Site icon Vistara News

Karnataka Election 2023: ಕಾರಿನಲ್ಲಿ ದಾಖಲೆ ಇಲ್ಲದೆ 4.55 ಲಕ್ಷ ರೂಪಾಯಿ ಸಾಗಾಟ; ಲಕ್ಷ್ಮೇಶ್ವರ ಚೆಕ್‌ಪೋಸ್ಟ್‌ನಲ್ಲಿ ವಶ

Rs 4.55 lakh in car to be transported without documents Seized at Lakshmeshwar check post Karnataka Election 2023 updates

ಗದಗ: ರಾಜ್ಯ ವಿಧಾನಸಭಾ ಚುನಾವಣೆ (Karnataka Election 2023) ಸಮೀಪಿಸುತ್ತಿದ್ದಂತೆ ಅಕ್ರಮ ಹಣದ ಸಾಗಾಟ ಹೆಚ್ಚಳವಾಗುವ ಪ್ರಕರಣಗಳು ಕಂಡುಬರುತ್ತಿವೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಎಲ್ಲ ಕಡೆ ಹದ್ದಿನ ಕಣ್ಣು ಇಡುವಂತೆ ಸೂಚನೆ ನೀಡಿದೆ. ಇದರ ಭಾಗವಾಗಿ ರಾಜ್ಯದ ಹಲವು ಕಡೆ ಈಗ ಚೆಕ್‌ಪೋಸ್ಟ್‌ಗಳನ್ನು ಹಾಕಲಾಗಿದ್ದು, ವಾಹನಗಳ ತಪಾಸಣೆ ನಡೆಯುತ್ತಿದೆ. ಅಕ್ರಮ ಹಣ ಕಂಡುಬಂದರೆ ವಶಕ್ಕೆ ಪಡೆದುಕೊಳ್ಳಲಾಗುತ್ತಿದೆ. ಈಗ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ರಾಮಗೇರಿ ಚಕ್ ಪೋಸ್ಟ್ ಬಳಿ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಾಟ ಮಾಡಲಾಗುತ್ತಿದ್ದ 4.55 ಲಕ್ಷ ರೂಪಾಯಿಯನ್ನು ವಶಕ್ಕೆ ಪಡೆಯಲಾಗಿದೆ.

ಸೂಕ್ತ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಾಟ ಮಾಡುವಾಗ ಪೊಲೀಸರಿಂದ ಜಪ್ತಿ ಮಾಡಲಾಗಿದೆ. ಲಕ್ಷ್ಮೇಶ್ವರ ತಾಲೂಕಿನ ಬಾಲೆಹೋಸೂರಿನಿಂದ ಹುಬ್ಬಳ್ಳಿಗೆ ಕಾರಿನ ಮೂಲಕ ಹೋಗಲಾಗುತ್ತಿತ್ತು. ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ವೇಳೆ ಹಣ ಪತ್ತೆಯಾಗಿದೆ.

ಗದಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಸ್ ನೇಮಗೌಡ ಮಾರ್ಗದರ್ಶನದಲ್ಲಿ ಲಕ್ಷ್ಮೇಶ್ವರ ಪಿಎಸ್‌ಐ ಪ್ರಕಾಶ ಡಿ. ನೇತೃತ್ವದ ತಂಡದಿಂದ ಪರಿಶೀಲನೆ ನಡೆಸಲಾಗಿದೆ. ಹಣದ ಬಗ್ಗೆ ದಾಖಲೆ ಕೇಳಿದಾಗ ಕಾರಿನಲ್ಲಿದ್ದವರ ಬಳಿ ಇರಲಿಲ್ಲ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ದಾಖಲೆ ತೋರಿಸಿ ಹಣವನ್ನು ಪಡೆದುಕೊಂಡು ಹೋಗುವಂತೆ ಸೂಚನೆ ನೀಡಲಾಗಿದೆ. ಲಕ್ಷ್ಮೇಶ್ವರ ಪೊಲೀಸ್‌ ಠಾಣೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: HD DeveGowda: ಹಾಸನ ಜೆಡಿಎಸ್‌ ದಂಗಲ್‌ಗೆ ದೇವೇಗೌಡರ ಬ್ರೇಕ್‌; ಭವಾನಿಗಿಲ್ಲ ಟಿಕೆಟ್‌?: ಇದರ ಹಿಂದಿನ ಕಾರಣವೇನು?

