ತುಮಕೂರು: ಪಾವಗಡ ಪೊಲೀಸ್ ಠಾಣೆಯ (Police station) ಗಣಕ ಯಂತ್ರ ಕೊಠಡಿಯ ಮೇಲ್ಚಾವಣಿಯ ಪ್ಲಾಸ್ಟರ್ ಒಮ್ಮಿಂದೊಮ್ಮೆಗೇ ಉದುರಿಬಿದ್ದಿದೆ. ಸಿಮೆಂಟ್‌ನ ದೊಡ್ಡ ತುಂಡುಗಳು ಉರುಳಿಬಿದ್ದ ಜಾಗದಲ್ಲಿ ಮಹಿಳಾ ಕಾನ್ಸ್‌ಟೇಬಲ್ ಒಬ್ಬರು ಕುಳಿತಿರುತ್ತಿದ್ದು, ಅವರು ಅದೃಷ್ಟವಶಾತ್ ಪಾರಾಗಿದ್ದಾರೆ.
ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ವೈಎನ್ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ. ಕಾನ್ಸ್‌ಟೇಬಲ್ ಚೌಡಮ್ಮ ಅವರು ಎಂದಿನಂತೆ ಇಲ್ಲಿ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುತ್ತಿದ್ದರು. ಈ ವೇಳೆ ಪೊಲೀಸ್ ಠಾಣೆಯಲ್ಲಿರುವ ಗಣಕ ಯಂತ್ರ ಕೊಠಡಿಯ ಮೇಲ್ಚಾವಣಿ ಒಮ್ಮೆಗೇ ಕುಸಿದಿದೆ.
ಕುಸಿದ ಪ್ಲಾಸ್ಟರ್ ತುಂಡುಗಳು ಉದುರಿ ಬೀಳುತ್ತಿದ್ದಂತೆಯೇ ಚೌಡಮ್ಮ ಅವರು ಕೂಡಲೇ ಅಲ್ಲಿಂದ ಎದ್ದು ಓಡಿದ್ದಾರೆ. ಹೀಗಾಗಿ ತುಂಡುಗಳು ಅವರ ಮೇಲೆ ಬೀಳುವುದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಮೇಲ್ಚಾವಣಿ ಕುಸಿದ ಪರಿಣಾಮ
ಕಂಪ್ಯೂಟರ್ ಸಿಸ್ಟಮ್ ಸಂಪೂರ್ಣ ನಾಶವಾಗಿದೆ.
ಪ್ಲಾಸ್ಟರಿಂಗ್ ಸರಿ ಮಾಡದೆ ಇರುವುದು ದುರಂತಕ್ಕೆ ಕಾರಣ ಎಂದು ಹೇಳಲಾಗಿದೆ. ಅದೇ ಠಾಣೆಯ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | Road Accident : ನೆಲಮಂಗಲ ಸಮೀಪ ಬೈಕ್ ಸ್ಕಿಡ್; ಹಿಂಬದಿ ಸವಾರ ಸ್ಥಳದಲ್ಲೇ ಸಾವು; ಸವಾರ ಆಸ್ಪತ್ರೆಗೆ ದಾಖಲು