ಮೈಸೂರು: ಶಬರಿಮಲೆಗೆ ಯಾತ್ರೆ (Sabarimala yatre) ತೆರಳಿದ್ದ ಮೈಸೂರಿನ ಅಯ್ಯಪ್ಪ ಭಕ್ತರ ಮೇಲೆ ಕಾಲಡಿ ಹೆದ್ದಾರಿಯಲ್ಲಿ ಹಲ್ಲೆ ನಡೆಸಿದೆ. ಕಾರು ಚಾಲಕ ಅಜಾಗರೂಕತೆಯಿಂದ ಕಾರು ಚಲಾಯಿಸಿಕೊಂಡು ಮೈಸೂರಿನ ಭಕ್ತರಿದ್ದ ಟೆಂಪೋ ಟ್ರಾವೆಲರ್‌ಗೆ ಡಿಕ್ಕಿ ಹೊಡೆದಿದ್ದರೂ ಕನ್ನಡಿಗರ ಮೇಲೆಯೇ ಏರಿ ಬಂದಿದ್ದರು. ಕೊನೆಗೆ ಸಿಸಿಟಿವಿ ಫೂಟೇಜ್ ಪರಿಶೀಲನೆ ವೇಳೆ ಸತ್ಯ ಗೊತ್ತಾಗಿ ಪೊಲೀಸರು ಕನ್ನಡಿಗ ಭಕ್ತರ ಕ್ಷಮೆ ಯಾಚಿಸುವಂತೆ ಮಾಡಿದರು.
ಮೈಸೂರಿನಿಂದ ತೆರಳಿದ್ದ ಅಯ್ಯಪ್ಪ ಭಕ್ತರು ಕಾಲಡಿ ಹೆದ್ದಾರಿಯಲ್ಲಿ ಸಾಗುತ್ತಿದ್ದಂತೆಯೇ ಶಬರಿಮಲೆಗೆ ಇನ್ನು ಕೆಲವೇ ಕಿಲೋಮೀಟರ್ ಬಾಕಿ ಇರುತ್ತಿದ್ದಂತೆಯೇ ಅವರು ಸಾಗುತ್ತಿದ್ದ ಟೆಂಪೋ ಟ್ರಾವೆಲರ್‌ಗೆ ಕಾರೊಂದು ಡಿಕ್ಕಿ ಹೊಡೆದಿತ್ತು.
ಕಾರು ಚಾಲಕನ ಅಜಾಗರೂಕತೆಯಿಂದಲೇ ಈ ಘಟನೆ ನಡೆದಿದ್ದರೂ ಕಾರಿನಲ್ಲಿದ್ದವರು ಟೆಂಟೋ ಟ್ರಾವೆಲರ್ ಚಾಲಕನ ಮೇಲೆಯೇ ಏರಿ ಹೋಗಿದ್ದಾರೆ. ಇದನ್ನು ಪ್ರಶ್ನೆ ಮಾಡಿದ ಕರ್ನಾಟಕದ ಅಯ್ಯಪ್ಪ ಭಕ್ತರ ಮೇಲೂ ಹಲ್ಲೆ ನಡೆದಿದೆ. ಜತೆಗೆ ಸ್ಥಳೀಯರು ಕೂಡಾ ಸೇರಿಕೊಂ)ಡು ಟ್ರಾವೆಲರ್ ಚಾಲಕನದೇ ತಪ್ಪು ಎಂದು ವಾದಿಸಿದರು. ಈ ನಡುವೆ ಟ್ರಾವೆಲರ್‌ನಲ್ಲಿದ್ದವರು ಶಬರಿಮಲೆಗೆ ತೆರಳುತ್ತಿದ್ದ ಕರ್ನಾಟಕದ ಅಯ್ಯಪ್ಪ ಭಕ್ತರಿಗೆ ಮನವಿ ಮಾಡಿದರು. ಕನ್ನಡಿಗರ ಮೇಲೆ ಹಲ್ಲೆ ನಡೆದಿದೆ, ಬಂದು ರಕ್ಷಿಸಿ ಎಂದು ಕೋರಿದರು.
ವಿಷಯ ತಿಳಿದು ಸ್ಥಳಕ್ಕೆ ಬಂದ ಕೇರಳ ಪೊಲೀಸರು ಪರಿಸ್ಥಿತಿಯನ್ನು ಶಾಂತಗೊಳಿಸಿದರು. ಸಿಸಿಟಿವಿ ದೃಶ್ಯ ಪರಿಶೀಲಿಸಿದ ಬಳಿಕ ಕರ್ನಾಟಕ ಅಯ್ಯಪ್ಪ ಭಕ್ತರ ಕ್ಷಮೆ ಕೇಳುವಂತೆ ಮಾಡಿದರು.
ಇದನ್ನೂ ಓದಿ | Sabarimala News | ಶಬರಿಮಲೆಗೆ ಮೊದಲ ದಿನವೇ ಭಾರಿ ಸಂಖ್ಯೆಯಲ್ಲಿ ಭಕ್ತರ ಆಗಮನ