ಶಾಲೆ ಮುಂಭಾಗವೇ ಚೂರಿ ಇರಿದ ಅಪ್ರಾಪ್ತ ಗೆಳೆಯ

ರಾಯಚೂರು: ಇಲ್ಲಿನ ಜಯರಾಭಾದ್ ಶಾಲೆ ಮುಂಭಾಗ ತಡರಾತ್ರಿ ಬಾಲಕರಿಬ್ಬರು ಗಲಾಟೆ (Raichur News) ಮಾಡಿಕೊಂಡಿದ್ದಾರೆ. ಈ ಗಲಾಟೆಯಲ್ಲಿ ಬಾಲಕನೊಬ್ಬ ತನ್ನ ಸ್ನೇಹಿತನಿಗೆ ಚೂರಿಯಿಂದ ಇರಿದಿದ್ದಾನೆ.

ಕ್ಷುಲ್ಲಕ ಕಾರಣಕ್ಕೆ ಬಾಲಕರಿಬ್ಬರ ನಡುವೆ ತಡರಾತ್ರಿ ಗಲಾಟೆ ನಡೆದಿದೆ. ಈ ವೇಳೆ ಬಾಲಕ ಚೂರಿ ಇರಿದು ಕ್ರೌರ್ಯ ಮೆರೆದಿದ್ದಾನೆ. ಗಾಯಗೊಳಗಾದ ಬಾಲಕ ಹಾಗೂ ಚೂರಿ ಇರಿದ ಬಾಲಕರಿಬ್ಬರೂ ಗೆಳೆಯರು ಎಂದು ತಿಳಿದು ಬಂದಿದೆ. ಗೆಳೆಯರಿಬ್ಬರೂ ಶಾಲೆ ಬಿಟ್ಟು ಓಡಾಡಿಕೊಂಡಿದ್ದರು ಎನ್ನಲಾಗಿದೆ.

ಗಾಯಾಳು ಬಾಲಕರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಬಾಲಕನ ಕಿವಿಯ ಭಾಗಕ್ಕೆ ಚೂರಿ ಇರಿಯಲಾಗಿದೆ. ಆ ಚೂರಿಯನ್ನು ತೆಗೆಯಲು ವೈದ್ಯರು ಹರಸಾಹಸ ಪಡಬೇಕಾಯಿತು. ಹೀಗಾಗಿ ರಿಮ್ಸ್‌ನಿಂದ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲವು ಬಾರಿ ಕಾರು ಹತ್ತಿಸಿ ರೌಡಿಶೀಟರ್ ಕೊಲೆ ಯತ್ನ!

ಬೆಂಗಳೂರು: ರಾಜಧಾನಿಯಲ್ಲಿ ರೌಡಿಗಳ ಪುಂಡಾಟಿಕೆ ಹಾಗೂ ಮಾರಕ ಕೃತ್ಯಗಳು ಮಿತಿ ಮೀರಿದ್ದಕ್ಕೆ ಇನ್ನೊಂದು ಉದಾಹರಣೆಯ ಪ್ರಕರಣವೊಂದು ನಡೆದಿದೆ. ಸಚಿವರೊಬ್ಬರ ಮನೆ ಮುಂದೆಯೇ ಅಮಾನುಷವಾದ ಘಟನೆ ನಡೆದಿದೆ.

ಇದನ್ನೂ ಓದಿ: Karnataka Election 2023: ನಾನು, ಸಿದ್ದರಾಮಯ್ಯ ಅನಿವಾರ್ಯ ಕಾರಣಕ್ಕಾಗಿ ಕ್ಷೇತ್ರ ಬಿಟ್ಟೆವು: ಶ್ರೀರಾಮುಲು ಹೀಗೆ ಹೇಳಿದ್ಯಾಕೆ?

