ಮೈಸೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ವಿರುದ್ಧ ಐಪಿಎಸ್ ಅಧಿಕಾರಿ ಡಿ.ರೂಪಾ (D Roopa) ಮಾಡಿರುವ ಆರೋಪಗಳನ್ನು ಖಂಡಿಸಿ ರೋಹಿಣಿ ಸಿಂಧೂರಿ ಅಭಿಮಾನಿಗಳು ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ಎದುರು ಪ್ರತಿಭಟನೆ ನಡೆಸಿದ್ದು, ರಗ್ಗು, ದಿಂಬು, ಲೋಟ, ತಟ್ಟೆಗಳನ್ನು ತಂದಿಟ್ಟುಕೊಂಡು ಘೋಷಣೆ ಕೂಗಿದರು.
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅಭಿಮಾನಿಗಳು ಎಟಿಎಸ್ ಎದುರು ವಿನೂತನವಾಗಿ ಪ್ರತಿಭಟನೆ ನಡೆಸಿದ್ದು, ರೋಹಿಣಿ ಪರ ಜೈಕಾರ ಕೂಗಿದರು. ಐಪಿಎಸ್ ಅಧಿಕಾರಿ ಡಿ.ರೂಪಾ ವಿರುದ್ಧ ಧಿಕ್ಕಾರ ಕೂಗಲಾಯಿತು.
ಡಿ. ರೂಪಾ ಅವರು, ರೋಹಿಣಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಎಟಿಎಸ್‌ನಿಂದ ಲೋಟ, ದಿಂಬು, ಲೋಟಗಳನ್ನು ಹೊತ್ತೊಯ್ದಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಅದು ನಿಜವಾಗಿದ್ದರೆ ಆ ಎಲ್ಲ ವಸ್ತುಗಳನ್ನು ನಾವೇ ಕೊಡುತ್ತೇವೆ ಎಂದು ರೋಹಿಣಿ ಅಭಿಮಾನಿಗಳು ಆಡಳಿತ ತರಬೇತಿ ಸಂಸ್ಥೆ ಎದುರು ಆ ಎಲ್ಲ ವಸ್ತುಗಳನ್ನು ತಂದಿಟ್ಟಿರು.
ಪೊಲೀಸರು ಬಂದೊಡನೆ ಕಾಲ್ಕಿತ್ತರು!
ಈ ವೇಳೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಸಮಸ್ಯೆ ಏನೆಂದು ಕೇಳಿದ್ದಾರೆ. ಆಗ ರೋಹಿಣಿ ಪರವಾಗಿ ಪ್ರತಿಭಟನೆ ನಡೆಸುತ್ತಿರುವುದಾಗಿ ಪ್ರತಿಭಟನಾಕಾರರು ಹೇಳಿದ್ದಾರೆ. ಆಗ ಪೊಲೀಸರು ಅನುಮತಿ ಪತ್ರವನ್ನು ಕೇಳಿದ್ದಾರೆ. ಇದರಿಂದ ತತ್ತರಿಸಿದ ಪ್ರತಿಭಟನಾಕಾರರು, ಪ್ರತಿಭಟನೆಗೆ ಅನುಮತಿ ಪಡೆಯದ ಕಾರಣ ಪ್ರತಿಭಟನಾ ನಿರತರನ್ನು ವಾಪಸ್ ಕಳುಹಿಸಿದ್ದಾರೆ. ಜತೆಗೆ ಪ್ರತಿಭಟನೆಗೆ ತಂದಿದ್ದ ತಟ್ಟೆ, ಲೋಟಗಳನ್ನೂ ಅವರ ಜತೆಗೇ ವಾಪಸ್ ಕಳುಹಿಸಿದ್ದಾರೆ.
ಇದನ್ನೂ ಓದಿ: JDS Politics: ಹಾಸನ ಟಿಕೆಟ್ ಗೊಂದಲ ಪರಿಹರಿಸಲು ದೇವೇಗೌಡರಿಗೆ ಆರೋಗ್ಯ ಸರಿ ಇಲ್ಲ; ಅಂತಿಮ ನಿರ್ಧಾರ ನನ್ನದೇ ಅಂದರೇ ಎಚ್‌ಡಿಕೆ?
ರೋಹಿಣಿ ಅವರು ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ಎಟಿಐ ವಸತಿ ಗೃಹದಲ್ಲಿ ತಂಗಿದ್ದರು. ಈ ವೇಳೆ ರಗ್ಗು, ದಿಂಬು, ಲೋಟ, ತಟ್ಟೆಗಳು ಕಳುವಾಗಿವೆ ಎಂದು ಡಿ. ರೂಪಾ ಆರೋಪಿಸಿದ್ದರು. ಅಲ್ಲದೆ, ಈ ಬಗ್ಗೆ ಎಫ್‌ಐಆರ್ ಸಹ ದಾಖಲಾಗಿತ್ತು. ಸರ್ಕಾರದ ಹಂತದಲ್ಲಿ ಈ ಪ್ರಕರಣದ ತನಿಖೆ ನಡೆಯುತ್ತಿದೆ.