Site icon Vistara News

Robotics Challenge: ಇಸ್ರೋದಿಂದ ವಿದ್ಯಾರ್ಥಿಗಳಿಗೆ ರೊಬೋಟಿಕ್ಸ್ ಚಾಲೆಂಜ್; ಗೆದ್ದವರಿಗೆ 5 ಲಕ್ಷ ರೂ.

ISRO launches robotics challenge for students The winner will get Rs 5 lakh Prize

ಬೆಂಗಳೂರು: ಚಂದ್ರನ ಮೇಲೆ ಚಂದ್ರಯಾನ -3 ವಿಕ್ರಮ್ ಯಶಸ್ವಿಯಾಗಿ ಇಳಿದ ನಂತರ ಇಸ್ರೋ ಸಂಸ್ಥೆ ಚಂದ್ರ ಮತ್ತು ಇತರ ಆಕಾಶಕಾಯಗಳಿಗೆ ಭವಿಷ್ಯದ ರೊಬೋಟಿಕ್ಸ್‌ ನಿರ್ಮಿಸಲು, ಹೆಚ್ಚಿನ ಕಾರ್ಯಾಚರಣೆಯನ್ನು ಅನ್ವೇಷಿಸಲು ಸಜ್ಜಾಗುತ್ತಿದೆ. ಇದಕ್ಕಾಗಿ ಇಸ್ರೋ ಸಂಸ್ಥೆ ವಿದ್ಯಾರ್ಥಿಗಳಿಗೆ ಸುವರ್ಣ ಅವಕಾಶವೊಂದು (Robotics Challenge) ಕಲ್ಪಿಸಿದೆ.

ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ಅಂಶಗಳನ್ನು ಒಳಗೊಂಡ ಬಾಹ್ಯಾಕಾಶ ರೊಬೋಟ್‌ ಅನ್ನು ವಿನ್ಯಾಸಗೊಳಿಸಲು ವಿದ್ಯಾರ್ಥಿ ಸಮುದಾಯವನ್ನು ಆಹ್ವಾನಿಸಿದೆ. ನವೀನ ಆಲೋಚನೆಗಳನ್ನು ಪ್ರದರ್ಶಿಸಿದವರಿಗೆ ಬಹುಮಾನವನ್ನು ನೀಡುತ್ತಿದೆ. ಗೆದ್ದವರಿಗೆ 5 ಲಕ್ಷ ರೂ. ನಗದು ಬಹುಮಾನವನ್ನು ಘೋಷಿಸಿದೆ.

ʻಬಾಹ್ಯಾಕಾಶ ರೊಬೋಟ್ ಅನ್ನು ನಿರ್ಮಿಸೋಣʼ ಎಂಬ ಅಡಿಬರಹದ ಮೂಲಕ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಇಂದಿನಿಂದಲೇ (ನವೆಂಬರ್ 20) ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಡಿಸೆಂಬರ್ 15ಕ್ಕೆ ಮುಕ್ತವಾಗಲಿದೆ. ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ಮತ್ತು ವೃತ್ತಿಪರ ಜೀವನಕ್ಕೆ ನೆರವಾಗಲಿದೆ.

ಮೊದಲ ಬಹುಮಾನ 5 ಲಕ್ಷ ರೂ., ಎರಡನೇ ಬಹುಮಾನ ಪಡೆದವರಿಗೆ 3 ಲಕ್ಷ ರೂ. ಹಾಗೂ ತಲಾ ಒಂದು ಲಕ್ಷದ ಸಮಾಧಾನಕರ ಬಹುಮಾನ ನೀಡಲಾಗುತ್ತದೆ. 2024ರ ಆಗಸ್ಟ್‌ನಲ್ಲಿ ಬೆಂಗಳೂರಿನ ಯು.ಆರ್.ಎಸ್.ಸಿ. ಕ್ಯಾಂಪಸ್‌ನಲ್ಲಿ ರೊಬೋಟಿಕ್ ಚಾಲೆಂಜ್ ಡೇ ಆಯೋಜಿಸಲಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version