Site icon Vistara News

Pushpa model | ಮೇಲೆ ಸಿಹಿಗೆಣಸು, ಒಳಗೆ ಬೀಟೆ ನಾಟಾ!: ಕೊಡಗಿನಲ್ಲಿ ಮರ ಕಳ್ಳಸಾಗಣೆದಾರರು ಅರೆಸ್ಟ್‌

kodagu nata

ಮಡಿಕೇರಿ: ಕೊಟ್ಟೋಳಿ-ವಿರಾಜಪೇಟೆ ಮಾರ್ಗದಲ್ಲಿ ರಾತ್ರಿ ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ನಡು ರಾತ್ರಿ ಬಂದ ಮಹೇಂದ್ರ ಪಿಕಲ್‌ ವಾಹನವನ್ನು ನಿಲ್ಲಿಸಿ ಪರಿಶೀಲಿಸಿದರು. ಚಾಲಕ ಇದರಲ್ಲಿ ಸಿಹಿಗೆಣಸು ಸಾಗಿಸುತ್ತಿದ್ದೇವೆ (Pushpa model) ಎಂದು ಹೇಳಿದ. ಆದರೆ, ಅರಣ್ಯಾಧಿಕಾರಿಗಳು ತೀವ್ರ ತಪಾಸಣೆ ನಡೆಸಿದಾಗ ಕಂಡಿದ್ದೇ ಬೇರೆ! ಅಲ್ಲಿ ಮೇಲೆ ಸಿಹಿಗೆಣಸೇ ಇತ್ತು. ಆದರೆ, ಒಳಗೆ ಇದ್ದದ್ದು ೫ ಲಕ್ಷ ರೂ. ಮೌಲ್ಯದ ಬೀಟೆ ನಾಟಾ!

ಹೌದು, ಕೊಡಗು ಜಿಲ್ಲೆ ವಿರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಹೆಗ್ಗಳ ಕೊಟ್ಟೋಳಿ – ವಿರಾಜಪೇಟೆ ಮಾರ್ಗದಲ್ಲಿ ಅಕ್ರಮವಾಗಿ ಸಿಹಿ ಗೆಣಸು ಸಾಗಿಸುವ ನೆಪದಲ್ಲಿ ವಾಹನದಲ್ಲಿ(ಮಹೀಂದ್ರ ಪಿಕಪ್ ಕೆಎಲ್-45–ಎ-1656) ಅಕ್ರಮವಾಗಿ ಬೀಟೆ ಮರದ ನಾಟಾಗಳನ್ನು ಸಾಗಿಸುತ್ತಿದ್ದ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

ಆರೋಪಿಗಳು ವಾಹನದಲ್ಲಿ ಬೀಟೆ ಮರದ ನಾಟಾಗಳ ಮೇಲೆ ಪ್ಲಾಸ್ಟಿಕ್‌ ಚೀಲಗಳಲ್ಲಿ ಸಿಹಿ ಗೆಣಸು ತುಂಬಿಸಿ 11 ಬೀಟೆ ನಾಟಾಗಳು ಕಾಣದಂತೆ ಮುಚ್ಚಿ ಅಕ್ರಮವಾಗಿ ಸಾಗಿಸುವ ಸಂಧರ್ಭದಲ್ಲಿ ವಿರಾಜಪೇಟೆ ಅರಣ್ಯ ವಲಯದ ಸಿಬ್ಬ೦ದಿ ಕೈಗೆ ಸಿಕ್ಕಿಬಿದ್ದಿದ್ದಾರೆ.

ಹೊರಗೆ ಸಿಹಿಗೆಣಸು!
ಒಳಗ ನಾಟಾ

5 ಲಕ್ಷ ರೂ. ಮೌಲ್ಯದ ಬೀಟೆ ನಾಟಗಳೊಂದಿಗೆ ವಾಹನ‌ಸಹಿತ ಆರೋಪಿಯಾದ ಬೇತು ಗ್ರಾಮದ ವಾಹನ ಚಾಲಕ ಆರೀಸ್ ಎಂ. ಎ. ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಕರಣದ ಇತರ ಆರೋಪಿಗಳಾದ ಕೊಟ್ಟಮುಡಿ- ಹೊದವಡ ಗ್ರಾಮದ ಅಬ್ಬಾಸ್ ಕೆ.ಯು. ಹಾಗೂ ನಾಪೋಕ್ಲುವಿನ ಹಳೆ ತಾಲೂಕು ಗ್ರಾಮದ ರಿಜ್ವಾನ್ ತಲೆಮರೆಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಕೊಡಗು ವೃತ್ತದ ಸಂರಕ್ಷಣಾಧಿಕಾರಿಗಳಾದ ಬಿ.ಎನ್‌.ಎನ್‌. ಮೂರ್ತಿ ವಿರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶಿವರಾಮಬಾಬು ಹಾಗೂ ಚಕ್ರಪಾಣಿ – ಮತ್ತು ವಿರಾಜಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕೊಚ್ಚಿ ನೆಹರು ಅವರ ಮಾರ್ಗದರ್ಶನದಲ್ಲಿ ಕಳ್ಳಿರ.ಎಂ.ದೇವಯ್ಯ ವಲಯ ಅರಣ್ಯಾಧಿಕಾರಿಗಳು, ವಿರಾಜಪೇಟೆ ಉಪ ವಲಯ ಅರಣ್ಯಾಧಿಕಾರಿಗಳಾದ ದೇಯಂಡ ಸಂಜಿತ್ ಸೋಮಯ್ಯ, ಆನಂದ ಕೆ.ಆರ್. ಕುಮಾರಿ ಮೋನಿಷಾ ಎಂ.ಎಸ್, ಅರಣ್ಯ ರಕ್ಷಕರಾದ ಚಂದ್ರಶೇಖರ ಅಮರಗೋಳ, ಮಾಲತೇಶ ಬಡಿಗೇರ, ವಾಹನ ಚಾಲಕರಾದ ಅಶೋಕ ಹಾಗೂ ಆರ್.ಆರ್.ಟಿ ಸಿಬ್ಬಂದಿಗಳಾದ ನಾಚಪ್ಪ, ಪವಿತ್ರ ಕುಮಾರ್, ಲಾರೆನ್, ವಿಕಾಸ್, ಮಹೇಶ್‌, ಲತೇಶ ಭಾಗವಹಿಸಿದ್ದರು.

ಇದನ್ನೂ ಓದಿ | Bike theft | ಒಂದು ರೌಂಡ್‌ ಓಡಿಸಿ ನೋಡ್ಲಾ ಎಂದು ಕೇಳಿ KTM ಬೈಕ್‌ ಹಿಡಿದುಕೊಂಡು ಹೋದವನು ಮರಳಿ ಬರ್ಲೇ ಇಲ್ಲ!

Exit mobile version