ಬೆಂಗಳೂರು: ಇಲ್ಲಿನ ಕುಮಾರಸ್ವಾಮಿ ಲೇಔಟ್‌ನ ವೈದ್ಯೆಯೊಬ್ಬರ ಮನೆಯಲ್ಲಿ ವೃದ್ಧೆಯ ಕೈ ಕಾಲು ಕಟ್ಟಿ ದರೋಡೆ (Robbery case) ಮಾಡಿದ ಘಟನೆ ನಡೆದಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕುಮಾರಸ್ವಾಮಿ ಲೇಔಟ್ ಪೊಲೀಸರು ತನಿಖೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ವೈದ್ಯೆಯ ಮನೆಯಲ್ಲಿ ಕಳ್ಳತನ ಮಾಡಿದ್ದು ಬೇರ‍್ಯಾರು ಅಲ್ಲ ಅದೇ ಮನೆಯ ಕೆಲಸದಾಕೆಯ ತಂದೆ ನಟರಾಜ್ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಮಗಳನ್ನು ನೋಡಲೆಂದು ಆಗಾಗ ನಟರಾಜ್ ವೈದ್ಯೆ ವೈಷ್ಣವಿ ಮನೆಗೆ ಬರುತ್ತಿದ್ದರು. ಈ ವೇಳೆ ಮನೆಯಲ್ಲಿ ವೈಷ್ಣವಿ ತಾಯಿ ಲಕ್ಷ್ಮಿ ಅವರು ಒಬ್ಬರೇ ಇರುವುದು ತಿಳಿದು ಬಂದಿತ್ತು.
ಇದಕ್ಕಾಗಿ ಮಾಸ್ಟರ್ ಪ್ಲಾನ್‌ವೊಂದನ್ನು ಮಾಡಿದ ನಟರಾಜ್, ದರೋಡೆ ಮಾಡಲು ನಾಲ್ವರನ್ನು ಒಟ್ಟುಗೂಡಿಸಿಕೊಂಡು ಕಳೆದ ಜನವರಿ 3ರಂದು ಕಳ್ಳತನ ಎಸಗಿದ್ದ. ವೈದ್ಯೆ ವೈಷ್ಣವಿ ಕ್ಲಿನಿಕ್‌ಗೆ ಹೋಗಿದ್ದು ತಿಳಿಯುತ್ತಿದ್ದಂತೆ ಮನೆಗೆ ಎಂಟ್ರಿ ಕೊಟ್ಟವರೆ ವೃದ್ಧೆ ಲಕ್ಷ್ಮಿಯ ಕೈ ಕಾಲು ಕಟ್ಟಿ, ಬಾಯಿಗೆ ಪ್ಲಾಸ್ಟರ್ ಹಾಕಿದ್ದಾನೆ. ಬಳಿಕ ಮನೆಯಲ್ಲಿದ್ದ 4ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಮೂರೂವರೆ ಲಕ್ಷ ನಗದು ದೋಚಿ ಪರಾರಿ ಆಗಿದ್ದರು.
ತಂದೆಯ ಕೃತ್ಯಕ್ಕೆ ಮಗಳು ಶಾಕ್
ತಂದೆ ಕೃತ್ಯ ಕೇಳಿ ಮಗಳಿಗೂ ಶಾಕ್ ಆಗಿದೆ. ಆರೋಪಿಯ ಮಗಳಿಗೂ ಕೂಡ ಕೃತ್ಯದ ಬಗ್ಗೆ ಗೊತ್ತಿರಲಿಲ್ಲವಂತೆ. ತಂದೆ ನಡೆಸಿದ ಕೃತ್ಯಕ್ಕೆ ಮನೆಕೆಲಸದಾಕೆಯು ಬೇಸರ ವ್ಯಕ್ತಪಡಿಸಿದ್ದಾಳೆ. ಸದ್ಯ ಆರೋಪಿಗಳನ್ನು ಬಂಧಿಸಿದ್ದು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ | Santro Ravi case | ಸ್ಯಾಂಟ್ರೋ ರವಿ ಪತ್ತೆಗಾಗಿ ಮೈಸೂರು, ಬೆಂಗಳೂರು ಪೊಲೀಸರಿಂದ 6 ತಂಡಗಳ ರಚನೆ, ಆದ್ರೂ ಸಿಕ್ತಿಲ್ಲ ಖದೀಮ!