Site icon Vistara News

ರೋಹಿಂಗ್ಯಾಗಳ ಕಳ್ಳ ಸಾಗಣೆ! 44 ಮಧ್ಯವರ್ತಿಗಳನ್ನು ಬಂಧಿಸಿದ ಎನ್ಐಎ

NIA Raids 14 places in punjab and Haryana

ನವದೆಹಲಿ: ರಾಷ್ಟ್ರೀಯ ತನಿಖಾ ಏಜೆನ್ಸಿ(NIA)ಯು ಬುಧವಾರ, ದೇಶದ 10 ರಾಜ್ಯಗಳಲ್ಲಿ ನಾಲ್ಕು ಡಜನ್‌ಗಿಂತಲೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿ, ಅಕ್ರಮ ವಲಸೆಯಲ್ಲಿ (Rohingyas trafficking) ಭಾಗಿಯಾಗಿರುವ ದೊಡ್ಡ ಜಾಲವನ್ನು ಭೇದಿಸಿದೆ. 44 ಮಧ್ಯವರ್ತಿಗಳನ್ನು ಬಂಧಿಸಿದೆ(middlemen Arrested). ಅಲ್ಲದೇ ಈ ಸಂಬಂಧ ನಾಲ್ಕು ಪ್ರಕರಣಗಳನ್ನು ದಾಖಲಿಸಿದೆ(Case Registered). ಗಡಿಯ ಇನ್ನೊಂದು ಭಾಗದಲ್ಲಿ ಮಧ್ಯವರ್ತಿಗಳು ಮತ್ತು ಪ್ರಮುಖ ಆರೋಪಿಗಳನ್ನು ಗುರುತಿಸಲು ಎನ್‌ಐಎ ಬಾಂಗ್ಲಾದೇಶದ (Bangla Desh)ಅಧಿಕಾರಿಗಳಿಂದ ಸಹಾಯ ಪಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆ ಬುಧವಾರ 10 ರಾಜ್ಯಗಳಲ್ಲಿ ನಾಲ್ಕು ಡಜನ್‌ಗೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದೆ. ಭಾರತ-ಬಾಂಗ್ಲಾದೇಶ ಗಡಿ ಮತ್ತು ರೋಹಿಂಗ್ಯಾ ಮುಸ್ಲಿಮರು ಭಾರತಕ್ಕೆ ಪ್ರವೇಶಿಸಲು ಅನುಕೂಲ ಮಾಡಿದ ಪ್ಯಾನ್-ಇಂಡಿಯಾ ನೆಟ್‌ವರ್ಕ್ ಮಾನವ ಕಳ್ಳಸಾಗಣೆ ಸಿಂಡಿಕೇಟ್‌ನ ಭಾಗವಾಗಿದ್ದ 44 ಮಧ್ಯವರ್ತಿಗಳನ್ನು ಬಂಧಿಸಿದೆ.

ಅಕ್ರಮ ವಲಸೆಯಲ್ಲಿ ಭಾಗಿಯಾಗಿರುವ ದೊಡ್ಡ ಜಾಲವನ್ನು ತನಿಖೆ ಮಾಡಲು ಎನ್ಐಎ ಒಟ್ಟು ನಾಲ್ಕು ಪ್ರಕರಣಗಳನ್ನು ದಾಖಲಿಸಿದೆ ಮತ್ತು ಗಡಿಯ ಇನ್ನೊಂದು ಬದಿಯಲ್ಲಿ ಮಧ್ಯವರ್ತಿಗಳು ಮತ್ತು ಪ್ರಮುಖ ಆರೋಪಿಗಳನ್ನು ಗುರುತಿಸಲು ಬಾಂಗ್ಲಾದೇಶದ ಅಧಿಕಾರಿಗಳಿಂದ ಸಹಾಯ ಪಡೆಯುವ ಸಾಧ್ಯತೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.

10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾನವ ಕಳ್ಳಸಾಗಣೆ ಜಾಲಗಳಿಗೆ ದೊಡ್ಡ ಹೊಡೆತ ನೀಡುವುದಕ್ಕಾಗಿ, ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ರಾಜ್ಯ ಪೊಲೀಸ್ ಪಡೆಗಳೊಂದಿಗೆ ನಿಕಟ ಸಮನ್ವಯದೊಂದಿಗೆ ಎನ್‌ಐಎ ಬುಧವಾರ ಬೆಳಿಗ್ಗೆ ಸಮಗ್ರ ಕಾರ್ಯಾಚರಣೆಯನ್ನು ನಡೆಸಿತು. ಭಾರತ-ಬಾಂಗ್ಲಾದೇಶ ಗಡಿಯುದ್ದಕ್ಕೂ ಅಕ್ರಮ ವಲಸಿಗರ ಒಳನುಸುಳುವಿಕೆ ಮತ್ತು ನೆಲೆಸುವಿಕೆಯಲ್ಲಿ ತೊಡಗಿರುವ ಅಕ್ರಮ ಮಾನವ ಕಳ್ಳಸಾಗಣೆ ಬೆಂಬಲ ಜಾಲಗಳನ್ನು ಕಿತ್ತುಹಾಕುವ ಗುರಿಯನ್ನು ಈ ಕಾರ್ಯಾಚರಣೆಯು ಹೊಂದಿದೆ ಎಂದು ಭಯೋತ್ಪಾದನಾ ವಿರೋಧಿ ತನಿಖಾ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ತ್ರಿಪುರಾ, ಅಸ್ಸಾಮ್, ಪಶ್ಚಿಮ ಬಂಗಾಳ, ಕರ್ನಾಟಕ, ತಮಿಳು ನಾಡು, ತೆಲಂಗಾಣ, ಹರ್ಯಾಣ, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ ಹಾಗೂ ಪುದುಚೆರಿಯಲ್ಲಿ ಎನ್ಐಎ ದಾಳಿ ನಡೆಸಿ, ತೀವ್ರ ಶೋಧ ಕಾರ್ಯಾಚರಣೆಯನ್ನು ಕೈಗೊಂಡಿದೆ. ಅಕ್ರಮ ವಲಸೆಗೆ ಸಂಬಂಧಿಸಿದ ದೊಡ್ಡ ಜಾಲ ಸಕ್ರಿಯ ಕುರಿತು ಅಸ್ಸಾಮ್ ಪೊಲೀಸ್ ಕಳೆದ ಫೆಬ್ರವರಿಯಲ್ಲಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ತೀವ್ರ ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವಾಲಯವು ಎನ್ಐಎಗೆ ಸೂಚಿಸಿತ್ತು.

ಈ ಸುದ್ದಿಯನ್ನೂ ಓದಿ: NIA Raid : ಬೆಂಗಳೂರಿನ 15 ಕಡೆ ಅಕ್ರಮ ಬಾಂಗ್ಲಾ ವಲಸಿಗರ ಮೇಲೆ ದಾಳಿ, 8 ಮಂದಿ ವಶಕ್ಕೆ

Exit mobile version