ಬೆಂಗಳೂರು: ಧೂಮಪಾನ ವಿರುದ್ಧ ಪೋಸ್ಟರ್ ಅಭಿಯಾನವನ್ನು ನಗರ ಪೊಲೀಸರು ಆರಂಭಿಸಿದ್ದಾರೆ. ಆದರೆ ವಿಚಾರಣೆಗೆ ಹಾಜರಾಗಿದ್ದ ರೌಡಿಶೀಟರ್‌ವೊಬ್ಬ (Rowdy sheeter) ಪೊಲೀಸರ ಮುಂದೆ ಸಿಗರೇಟ್ ಸೇದಿದ್ದಾನೆ. ಜತೆಗೆ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ.
ರೌಡಿಶೀಟರ್ ಸ್ಟಾರ್ ರಾಹುಲ್ ಎಂಬಾತ ಹಿಂದೊಮ್ಮೆ ತಾಕತ್ ಇದ್ದರೆ ನನ್ನನ್ನು ಹಿಡಿಯಿರಿ ಎಂದು ಪೊಲೀಸರಿಗೆ ಅವಾಜ್ ವಾಕಿ ವಿಡಿಯೊ ಮಾಡಿದ್ದ. ಇದೀಗ ಜೈಲಿನಲ್ಲಿ ಬಂಧಿಯಾಗಿದ್ದು, ನ್ಯಾಯಾಲಯಕ್ಕೆ ಪೊಲೀಸರು ಹಾಜರು ಪಡಿಸಿ ಹೊರ ಕರೆತರುವಾಗಲೂ ರೀಲ್ಸ್ ಮಾಡಿದ್ದಾನೆ. ಮಾತ್ರವಲ್ಲ ಸಿಗರೇಟ್ ಸೇದಿ ಪೊಲೀಸರ ಎದುರಿಗೆ ಹೊಗೆ ಬಿಟ್ಟಿದ್ದಾನೆ.
ಅವಾಚ್ಯ ಶಬ್ಧಗಳಿಂದ ನಿಂಧನೆ
ಕುಖ್ಯಾತ ರೌಡಿಶೀಟರ್ ರಾಹುಲ್ ಅಲಿಯಾಸ್ ಸ್ಟಾರ್ ರಾಹುಲ್ ಪೊಲೀಸ್ ಸಿಬ್ಬಂದಿ ಎದುರಿಗೆ ರಾಜಾರೋಷವಾಗಿ ಸಿಗರೇಟ್ ಸೇದಿದ್ದಾನೆ. ಆದರೆ ಸಿಬ್ಬಂದಿ ಇದ್ಯಾವುದಕ್ಕೂ ಕ್ಯಾರೆ ಎನ್ನದೆ ತಮ್ಮ ಪಾಡಿಗೆ ನಿಂತಿರುವ ವಿಡಿಯೊವನ್ನು ರಾಹುಲ್ ರೀಲ್ಸ್ ಮಾಡಿ ಹಾಕಿದ್ದಾನೆ.
ಇದನ್ನೂ ಓದಿ: Assault Case : ಪಾರ್ಕಿಂಗ್ ವಿಚಾರಕ್ಕೆ ರಕ್ತ ಬರುವಂತೆ ಮಹಿಳೆಗೆ ಹೊಡೆದ್ರಾ ಶುಲ್ಕ ವಸೂಲಿಗಾರರು!
ಇನ್ನೂ ಮೀಸೆ ಚಿಗುರದ ಈತ ಅದಾಗಲೇ ಹತ್ತಾರು ಕೇಸುಗಳಲ್ಲಿ ನಟೋರಿಯಸ್ ಆಗಿದ್ದಾನೆ. ಈ ಸ್ಟಾರ್ ರಾಹುಲ್ ನಟೋರಿಯಸ್ ರೌಡಿ ಕುಳ್ಳು ರಿಝ್ವಾನ್ ಸಹಚರನಾಗಿದ್ದು, ಹಿಂದೊಮ್ಮೆ ಪೊಲೀಸರಿಗೆ ತಾಕತ್ ಇದ್ದರೆ ನನ್ನನ್ನು ಹಿಡಿರಿ ಎಂದು ವಿಡಿಯೊ ಹರಿಬಿಟ್ಟಿದ್ದ. ಕೊಲೆ ಯತ್ನ ಮಾಡಿದ್ದಾಗಿ ಹೇಳಿ ಪೊಲೀಸರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ.
ಈ ವೇಳೆ ಆಗೀನ ಡಿಸಿಪಿ ಹರೀಶ್ ಪಾಂಡೆ ನೇತೃತ್ವದ ಇನ್ಸ್ಪೆಕ್ಟರ್‌ಗಳ ತಂಡ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು. ಕೊಲೆ ಯತ್ನ, ಸುಲಿಗೆ ಸೇರಿದಂತೆ ಗಾಂಜಾ ಕೇಸ್‌ನಲ್ಲಿ ರಾಹುಲ್ ಭಾಗಿಯಾಗಿದ್ದ. ಇಷ್ಟಾದರೂ ಪೊಲೀಸರ ಮುಂದೆ ಸಿಗರೇಟ್ ಸೇದಿ ಅದನ್ನೂ ರೀಲ್ಸ್‌ಗೆ ಹಾಕಿದ್ದಾನೆ. ಇಂತಹ ನಟೋರಿಯಸ್ ರೌಡಿಗಳಿಗೆ ಯಾವುದೇ ಕೋಟ್ಪಾ ಕಾಯ್ದೆ ಅನ್ವಯವಾಗಲ್ವ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