Site icon Vistara News

RR nagar Police: ಡಿಸಿಪಿ ನೈಟ್ ರೌಂಡ್ಸ್ ವೇಳೆ ಕೇಳಿತು ಗೊರಕೆ ಸದ್ದು; ಠಾಣೆಯಲ್ಲೇ ನಿದ್ರೆಗೆ ಜಾರಿದ್ದ ಎಎಸ್‌ಐ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು

ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆ

#image_title

ಬೆಂಗಳೂರು: ಇಲ್ಲಿನ ಆರ್‌.ಆರ್‌ ನಗರ ಪೊಲೀಸ್‌ ಠಾಣೆಗೆ (RR nagar Police) ದಿಢೀರ್‌ ಭೇಟಿ ನೀಡಿದ ಸಿಎಆರ್‌ ಡಿಸಿಪಿ ಅರುಣಗಿರಿ ಕ್ಷಣಕಾಲ ಶಾಕ್‌ ಆಗಿದ್ದರು. ಡಿಸಿಪಿ ನೈಟ್ ರೌಂಡ್ಸ್ ವೇಳೆ ನೈಟ್ ಡ್ಯೂಟಿಯಲ್ಲಿದ್ದ ಎಎಸ್‌ಐ ನಿದ್ರೆಗೆ ಜಾರಿದ್ದರು. ಆರ್‌.ಆರ್‌ ನಗರ ಪೊಲೀಸ್‌ ಠಾಣೆಯ ಎಎಸ್‌ಐ ಕಾಂತರಾಜು ಅವರ ಕೆಲಸದ ಪರಿ ಕಂಡು ಸಿಎಆರ್‌ ಡಿಸಿಪಿ ಅರುಣಗಿರಿ ಕಿಡಿಕಾರಿದರು.

ಸಿಎಆರ್ ಡಿಸಿಪಿಯಾಗಿರುವ ಅರುಣಗಿರಿಯವರು ನೈಟ್ ರೌಂಡ್ಸ್ ವೇಳೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಎಎಸ್‌ಐ ಕಾಂತರಾಜು ಅವರು ಆರಾಮಾಗಿ ನಿದ್ದೆ ಮಾಡುತ್ತಿದ್ದರು.ಇದನ್ನು ಕಂಡ ಡಿಸಿಪಿ ಅರುಣಗಿರಿಯವರು ಮಲಗಿರುವ ಫೋಟೊ ತೆಗೆದುಕೊಂಡಿದ್ದಾರೆ.

ನಂತರ ಮೇಲಾಧಿಕಾರಿಗಳ ಸಂದರ್ಶನ ಪುಸ್ತಕದಲ್ಲಿ ಎಎಸ್‌ಐ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಿ ಎಂದು ಉಲ್ಲೇಖಿಸಿದ್ದಾರೆ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಈ ಸಮಯದಲ್ಲಿ ಪೊಲೀಸರು ಹೆಚ್ಚು ಅಲರ್ಟ್‌ ಆಗಿ ಇರಬೇಕು. ಅಪರಾಧ ಕೃತ್ಯಗಳ ಮೇಲೆ ಕಣ್ಣಿಡಬೇಕಾದ ಪೊಲೀಸರೇ ನಿದ್ದೆಗೆ ಜಾರಿದ್ದಕ್ಕೆ ಅಸಮಾಧಾನ ಹೊರಹಾಕಿದ್ದಾರೆ.

ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆ

ಆರ್‌.ಆರ್‌ ನಗರದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಿರುವ ಕಾರಣ, ಇಲ್ಲಿನ ಪೊಲೀಸ್‌ ಸಿಬ್ಬಂದಿ ಮೈಎಲ್ಲ ಕಣ್ಣಾಗಿ ಇರಬೇಕು. ಈ ಕೂಡಲೇ ಎಎಸ್‌ಐ ಕಾಂತರಾಜು ವಿರುದ್ಧ ಶಿಸ್ತುಕ್ರಮ ಕೈಗೊಳ್ಳಿ. ಇದು ಠಾಣೆಯ ಇತರೆ ಸಿಬ್ಬಂದಿಗೂ ಎಚ್ಚರಿಕೆ ನೀಡಿದಂತಾಗುತ್ತದೆ ಎಂದು ಉಲ್ಲೇಖಸಿದ್ದಾರೆ.

ತೀರ್ಥಹಳ್ಳಿ ಮೀನು ಮಾರುಕಟ್ಟೆಯಲ್ಲಿ ರಕ್ತದ ಮಡುವಿನಲ್ಲಿ ಪೊಲೀಸ್‌ ಶವ ಪತ್ತೆ; ಕೊಲೆ ಶಂಕೆ

ಶಿವಮೊಗ್ಗ: ಇಲ್ಲಿನ ತೀರ್ಥಹಳ್ಳಿಯಲ್ಲಿ ಪೊಲೀಸ್ ಕಾನ್‌ಸ್ಟೆಬಲ್ (Police Constable) ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆ ಆಗಿದೆ. ತೀರ್ಥಹಳ್ಳಿ ಪಟ್ಟಣದ ಮೀನು ಮಾರುಕಟ್ಟೆಯಲ್ಲಿ ರಕ್ತದ ಮಡುವಿನಲ್ಲಿ ಪೇದೆ ಪೂರ್ಣೇಶ್ ಎಂಬವರ ಶವ ಪತ್ತೆ ಆಗಿದೆ.

ಪೂರ್ಣೇಶ್‌ ಅವರ ತಲೆಯ ಮೇಲೆ ಕಲ್ಲು ಹೊತ್ತು ಹಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆಗುಂಬೆ, ತೀರ್ಥಹಳ್ಳಿ, ಮಾಳೂರು, ಕುಂಸಿಯಲ್ಲಿ ಪೂರ್ಣೇಶ್ ಸೇವೆ ಸಲ್ಲಿಸಿದ್ದರು. ಆದರೆ ಇತ್ತೀಚಿಗೆ ಮದ್ಯ ವ್ಯಸನಿಯಾಗಿದ್ದ ಪೂರ್ಣೇಶ್​, ಕೆಲಸದಿಂದ ವಜಾಗೊಂಡಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: Pocso Case: ತಾತಗುಣಿ ನಿರ್ಜನ ಪ್ರದೇಶದಲ್ಲಿ ಪಿಯು ವಿದ್ಯಾರ್ಥಿನಿ ಮೇಲೆ ನಡೆಯಿತಾ ಗ್ಯಾಂಗ್ ರೇಪ್; ಪೊಲೀಸರಿಗೆ ಸಿಕ್ತು ಯುವಕರ ಫೋಟೊ!

ಶುಕ್ರವಾರ ತಡರಾತ್ರಿ ಹತ್ಯೆ ನಡೆದಿರುಬಹುದೆಂದು ಅಂದಾಜಿಸಲಾಗಿದ್ದು, ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ವೈಯಕ್ತಿಕ ಕಲಹದಿಂದಾಗಿ ಹತ್ಯೆಯಾಗಿರಬಹುದೆಂದು ಶಂಕಿಸಲಾಗಿದೆ. ಸದ್ಯ ತೀರ್ಥಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version