ರೌಡಿಗಳು ತಮ್ಮ ಸ್ನೇಹಿತನ ಮೇಲೆ ಹಲವಾರು ಬಾರಿ ಕಾರು ಹತ್ತಿಸಿ ಕೊಲೆ ಮಾಡಲು ಯತ್ನಿಸಿದ್ದಾರೆ. ಇದು ನಡೆದಿರುವುದು ಸಚಿವೆ ಶಶಿಕಲಾ ಜೊಲ್ಲೆ ಅವರ ಮನೆಯ ಮುಂದೆಯೇ ಆಗಿದೆ. ಬೆಳ್ಳಂಬೆಳಗ್ಗೆ ನಡೆದ ಈ ಘಟನೆಯಿಂದ ಜನ ಬೆಚ್ಚಿಬಿದ್ದಿದ್ದಾರೆ.

ಮಾರ್ಚ್ 21ರ ಮುಂಜಾನೆ 5.30ರಿಂದ 6 ಗಂಟೆ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಹೈಗ್ರೌಂಡ್ ಠಾಣೆಯಲ್ಲಿ ರೌಡಿಶೀಟರ್ ಆಗಿರುವ ಗಗನ್ ಶರ್ಮಾ ಎಂಬಾತನ ಮೇಲೆ ಆತನ ಸ್ನೇಹಿತರೇ ಆದ ಸುನಿಲ್ ಕುಮಾರ್, ಅರುಣ್, ಕೃಷ್ಣ ಎಂಬುವವರು ಈ ವಿಕೃತಿ ಮೆರೆದಿದ್ದಾರೆ.

ಬಿಬಿಎಂಪಿ ಟ್ಯಾಕ್ಸ್ ಕಲೆಕ್ಟರ್ ಆಗಿರುವ ಸುನಿಲ್ ಕುಮಾರ್ ಹಾಗೂ ಗಗನ್‌ ನಡುವೆ ಆಸ್ತಿ ವಿಚಾರಕ್ಕಾಗಿ ಮನಸ್ತಾಪ ಉಂಟಾಗಿತ್ತು. ಮಾರ್ಚ್ 20ರಂದು ರಾತ್ರಿ 10 ಗಂಟೆಗೆ ಮಾತನಾಡಬೇಕು ಎಂದು ಗಗನ್‌ನನ್ನು ಸುನಿಲ್‌ ಫ್ರೇಜರ್ ಟೌನ್ ಬಳಿ ಕರೆಸಿಕೊಂಡಿದ್ದ. ಅಲ್ಲಿಂದ ಕಾರಿನಲ್ಲಿ ಕೂರಿಸಿಕೊಂಡು ಸಿಟಿ ರೌಂಡ್ಸ್ ಹಾಕಿದ್ದು, 21ರ ಬೆಳಗ್ಗೆ ಜಯಮಹಲ್ ರಸ್ತೆ ಬಳಿ ಕಾರು ನಿಲ್ಲಿಸಿದ್ದಾರೆ. ಕಾರಿನ ಒಳಗೇ ಗಲಾಟೆ ಮಾಡಿಕೊಂಡಿದ್ದು, ಸುನಿಲ್ ಸೇರಿ ಮೂವರಿಂದ ಗಗನ್ ಮೇಲೆ ಹಲ್ಲೆ ನಡೆದಿದೆ. ದೊಣ್ಣೆ, ಕೈಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ ಕೆಳಗೆ ತಳ್ಳಿ ಮೂರ್ನಾಲ್ಕು ಬಾರಿ ಕಾರು ಹತ್ತಿಸಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ: Drowned in river : ಯುಗಾದಿ ಪುಣ್ಯ ಸ್ನಾನ ಮಾಡಲು ಬಂದ ವ್ಯಕ್ತಿ ತ್ರಿವೇಣಿ ಸಂಗಮದಲ್ಲಿ ಮುಳುಗಿ ಸಾವು

ಘಟನೆಯಲ್ಲಿ ಗಗನ್ ಕಾಲು, ಪಕ್ಕೆಲಬು ಮುರಿದಿದ್ದು, ಕಣ್ಣು, ಮುಖ, ಕೈಗಳಿಗೆ ಗಂಭೀರ ಗಾಯಗಳಾಗಿವೆ. ಗಾಯಾಳು ರೌಡಿಶೀಟರ್ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಸ್ಥಳೀಯರು ಜೆಸಿ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಗಾಯಾಳುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೆಸಿ ನಗರ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಆರೋಪಿ ಸುನಿಲ್‌ನನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಶೋಧ ನಡೆದಿದೆ.

Exit mobile version