Site icon Vistara News

Robbery Case: ಚಿತ್ರದುರ್ಗದಲ್ಲಿ ಬೈಕ್‌ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳಿಂದ ದರೋಡೆ; ಚಾಕು ತೋರಿಸಿ ಲಕ್ಷ ಹಣ ಲೂಟಿ

#image_title

ಚಿತ್ರದುರ್ಗ: ಇಲ್ಲಿನ ಐಯುಡಿಪಿ ಬಡಾವಣೆಯ 11ನೇ ಅಡ್ಡರಸ್ತೆಯಲ್ಲಿ ಹಾಡುಹಗಲೇ ವ್ಯಕ್ತಿಗೆ ಚಾಕು ತೋರಿಸಿ ಹಣ ಲೂಟಿ (Robbery Case) ಮಾಡಿದ ಘಟನೆ ನಡೆದಿದೆ. ಪ್ರಶಾಂತ್ ಎಂಬವರ ಬಳಿ ಬಂದ ನಾಲ್ವರು ದುಷ್ಕರ್ಮಿಗಳು ಚಾಕು ತೋರಿಸಿ ಸುಮಾರು 6.5 ಲಕ್ಷ ರೂ.‌ಹಣ ಲೂಟಿ ಮಾಡಿದ್ದಾರೆ.

ಪ್ರಶಾಂತ್ ಸಂಸ್ಥೆಯೊಂದಕ್ಕೆ ಹಣ ತುಂಬಲು ಶನಿವಾರ ಬೆಳಗ್ಗೆ ಬೈಕ್‌ನಲ್ಲಿ ಹೊರಟಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಏಕಾಏಕಿ ಪ್ರಶಾಂತ್‌ ಅವರನ್ನು ಅಡ್ಡ ಹಾಕಿದ್ದಾರೆ. ಬಳಿಕ ಚಾಕು ತೋರಿಸಿ ಹಣದ ಬ್ಯಾಗ್‌ ಕೊಡುವಂತೆ ಕೇಳಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಹತ್ಯೆ ಮಾಡುವುದಾಗಿ ಬೆದರಿಸಿ ಹಣದ ಬ್ಯಾಗ್‌ ಕಿತ್ತುಕೊಂಡು ಪರಾರಿ ಆಗಿದ್ದಾರೆ.

ಈ ವೇಳೆ ಪ್ರಶಾಂತ್‌ ಕಿರುಚಾಟ ಕೇಳಿ ಸಾರ್ವಜನಿಕರು ಓಡಿ ಬಂದಿದ್ದು, ಅಲ್ಲಿಂದ ಕಳ್ಳರು ಕಾಲ್ಕಿತ್ತಿದ್ದಾರೆ. ಇತ್ತ ಹಣ ಕಳೆದುಕೊಂಡ ಪ್ರಶಾಂತ್‌ ಕಣ್ಣೀರು ಹಾಕುತ್ತಿದ್ದಾರೆ.

ಇನ್ನು ಈ ರಾಬರಿ ಅದೇ ಏರಿಯಾದ ಕೆಲ ಯುವಕರು ಮಾಡಿದ್ದು ಎಂಬ ಆರೋಪವೂ ಸ್ಥಳೀಯರಿಂದ ಕೇಳಿ ಬಂದಿದೆ. ಪ್ರಶಾಂತ್‌ ಅವರ ಕೆಲಸದ ವಿಚಾರ ತಿಳಿದವರೇ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ದೂರು ದಾಖಲಾಗಿದೆ.

ಗದಗ ಪೊಲೀಸರ ಕಾರ್ಯಾಚರಣೆ

ಮನೆಗಳ್ಳರನ್ನು ಬಂಧಿಸಿದ ಗದಗ ಪೊಲೀಸರು

ಗದಗ ನಗರದ ಹಲವೆಡೆ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಮನೆಗಳಲ್ಲಿ ಹಾಗೂ ಜೈನ ಮಂದಿರದಲ್ಲಿ ಕಳ್ಳತನ ಮಾಡುತ್ತಿದ್ದ ಗದಗ ಮೂಲದ ಮುತ್ತು @ ಪ್ರಶಾಂತಕುಮಾರ ಬಿನ್ನಾಳ, ಶಾಮ ವಾಲ್ಮೀಕಿ ಆರೋಪಿಗಳನ್ನು ಬಂಧಿಸಲಾಗಿದೆ.

ಇದನ್ನೂ ಓದಿ: Murder case: ತೀರ್ಥಹಳ್ಳಿ ಮೀನು ಮಾರುಕಟ್ಟೆಯಲ್ಲಿ ರಕ್ತದ ಮಡುವಿನಲ್ಲಿ ಪೊಲೀಸ್‌ ಶವ ಪತ್ತೆ; ಕೊಲೆ ಶಂಕೆ

ಆರೋಪಿಗಳಿಂದ 8 ಲಕ್ಷ 89 ಸಾವಿರದ 500 ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. 145 ಗ್ರಾಂ ಬಂಗಾರದ ಆಭರಣ, 280 ಗ್ರಾಂ ಬೆಳ್ಳಿ ಸಾಮಾಗ್ರಿ, 10ಕೆ.ಜಿ ಪಂಚಲೋಹದ ಮೂರ್ತಿ ಕಳ್ಳತನ ಮಾಡಿದ್ದರು. ಗದಗ ಎಸ್‌ಪಿ ಬಿ.ಎಸ್ ನೇಮಗೌಡ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಕಳ್ಳರನ್ನು ಬಂಧಿಸಲಾಗಿದೆ. ಇನ್ನು ಕಳ್ಳರನ್ನ ಹಿಡಿದು ತಂದ ಸಿಬ್ಬಂದಿಗೆ ಬಹುಮಾನ ವಿತರಿಸಿ, ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು.

ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version