ವಿಜಯಪುರ: ವಿಜಯಪುರದ ಗುರುದೇವ ರಾನಡೆ ಆಶ್ರಮಕ್ಕೆ ಆರ್‌ಎಸ್‌ಎಸ್ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಭೇಟಿ ನೀಡಿದ್ದರು. ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಮೋಹನ್ ಭಾಗವತ್ ಎರಡು ದಿನ ಇದೇ ಆಶ್ರಮದಲ್ಲಿದ್ದರು.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಿಂಬಾಳ ಗ್ರಾಮದಲ್ಲಿ ಆಶ್ರಮವಿದೆ. ಎರಡು ದಿನಗಳ ಕಾಲ ವಿಶ್ರಾಂತಿಗೆ ಆಗಮಿಸಲಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಬಿಜೆಪಿ ನಾಯಕ ಪ್ರಕಾಶ ಜಾವಡೆಕರ್ ಹಾಗೂ ಮೋಹನ್ ಭಾಗವತ್ ಅವರು ಖಾಸಗಿ ಸಮಾಲೋಚನೆಯಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ. ಅವರ ಕಾರ್ಯಕ್ರಮಕ್ಕೆ ಸಾರ್ವಜನಿಕ ಭೇಟಿಗೆ ಅವಕಾಶ ಇರಲಿಲ್ಲ. ಕೆಲವೇ ಆರ್‌ಎಸ್‌ಎಸ್ ಕಾರ್ಯಕರ್ತರೊಂದಿಗೆ ಮೋಹನ್ ಭಾಗವತ್ ಮಾತುಕತೆ ನಡೆಸಿದ್ದಾರೆ.
ಆಶ್ರಮದಲ್ಲಿ ಕಾರ್ಯಕ್ರಮದ ಬಳಿಕ ಸ್ಥಳೀಯ ಕೆಲವು ಬಿಜೆಪಿ ಮುಖಂಡರು ಭೇಟಿ ನೀಡಿದ್ದರು. ಮೋಹನ್ ಭಾಗವತ್ ಹಾಗೂ ಪ್ರಕಾಶ ಜಾವಡೇಕರ್ ರ ಈ ಭೇಟಿ ಜಿಲ್ಲೆಯ ರಾಜಕಾರಣ ಹಾಗೂ ಆರ್‌ಎಸ್‌ಎಸ್ ವಲಯದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಯಾವುದೋ ಪ್ರಮುಖ ವಿಚಾರವನ್ನು ಇಬ್ಬರೂ ನಾಯಕರು ಚರ್ಚಿಸಿದ್ದಾರೆ ಎಂದೇ ಹೇಳಲಾಗುತ್ತಿದೆ.
ಇದನ್ನೂ ಓದಿ: ಬಿಜೆಪಿಯವರು ಆರ್‌ಎಸ್‌ಎಸ್ ಮುಖ್ಯಸ್ಥರಾಗಿ ಮಹಿಳೆಯನ್ನು ಆಯ್ಕೆ ಮಾಡಲಿ ಎಂದ ಸಿದ್ದರಾಮಯ್ಯ