Site icon Vistara News

Roof collapse : ಅಯ್ಯೋ..! ಆಸ್ಪತ್ರೆ ವಾರ್ಡ್‌ನಲ್ಲಿದ್ದ ಬಾಣಂತಿ- ಶಿಶು ಮೇಲೆ ಕುಸಿದ ಚಾವಣಿ!

Roof collapse in hospital

ಚಿತ್ರದುರ್ಗ: ಇಲ್ಲಿನ ಜಿಲ್ಲಾಸ್ಪತ್ರೆಯ ಐಪಿಪಿ ವಾರ್ಡ್‌ನಲ್ಲಿದ್ದ ಹಸುಗೂಸು ಹಾಗೂ ಬಾಣಂತಿ ಮೇಲೆ ಚಾವಣಿ (Roof collapse ) ಕುಸಿದಿದೆ. ಮೂರು ದಿನದ ಹಿಂದಷ್ಟೇ ಹೆರಿಗೆ ಆಗಿ ಐಪಿಪಿ ವಾರ್ಡ್‌ಗೆ ಬಾಣಂತಿ ಹಾಗೂ ಶಿಶುವನ್ನು ಶಿಫ್ಟ್‌ ಮಾಡಲಾಗಿತ್ತು. ತಾಯಿ-ಶಿಶು ಬೆಚ್ಚಗೆ ಮಲಗಿದ್ದಾಗ ಏಕಾಏಕಿ ಚಾವಣಿಯ ಪದರ ಕುಸಿದಿದೆ. ನಿನ್ನೆ ಭಾನುವಾರ (ಆ.6) ರಾತ್ರಿ 11:30 ರ ಸುಮಾರಿಗೆ ಈ ಘಟನೆ ನಡೆದಿದೆ.

ಪ್ರಾಣಾಪಾಯದಿಂದ ಪಾರಾದ ಮಗು

ಚಳ್ಳಕೆರೆ ತಾಲೂಕಿನ ರೇಣುಕಾಪುರ ಗ್ರಾಮದ ಪ್ರದೀಪ್ ಹಾಗೂ ಅಮೃತಾ ದಂಪತಿ ಶಿಶು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಬಾಣಂತಿ ಹಾಗೂ ಶಿಶು ಮಲಗಿದ್ದ ಹಾಸಿಗೆಯ ಬದಿಯಲ್ಲಿ ಚಾವಣಿ ಕುಸಿದಿದೆ. ಇದರಿಂದಾಗಿ ಸ್ವಲ್ಪದರಲ್ಲಿಯೇ ಭಾರೀ ಅನಾಹುತ ತಪ್ಪಿದೆ.

ವಾರ್ಡ್‌ನಲ್ಲಿ ಆತಂಕದಲ್ಲಿರುವ ಇತರರು

ಸ್ಥಳಕ್ಕೆ ಪಪ್ಪಿ ಎಮರ್ಜನ್ಸಿ ಟೀಮ್ ಭೇಟಿ ನೀಡಿದ್ದು, ಸರಿಯಾದ ವ್ಯವಸ್ಥೆ ಮಾಡಲು ಡಿಸ್ಟಿಕ್ ಸರ್ಜನ್ ದೇವರಾಜ್‌ಗೆ ತರಾಟೆ ತೆಗೆದುಕೊಂಡಿದೆ. ಸದ್ಯ ಆಸ್ಪತ್ರೆ ಸಿಬ್ಬಂದಿ ಮಗುವನ್ನು ಐಸಿಯುಗೆ ಶಿಫ್ಟ್ ಮಾಡಿದ್ದಾರೆ. ಕುಸಿದ ಜಾಗದಲ್ಲಿದ್ದ ಹಾಸಿಗೆಗಳನ್ನು ತೆಗೆಯಲಾಗಿದೆ.

