಂತ್ರಣಕ್ಕೆ ಸಿಗದೆ ಡಿವೈಡರ್‌ಗೆ ಡಿಕ್ಕಿಯಾಗಿ (Road Accident) ಪಲ್ಟಿಯಾಗಿದೆ. ಅದೃಷ್ಟವಶಾತ್ ಕಾರಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚನ್ನಪಟ್ಟಣದಿಂದ ಬೆಂಗಳೂರಿಗೆ ನಾಲ್ವರು ತೆರಳುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಕಾರಲ್ಲಿ ಸಿಲುಕಿದವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಅಪಘಾತದಲ್ಲಿ ನಾಲ್ವರಿಗೆ ಸಣ್ಣ-ಪುಟ್ಟ ಗಾಯವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ರಾಮನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಧ್ಯೆ ರಸ್ತೆಯಲ್ಲಿ ಕಾರು ಪಲ್ಟಿಯಾದ ಕಾರಣದಿಂದಾಗಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಗದಗದಲ್ಲಿ ಚಲಿಸುತ್ತಿರುವಾಗಲೇ ಕಳಚಿದ ಸಾರಿಗೆ ಬಸ್ ಚಕ್ರ
ಗದಗ: ತಾಲೂಕಿನ ತಗಡೂರು ಹಾಗೂ ಹೊಂಬಳ ಗ್ರಾಮದ ಬಳಿ ಚಲಿಸುತ್ತಿದ್ದ ಸಾರಿಗೆ ಬಸ್‌ನ (Gadag Bus) ಚಕ್ರ ಕಳಚಿಕೊಂಡು ಬಿದ್ದಿದೆ. ಇದರಿಂದಾಗಿ ವಿದ್ಯಾರ್ಥಿಗಳು ಸೇರಿ ಬಸ್‌ನಲ್ಲಿದ್ದ 50ಕ್ಕೂ ಅಧಿಕ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ.
ಗದಗದಿಂದ ನರಗುಂದದ ಕಡೆ ಹೊರಟಿದ್ದ ವಾಯವ್ಯ ಕರ್ನಾಟಕ ಸಾರಿಗೆ ನಿಮಗದ ಬಸ್‌ನ ಹಿಂದಿನ ಚಕ್ರ ಕಳಚಿ ಬಿದ್ದಿದೆ. ಗದಗ ಡಿಪೋಗೆ ಸೇರಿದ ಬಸ್‌ನ ಚಕ್ರ ಕಳಚಿದ್ದು, ಅದೃಷ್ಟವಶಾತ್ ಯಾರಿಗೂ ಪ್ರಾಣಹಾನಿ, ಗಾಯ ಆಗಿಲ್ಲ. ಬಸ್ ಚಲಿಸುವಾಗಲೇ ಹಿಂದಿನ ಚಕ್ರ ಕಳಚಿ ಬಿದ್ದಿದ್ದು, ಬಸ್ ಚಾಲಕನು ಕೂಡಲೇ ಬಸ್ ನಿಲ್ಲಿಸಿದ ಕಾರಣ ಅಪಘಾತ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಕಾಲೇಜು ವಿದ್ಯಾರ್ಥಿಗಳು ಸೇರಿ 50ಕ್ಕೂ ಅಧಿಕ ಜನ ಬಸ್‌ನಲ್ಲಿ ಸಂಚರಿಸುತ್ತಿದ್ದರು. ಚಾಲಕನು ಏಕಾಏಕಿ ಬ್ರೇಕ್ ಹಾಕಿದ ಕಾರಣ ಜನ ಗಲಿಬಿಲಿಗೊಂಡರು. ಕೂಡಲೇ ಕೆಳಗಿಳಿದು ನೋಡಿದಾಗ ಬಸ್ ಚಕ್ರ ಬಿದ್ದಿದ್ದನ್ನು ಕಂಡು ಮತ್ತಷ್ಟು ಗಾಬರಿಗೊಂಡರು. ಅಬ್ಬಾ ಯಾವುದೇ ಅಪಾಯ ಎದುರಾಗಲಿಲ್ಲ ಎಂದು ನಿಟ್ಟುಸಿರುಬಿಟ್ಟರು.
ಶಕ್ತಿ ಯೋಜನೆಯನ್ನು ದೂರಿದ ಜನ
ಹೆಣ್ಣುಮಕ್ಕಳಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಸೌಲಭ್ಯ ನೀಡುವ ಶಕ್ತಿ ಯೋಜನೆಯಿಂದಾಗಿ ಸಾರಿಗೆ ಬಸ್‌ಗಳು ಇಂತಹ ದುಸ್ಥಿತಿ ತಲುಪಿವೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಕ್ತಿ ಯೋಜನೆಯಿಂದಾಗಿ ಬಸ್‌ಗಳಲ್ಲಿ ಹೆಚ್ಚಿನ ಜನ ಪ್ರಯಾಣಿಸುತ್ತಿದ್ದಾರೆ. ಇದರಿಂದಾಗಿ ಬಸ್‌ಗಳು ಹಾಳಾಗುತ್ತಿವೆ. ಬಸ್‌ಗಳ ಸರಿಯಾದ ನಿರ್ವಹಣೆಯೂ ಇಂತಹ ಪರಿಸ್ಥಿತಿ ಎದುರಾಗಲು ಕಾರಣವಾಗಿದೆ. ಮಾರ್ಗ ಮಧ್ಯದಲ್ಲೇ ಹೆಚ್ಚಿನ ಬಸ್‌ಗಳು ಕೆಟ್ಟುನಿಲ್ಲುತ್ತಿವೆ ಎಂದು ದೂರಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