Site icon Vistara News

Sachin Tendulkar : ಮುದ್ದೇನಹಳ್ಳಿಯಲ್ಲಿ ಕ್ರಿಕೆಟ್​ ಆಡಲಿದ್ದಾರೆ ಸಚಿನ್​, ಯುವರಾಜ್​ ಸಿಂಗ್​

Yuvarraj Singh

ಬೆಂಗಳೂರು: ಕ್ರಿಕೆಟ್ ಕೇವಲ ಆಟವಲ್ಲ. ಕೆಲವರಿಗೆ ಅದು ಆರಾಧನೆ. ಅದು ಎಲ್ಲರನ್ನೂ ಒಂದುಗೂಡಿಸುವ ಪ್ರಬಲ ಶಕ್ತಿ. ಹಲವು ಸಂದರ್ಭಗಳಲ್ಲಿ ಈ ಹೇಳಿಕೆ ಸಾಬೀತಾಗಿದೆ. ಅಂತೆಯೇ ಜನವರಿ 18 ರಂದು ಭಾರತ ಕ್ರಿಕೆಟ್ ತಂಡದ ದಂತಕಥೆಗಳಾದ ಸಚಿನ್ ತೆಂಡೂಲ್ಕರ್ ಮತ್ತು ಯುವರಾಜ್ ಸಿಂಗ್ ಅವರು ಗೆಲುವಿಗಿಂತ ಹೆಚ್ಚಾಗಿ ಉತ್ತಮ ಕಾರಣವೊಂದಕ್ಕಾಗಿ ಪರಸ್ಪರ ಕ್ರಿಕೆಟ್ ಆಡಲಿದ್ದಾರೆ. ಅವರಿಬ್ಬರು ಎರಡು ತಂಡಗಳನ್ನು ಮುನ್ನಡೆಸಲಿದ್ದಾರೆ. ಈ ಮೂಲಕ ಅವರು ತಮ್ಮ ಅಭಿಮಾನಿಗಳಿಗೆ ಕ್ರಿಕೆಟ್​ನ ರಸದೌತಣ ಬಡಿಸಲಿದ್ದಾರೆ. ಅದುವೇ ದತ್ತಿ ನಿಧಿಯೊಂದರ ಸಂಗ್ರಹಕ್ಕಾಗಿ ನಡೆಯುವ ಪಂದ್ಯದಲ್ಲಿ.

ಸಚಿನ್ ಹಾಗೂ ಯುವರಾನ್ ಆಡಲಿರುವ ಈ ಚಾರಿಟಿ ಪಂದ್ಯದಿಂದ 5000 ಕ್ಕೂ ಹೆಚ್ಚು ಗ್ರಾಮೀಣ ವಿದ್ಯಾರ್ಥಿಗಳು ನೇರವಾಗಿ ಪ್ರಯೋಜನ ಪಡೆಯಲಿದ್ದಾರೆ. ವಿದ್ಯಾರ್ಥಿಗಳು ಉಚಿತ ಮೌಲ್ಯಾಧಾರಿತ ಶಿಕ್ಷಣವನ್ನು ಪಡೆಯಲು ಅವರಿಬ್ಬರ ದೇಣಿಗೆಯು ನೆರವಾಗಲಿದೆ ಅಂದ ಹಾಗೆ ಈ ಪಂದ್ಯ ನಡೆಯುವು ಬೆಂಗಳೂರು ಸಮೀಪದ ಮುದ್ದೇನಹಳ್ಳಿ ಎಂಬ ಹಳ್ಳಿಯಲ್ಲಿ.

ಸಚಿನ್ ಹಾಗೂ ಯುವರಾಜ್ ಆಡಲಿರುವ ಈ ದತ್ತಿ ನಿಧಿ ಯೋಜನೆಯು ಗ್ರಾಮೀಣ ಭಾರತದಲ್ಲಿ ಅನೇಕ ಪ್ರಯೋಜನಗಳನ್ನು ಸೃಷ್ಟಿಸಿದೆ. 28000 ಕ್ಕೂ ಹೆಚ್ಚು ಉಚಿತ ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ. ಪ್ರತಿದಿನ 3 ದಶಲಕ್ಷಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ಆಹಾರವನ್ನು ನೀಡಲಾಗುತ್ತದೆ ಇದು ಅವರ ದೈನಂದಿನ ಪೌಷ್ಠಿಕಾಂಶವನ್ನು ಶ್ರೀಮಂತಗೊಳಿಸುತ್ತದೆ.

ಇದನ್ನೂ ಓದಿ : Ram Mandir: ರಾಮ ಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಕ್ರಿಕೆಟ್ ದಿಗ್ಗಜ ಸಚಿನ್‌!

ಮಧುಸೂದನ್ ಸಾಯಿ ಗ್ಲೋಬಲ್ ಹ್ಯುಮಾನಿಟೇರಿಯನ್ ಮಿಷನ್​ನ ಯೋಜನೆ ಇದಾಗಿದೆ. ಈ ಸಂಸ್ಥೆಯು ಸಚಿನ್ ಯುವರಾಜ್ ಸಿಂಗ್ ತಂಡಗಳ ನಡುವಿನ ಪಂದ್ಯವನ್ನು ಆಯೋಜಿಸಿ ದೇಣಿಗೆ ಸಂಗ್ರಹಕ್ಕೆ ಮುಂದಾಗಿದೆ. ಪಂದ್ಯ ನಡೆಯುವ ಕ್ರೀಡಾಂಗಣವು 3500 ಜನರ ಆಸನ ಸಾಮರ್ಥ್ಯವನ್ನು ಹೊಂದಿದೆ. ಈ ಪಂದ್ಯದಲ್ಲಿ ಜಾಗತಿಕವಾಗಿ ಹಲವಾರು ಸಹೃದಯಗಳು ಜತೆಯಾಗಲಿವೆ.

ಕ್ರಿಕೆಟ್ ಕೇವಲ ಕ್ರೀಡೆಗಿಂತ ಮಿಗಿಲಾದುದು. ಇದು ಎಲ್ಲಾ ವರ್ಗದ ಜನರನ್ನು ಒಂದುಗೂಡಿಸುವ ಶಕ್ತಿಯುತ ವೇದಿಕೆ. ಹಲವು ವರ್ಷಗಳಿಂದ, ಜನರನ್ನು ಒಟ್ಟುಗೂಡಿಸುವ ಮತ್ತು ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಕ್ರೀಡೆಯ ಅಪಾರ ಶಕ್ತಿಗೆ ನಾನು ಸಾಕ್ಷಿಯಾಗಿದ್ದೇನೆ. ಈ ವಿಶಿಷ್ಟ ಸ್ನೇಹ ಪಂದ್ಯವು ನಮ್ಮ ಸಮಾಜದ ದೀನದಲಿತರು ಎದುರಿಸುತ್ತಿರುವ ಒತ್ತಡದ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ಕ್ರಿಕೆಟ್​​ನ ಜನಪ್ರಿಯತೆಯನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ. ಸದ್ಗುರು ಶ್ರೀ ಮಧುಸೂದನ್ ಸಾಯಿ ಅವರು ಒಂದು ವಿಶ್ವ ಒಂದು ಕುಟುಂಬ – ವಸುದೈವ ಕುಟುಂಬಕಂ ಎಂಬ ಧ್ಯೇಯದೊಂದಿಗೆ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಹೇಳಿದ್ದಾರೆ.

Exit mobile version