ಬೆಂಗಳೂರು: ಇನ್ಮುಂದೆ ರಸ್ತೆಯಲ್ಲಿ ಕಾರು, ಬೈಕ್ ಅಡ್ಡಗಟ್ಟಿ ಗಲಾಟೆ ಮಾಡಿದರೆ ರೌಡಿಶೀಟ್ ಓಪನ್ ಆಗುತ್ತದೆ ಎಂದು ಕಿಡಿಗೇಡಿಗಳಿಗೆ ಪೊಲೀಸ್ ಕಮಿಷನರ್ ಬಿ. ದಯಾನಂದ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಪದೇ ಪದೇ ರೋಡ್ ರೇಜ್ ಪ್ರಕರಣಗಳು ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ವಿನಾಕಾರಣ ಕಾರು, ಬೈಕ್ ಅಡ್ಡಗಟ್ಟಿ ದುರ್ವರ್ತನೆ ತೋರಿದರೆ ಅಂತಹವರ ವಿರುದ್ಧ ರೌಡಿಶೀಟ್ ತೆರೆಯಲು ಪೊಲೀಸರಿಗೆ (Bangalore City Police) ಸೂಚನೆ ನೀಡಿದ್ದಾರೆ.
ರೋಡ್ ರೇಜ್ ಕೃತ್ಯಗಳ ಬಗ್ಗೆ ಸಾರ್ವಜನಿಕರಿಂದ ಪೊಲೀಸ್ ಕಮೀಷನರ್‌ಗೆ ದೂರುಗಳು ಬಂದಿದ್ದವು. ಸಾಮಾಜಿಕ ಜಾಲತಾಣದ ಮೂಲಕ ಕಮಿಷನರ್‌ಗೆ ಹಲವರು ದೂರು ಸಲ್ಲಿಸಿದ್ದರು. ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಕಠಿಣ ಕ್ರಮಕ್ಕೆ ಕಮಿಷನರ್ ಬಿ. ದಯಾನಂದ ಮುಂದಾಗಿದ್ದಾರೆ.
Officers have been instructed to open 'rowdy sheets' on such unscrupulous elements indulging in road rage or extortion activities. https://t.co/wxuvOo62pi
— CP Bengaluru ಪೊಲೀಸ್ ಆಯುಕ್ತ ಬೆಂಗಳೂರು (@CPBlr) August 12, 2023
ಇದನ್ನೂ ಓದಿ | Krishna river : ಪುಣ್ಯ ಸ್ನಾನ ಮಾಡಲು ಹೋದ ಯುವಕ ನೀರುಪಾಲು
ನಿದ್ದೆ ಮಂಪರಿನಲ್ಲಿ ಡಿವೈಡರ್‌ಗೆ ಗುದ್ದಿದ ಕಾರು; ಇಬ್ಬರು ವಿದ್ಯಾರ್ಥಿಗಳ ದುರ್ಮರಣ
ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಡಿವೈಡರ್‌ಗೆ ಡಿಕ್ಕಿಯಾಗಿ ಪಲ್ಟಿಯಾಗಿದ್ದರಿಂದ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ (Car Accident) ಯಲಹಂಕ ಸಮೀಪದ ಹುಣಸಮಾರನಹಳ್ಳಿಯಲ್ಲಿ ನಡೆದಿದೆ. ನಿದ್ದೆ ಮಂಪರಿನಲ್ಲಿ ವಾಹನ ಚಾಲನೆ ಮಾಡಿರುವುದು ದುರಂತಕ್ಕೆ ಕಾರಣವಾಗಿದೆ.
ಕಾರ್ತಿಕ್ ಜೈನ್, ಆದರ್ಶ್ ಕುಮಾರ್ ಮೃತ ವಿದ್ಯಾರ್ಥಿಗಳು. ಕಾರಿನಲ್ಲಿ ಐವರು ವಿದ್ಯಾರ್ಥಿಗಳು ಶನಿವಾರ ತಡರಾತ್ರಿ ನಂದಿ ಬೆಟ್ಟಕ್ಕೆ ಟ್ರಿಪ್ ಹೊರಟಿದ್ದರು. ಆದರೆ, ಅಷ್ಟು ಹೊತ್ತಿನಲ್ಲಿ ಹೋಗುವುದು ಬೇಡ ಎಂದು ವಿದ್ಯಾರ್ಥಿಗಳು ವಾಪಸ್ ಬರುತ್ತಿದ್ದರು. ಈ ವೇಳೆ ಹುಣಸಮಾರನಹಳ್ಳಿ ಬಳಿ ಚಾಲಕ ನಿದ್ದೆ ಮಂಪರಿನಲ್ಲಿ ಡಿವೈಡರ್ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಕಾರ್ತಿಕ್ ಜೈನ್ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಆದರ್ಶ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಇನ್ನುಳಿದ ಮೂವರಿಗೆ ಗಾಯಗಳಾಗಿದ್ದು, ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.