Site icon Vistara News

Saanya iyer : ಪುತ್ತೂರು ಕಂಬಳದಲ್ಲಿ ಸೆಲ್ಫಿ ಕಿರಿಕ್‌, ಯುವಕನ ಕಪಾಳಕ್ಕೆ ಬಾರಿಸಿದ ಸಾನ್ಯಾ ಅಯ್ಯರ್‌

selfie with saanya iyer

#image_title

ಮಂಗಳೂರು: ಪುಟ್ಟ ಗೌರಿ ಮದುವೆ ಧಾರಾವಾಹಿ ಮೂಲಕ ಮನೆ ಮಾತಾಗಿ, ಬಿಗ್‌ ಬಾಸ್‌ ಒಟಿಟಿ ಮತ್ತು ಪ್ರದಾನ ಬಿಗ್‌ ಬಾಸ್‌ ಕಾರ್ಯಕ್ರಮದ ಮೂಲಕ ತನ್ನ ಜನಪ್ರಿಯತೆ ಹೆಚ್ಚಿಸಿಕೊಂಡ ನಟಿ ಸಾನ್ಯಾ ಅಯ್ಯರ್‌ (Saanya iyer) ಈಗ ಕಿರಿಕ್‌ ಮಾಡಿದ ಯುವಕನ ಕಪಾಳಕ್ಕೆ ಬಾರಿಸಿ ಸುದ್ದಿ ಮಾಡಿದ್ದಾರೆ.

ಸಾನ್ಯಾ ಅಯ್ಯರ್‌ ಕಳೆದ ಭಾನುವಾರ ಪುತ್ತೂರಿನಲ್ಲಿ ನಡೆದ ಕೋಟಿ-ಚೆನ್ನಯ ಕಂಬಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಒಟಿಟಿ ಮತ್ತು ಪ್ರಧಾನ ಬಿಗ್‌ ಬಾಸ್‌ನಲ್ಲಿ ಬಹುಕಾಲ ಜತೆಗಿದ್ದ ಬಿಗ್‌ ಬಾಸ್‌ ಸೀಸನ್‌ ೯ರ ವಿನ್ನರ್‌ ರೂಪೇಶ್‌ ಶೆಟ್ಟಿ ಅವರ ಜತೆ ಆತ್ಮೀಯವಾಗಿರುವ ಸಾನ್ಯಾ ಕರಾವಳಿಯ ಹುಲಿ ವೇಷ, ದೈವಾರಾಧನೆ, ಜಾತ್ರೆ, ಕಂಬಳ ಮೊದಲಾದ ವಿಶೇಷತೆಗಳನ್ನು ತಿಳಿದುಕೊಂಡಿದ್ದರು. ಇದಕ್ಕೆ ಪೂರಕವಾಗಿ ಪುತ್ತೂರು ಕಂಬಳ ಆಯೋಜಕರು ಆಕೆಯನ್ನು ಕಂಬಳಕ್ಕೆ ಆಹ್ವಾನಿಸಿದ್ದರು.

ಇದಕ್ಕೆ ತುಂಬ ಪ್ರೀತಿಯಿಂದ ಬಂದಿದ್ದ ಸಾನ್ಯಾ ಅವರು ಕಂಬಳದ ಬಗ್ಗೆ, ಅದು ಕೊಡುವ ಶಕ್ತಿ ಮತ್ತು ವಿಶೇಷತೆಗಳ ಬಗ್ಗೆ ಬಹುನೆಲೆಗಳಲ್ಲಿ ವಿಶ್ಲೇಷಿಸಿ ಎಲ್ಲರ ಮನಗೆದ್ದಿದ್ದರು. ಆದರೆ, ಅಂತಿಮವಾಗಿ ಅಲ್ಲೊಂದು ಅಚಾತುರ್ಯದ ಘಟನೆ ನಡೆದು ಅವರ ಮನಸು ನೋಯುವಂತಾಯಿತು.

ಆಯೋಜಕರಿಗೆ ಸಾನ್ಯಾ ಅಯ್ಯರ್‌ ತರಾಟೆ

ಕಂಬಳದಲ್ಲಿ ಭಾಗವಹಿಸಿದ್ದ ಸಾನ್ಯಾ ಅಯ್ಯರ್‌ ಅವರ ಜತೆ ಫೋಟೊ ತೆಗೆಸಿಕೊಳ್ಳಲು ತುಂಬಾ ಜನ ಮುಗಿಬಿದ್ದಿದ್ದರು. ಸಾನ್ಯಾ ಅಯ್ಯರ್‌ ಯಾವುದೇ ಹಮ್ಮುಬಿಮ್ಮು ತೋರದೆ ಸಹಕಾರವನ್ನೂ ಕೊಟ್ಟಿದ್ದರು. ಈ ನಡುವೆ, ಸಂಜೆ ಸಭಾ ಕಾರ್ಯಕ್ರಮ ಮುಗಿಸಿ ಮರಳಿದ್ದ ಸಾನ್ಯಾ ಮಧ್ಯರಾತ್ರಿ ಸ್ನೇಹಿತೆಯರು, ಸ್ನೇಹಿತರ ಜತೆ ಕಂಬಳ ವೀಕ್ಷಣೆಗೆ ಮರಳಿ ಬಂದಿದ್ದರು. ಹೀಗೆ ಆಗಮಿಸಿದಾಗಲೂ ಸೆಲ್ಫೀ ಕ್ರೇಜ್‌ ಕಡಿಮೆಯಾಗಿರಲಿಲ್ಲ.

ಹಲವಾರು ಯುವಕರು ಫೋಟೊ ತೆಗೆಸಿಕೊಂಡಿದ್ದರು. ಒಂದು ಹಂತದಲ್ಲಿ ಒಬ್ಬ ಯುವಕ ಈ ವೇಳೆ ಸೆಲ್ಫಿ ತೆಗೆಯುವಾಗ ಸಾನ್ಯ ಮತ್ತು ಸ್ನೇಹಿತೆಯರ ಕೈ ಎಳೆದಿದ್ದ. ಮೊದಲೇ ರಫ್‌ ಎಂಡ್‌ ಟಫ್‌ ಪ್ರವೃತಿ ಹೊಂದಿರುವ ಸಾನ್ಯಾಗೆ ಇದನ್ನು ಸಹಿಸಲು ಆಗಲಿಲ್ಲ. ಕೂಡಲೇ ಅವರು ಯುವಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಆ ಯುವಕ ಕೂಡಾ ಸಾನ್ಯಾಗೆ ಕೈ ಮಾಡಿದ್ದಾನೆ.

ಈ ವೇಳೆ ಅಲ್ಲೇ ಇದ್ದ ಸ್ಥಳೀಯ ಆಟೋ ಚಾಲಕರು ಯುವಕನನ್ನು ಎಳೆದೊಯ್ದು ಚೆನ್ನಾಗಿ ಬಾರಿಸಿ ಬುದ್ಧಿ ಕಲಿಸಿದರು. ಈ ನಡುವೆ, ಸಾನ್ಯಾ ಅಯ್ಯರ್‌ ಮತ್ತು ಗೆಳತಿಯರು ಕಂಬಳ ಆಯೋಜಕರನ್ನು ತರಾಟೆ ತೆಗೆದುಕೊಂಡರು.

ಇದನ್ನೂ ಓದಿ | Bigg Boss Kannada | ಕರಾವಳಿ ಕುವರ ರೂಪೇಶ್‌ ಶೆಟ್ಟಿ ಮುಡಿಗೆ ಬಿಗ್‌ಬಾಸ್‌ ಕಿರೀಟ

Exit mobile version