ಸಿಬ್ಬಂದಿಗೆ ನಡೆದ ಘಟನೆ ಕುರಿತು ವಿವರಿಸುತ್ತಿರುವ ಕುಟುಂಬಸ್ಥರು

ಜಿಲ್ಲಾಸ್ಪತ್ರೆ ಬಡವರ ಆಸ್ಪತ್ರೆ ದಯವಿಟ್ಟು ಸರಿಯಾದ ವ್ಯವಸ್ಥೆ ಮಾಡಿ ಎಂದು ಕುಟುಂಬಸ್ಥರು ವೈದ್ಯಾಧಿಕಾರಿಗೆ ಮನವಿ ಮಾಡಿದ್ದಾರೆ. ಒಂದು ವೇಳೆ ಶಿಶುವಿನ ಮೇಲೆ ಕಲ್ಲು ಬಿದ್ದಿದ್ದಾರೆ ಏನು ಗತಿ? ಎಂದು ಪ್ರಶ್ನಿಸಿದ್ದಾರೆ.

ಮೊಬೈಲ್‌ ಚಾರ್ಜರ್‌ನಿಂದ ಶಾಕ್‌ ತಗುಲಿ 8 ತಿಂಗಳ ಮಗು ಸಾವು

ಮೊಬೈಲ್‌ ಚಾರ್ಜರ್‌ನಿಂದ (Mobile Charger) ಶಾಕ್‌ ತಗುಲಿ ಎಂಟು ತಿಂಗಳ ಪುಟ್ಟ ಮಗುವೊಂದು (8 month old Child) ಪ್ರಾಣ ಕಳೆದುಕೊಂಡ (Child Death) ಹೃದಯ ವಿದ್ರಾವಕ ಘಟನೆ ನಡೆದಿದೆ. ಇದು ಎಲ್ಲೆಂದರಲ್ಲಿ ಮೊಬೈಲ್‌ ಚಾರ್ಜರ್‌ಗಳನ್ನು ನೇತು ಹಾಕುವವರಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ.

ಕಾರವಾರದ (karwar News) ಸಿದ್ಧರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು 8 ತಿಂಗಳ ಹೆಣ್ಣು ಮಗು ಸಾನಿಧ್ಯ ಸ್ಥಳದಲ್ಲೇ ಮೃತಪಟ್ಟಿದೆ. ಸಿದ್ದರ ಗಾಮದ ನಿವಾಸಿಯಾಗಿರುವ ಸಂತೋಷ ಕಲ್ಗುಟ್ಕರ್ ಹಾಗೂ ಸಂಜನಾ ಅವರ ಮಗು ಈ ಸಾನಿಧ್ಯ.

ಸಾನಿಧ್ಯಳನ್ನು ಮನೆಯ ಚಾವಡಿಯಲ್ಲಿ ಮಲಗಿಸಲಾಗಿತ್ತು. ಈಗಷ್ಟೇ ಹರಿದಾಡುತ್ತಿರುವ ಮಗು ಆಚೀಚೆ ಹರಿದಾಡಿದೆ. ಆಗ ಅದಕ್ಕೆ ಪಕ್ಕದಲ್ಲೇ ನೇತಾಡುತ್ತಿದ್ದ ವಸ್ತುವೊಂದು ಕಂಡಿದೆ. ಮನೆಯಲ್ಲಿ ಯಾರೋ ಮೊಬೈಲ್‌ನ್ನು ಚಾರ್ಜ್‌ಗೆ ಹಾಕಿ ಬಳಿಕ ಮೊಬೈಲನ್ನು ತೆಗೆದು ಚಾರ್ಜರನ್ನು ಹಾಗೆಯೇ ಬಿಟ್ಟು ಹೋಗಿದ್ದರು. ಸ್ವಿಚ್‌ ಕೂಡಾ ಆಫ್‌ ಮಾಡಲಾಗಿರಲಿಲ್ಲ.

ಮಗು ಅಲ್ಲೇ ನೇತಾಡುತ್ತಿದ್ದ ಚಾರ್ಜರ್‌ನ ತುದಿಯನ್ನು ಬಾಯಿಗೆ ಹಾಕಿಕೊಂಡಿದೆ. ಚಾರ್ಜರ್‌ನಲ್ಲಿ ಹರಿದು ಬರುವ ಸಣ್ಣ ಪ್ರಮಾಣದ ವಿದ್ಯುತ್‌ ಮಗುವಿಗೆ ಆಘಾತವನ್ನು ಉಂಟು ಮಾಡಿದೆ. ಆಘಾತಕ್ಕೆ ಒಳಗಾದ ಮಗು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದೆ.

ಕಾರವಾರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಗುವನ್ನು ಕಳೆದುಕೊಂಡ ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version