ಬೆಂಗಳೂರು: ಇಂಡಿಯನ್ ಸೊಸೈಟಿ ಫಾರ್ ಕ್ಲಿನಿಕಲ್ ರೀಸರ್ಚ್ (ಐ.ಎಸ್.ಸಿ.ಆರ್.) ವತಿಯಿಂದ ಜೂ.30 ರಂದು ಭಾನುವಾರ ಬೆಳಿಗ್ಗೆ 5 ಗಂಟೆಯಿಂದ 9 ರವರೆಗೆ ಬೆಂಗಳೂರಿನ ಎಚ್.ಎಸ್.ಆರ್. ಬಡಾವಣೆಯ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ʼರನ್4ರೀಸರ್ಚ್ʼ (Run4Research) ಕ್ಲಿನಿಕಲ್ ರೀಸರ್ಚ್ ಕುರಿತು ಅರಿವನ್ನು ಮೂಡಿಸಲು ಸವಾಲಿನ ಓಟ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಈ ಸವಾಲಿನ ಓಟವು ಭಾರತದ ಉಜ್ವಲ ಕ್ಲಿನಿಕಲ್ ರೀಸರ್ಚ್ ಸಮುದಾಯಕ್ಕೆ ಅರಿವನ್ನು ಉತ್ತೇಜಿಸುವ ಗುರಿ ಹೊಂದಿದೆ. ಅನುಷ್ಠಾನದ ಪಾಲುದಾರ ಸೆಲ್ಲುಲಾದೊಂದಿಗೆ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ 3ಕೆ, 5ಕೆ ಮತ್ತು 10ಕೆ ವಿಭಾಗಗಳಿದ್ದು, ಎಲ್ಲ ಫಿಟ್ನೆಸ್ ಹಂತಗಳ ಭಾಗವಹಿಸುವವರಿಗೆ ಅವಕಾಶ ನೀಡುತ್ತದೆ. ಐ.ಸಿ.ಎಸ್.ಆರ್. ಕ್ಲಿನಿಕಲ್ ರೀಸರ್ಚ್ ಕ್ಷೇತ್ರದಲ್ಲಿ ತೊಡಗಿಕೊಂಡ ಮತ್ತು ಆರೋಗ್ಯದ ಉತ್ಸಾಹಿಗಳನ್ನು ಈ ಉತ್ಸಾಹಕರ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನಿಸುತ್ತಿದೆ.
ಇದನ್ನೂ ಓದಿ: Post Office: ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳ ಬಡ್ಡಿದರ ಬದಲಾವಣೆ ಇಲ್ಲ; ಬಡ್ಡಿಯ ಪಟ್ಟಿ ಇಲ್ಲಿದೆ
ಇಂಡಿಯನ್ ಸೊಸೈಟಿ ಫಾರ್ ಕ್ಲಿನಿಕಲ್ ರೀಸರ್ಚ್ (ಐ.ಎಸ್.ಸಿ.ಆರ್.) ಭಾರತದಲ್ಲಿ ನೈತಿಕ ಮತ್ತು ಉನ್ನತ ಗುಣಮಟ್ಟದ ಕ್ಲಿನಿಕಲ್ ರೀಸರ್ಚ್ ಉತ್ತೇಜಿಸಲು ಬದ್ಧವಾದ ವೃತ್ತಿಪರ ಸಂಸ್ಥೆಯಾಗಿದೆ. ಐ.ಸಿ.ಎಸ್.ಆರ್.ನ ಉದ್ದೇಶ ಪಾಲುದಾರರೊಂದಿಗೆ ಸಹಯೋಗ ರೂಪಿಸುವುದು ಮತ್ತು ಆರೋಗ್ಯಸೇವಾ ಫಲಿತಾಂಶಗಳನ್ನು ಸುಧಾರಿಸಲು ಕ್ಲಿನಿಕಲ್ ರೀಸರ್ಚ್ ಸುಧಾರಣೆಯನ್ನು ಪ್ರತಿಪಾದಿಸುವುದು. ಹಲವಾರು ಉಪಕ್ರಮಗಳ ಮೂಲಕ ಐ.ಸಿ.ಎಸ್.ಆರ್. ದೇಶದಲ್ಲಿ ಕ್ಲಿನಿಕಲ್ ಟ್ರಯಲ್‌ಗಳ ವೈಜ್ಞಾನಿಕ, ನೈತಿಕ ಮತ್ತು ಕಾರ್ಯಾಚರಣೆಯ ಆಯಾಮಗಳನ್ನು ಹೆಚ್ಚಿಸಲು ಶ್ರಮಿಸುತ್ತದೆ.
ಇದನ್ನೂ ಓದಿ: Bengaluru Power Cut: ಬೆಂಗಳೂರು ನಿವಾಸಿಗಳೇ ಗಮನಿಸಿ; ಜೂ.29ರಂದು ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ
ಇಂಡಿಯನ್ ಸೊಸೈಟಿ ಫಾರ್ ಕ್ಲಿನಿಕಲ್ ರೀಸರ್ಚ್ ಅಧ್ಯಕ್ಷ ಡಾ. ಸನಿಶ್ ಡೇವಿಸ್ ಈ ಕಾರ್ಯಕ್ರಮದ ಕುರಿತು ಮಾತನಾಡಿ, ಕ್ಲಿನಿಕಲ್ ರೀಸರ್ಚ್ ರೋಗಿಗಳಿಗೆ ಹೊಸ ಚಿಕಿತ್ಸೆಗಳನ್ನು ತರುವಲ್ಲಿ ಅತ್ಯಂತ ಮುಖ್ಯವಾಗಿದೆ. ಕ್ಲಿನಿಕಲ್ ಟ್ರಯಲ್‌ಗಳಲ್ಲಿ ಕಠಿಣ ಪರೀಕ್ಷೆಗಳಿಲ್ಲದೆ ಹೊಸ ಔಷಧಗಳು, ಲಸಿಕೆಗಳು ಮತ್ತು ವೈದ್ಯಕೀಯ ಸಾಧನಗಳನ್ನು ಬಳಕೆಗೆ ಅನುಮೋದಿಸಲು ಸಾಧ್ಯವಿಲ್ಲ. ಈ ಕಾರ್ಯಕ್ರಮವು ರೋಗಿಗಳಿಗೆ ಕ್ಲಿನಿಕಲ್ ಟ್ರಯಲ್‌ಗಳ ಪ್ರಾಮುಖ್ಯತೆ ಕುರಿತು ಮತ್ತು ಹೇಗೆ ಅವರ ಭಾಗವಹಿಸುವಿಕೆಯು ಅವರಿಗೆ ಮತ್ತು ಭವಿಷ್ಯದ ತಲೆಮಾರುಗಳಿಗೆ ಪ್ರಯೋಜನವಾಗಬಲ್ಲದು ಎಂದು ಅರಿವನ್ನು ಮೂಡಿಸುವ ಗುರಿ ಹೊಂದಿದೆ ಎಂದು ತಿಳಿಸಿದ್ದಾರೆ.