Site icon Vistara News

Saffron politics: ಪೊಲೀಸರು ಕೇಸರಿ ಶಾಲು ಹಾಕಿಕೊಂಡರೆ ತಪ್ಪೇನು; ಯತ್ನಾಳ್‌ ಪ್ರಶ್ನೆ

saffron-politics: Why can't police wear saffron shawl? questions Yatnal

saffron-politics: Why can't police wear saffron shawl? questions Yatnal

ದೇವನಹಳ್ಳಿ: ಹಬ್ಬದ ಸಂದರ್ಭದಲ್ಲಿ ಕೇಸರಿ ಶಾಲು (Saffron Shawl) ಧರಿಸಿದ ಪೊಲೀಸರ ಮೇಲೆ ತೀವ್ರ ಆರೋಪಗಳನ್ನು ಮಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DK Shivakumar) ಅವರ ನಡೆಯನ್ನು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagowda pateel yatnal) ಆಕ್ಷೇಪಿಸಿದ್ದಾರೆ. ಜತೆಗೆ ಪೊಲೀಸರು ಕೇಸರಿ ಶಾಲು ಧರಿಸಿದರೆ (Saffron politics) ತಪ್ಪೇನು ಎಂದು ಪ್ರಶ್ನಿಸಿದ್ದಾರೆ.

ಕೇಸರಿ ಈ ದೇಶದ ಪ್ರಮುಖ ಧರ್ಮವಾದ ಹಿಂದು ಧರ್ಮದ ಸಂಕೇತವಾಗಿದೆ. ಹಾಗಿರುವ ಅದನ್ನು ಪೊಲೀಸರು ಹಾಕಿಕೊಂಡರೆ ತಪ್ಪೇನಿದೆ, ಕೇಸರಿಯನ್ನು ವಿರೋಧ ಮಾಡಿದ್ರು ಉಳಿಗಾಲವಿಲ್ಲ. ಎಂದು ಬಸನಗೌಡ ಕೇಳಿದ್ದಾರೆ. ಕೇಸರಿಯನ್ನು ವಿರೋಧ ಮಾಡಿದವರಿಗೆ ಉಳಿಗಾಲವಿಲ್ಲ ಎಂದು ಹೇಳಿದರು ಯತ್ನಾಳ್‌.

ಪೊಲೀಸರು ಕೇಸರಿ ಶಾಲು ಹಾಕಿಕೊಂಡು ಹಿಂದು ಸಂಘಟನೆ ಕಾರ್ಯಕರ್ತರಂತೆ ವರ್ತಿಸುವುದನ್ನು ನಿಲ್ಲಿಸಬೇಕು ಎಂದು ಡಿ.ಕೆ. ಶಿವಕುಮಾರ್‌ ಅವರು ಮಂಗಳವಾರ ನಡೆದ ಉನ್ನತ ಮಟ್ಟದ ಪೊಲೀಸ್‌ ಅಧಿಕಾರಿಗಳ ಸಭೆಯಲ್ಲಿ ಎಚ್ಚರಿಕೆ ನೀಡಿದ್ದರು.

ಪೊಲೀಸ್‌ ಠಾಣೆಗಳನ್ನು ಕೇಸರೀಕರಣ ಮಾಡಬಾರದು, ಕೇಸರೀಕರಣ ಮಾಡಬಾರದು ಎಂದು ಹೇಳುವ ಡಿ.ಕೆ. ಶಿವಕುಮಾರ್‌ ಇನ್ನೇನು ಹಸಿರೀಕರಣ ಮಾಡುತ್ತಾರಾ? ಹಸಿರೀಕರಣ ಮಾಡಿ ಪಾಕಿಸ್ತಾನ ಮಾಡಲು ಹೊರಟಿದ್ದಾರಾ ಎಂದು ಕೇಳಿದರು ಯತ್ನಾಳ್‌.

ʻʻಕಾಂಗ್ರೆಸ್‌ನವರು ಎಷ್ಟು ಸಾಚಾ ಅಂತ ನೋಡೋಣ. ಮುಂದೆ ಪೊಲೀಸ್ ಠಾಣೆಗಳು ಹೇಗೆ ಕೆಲಸ ಮಾಡುತ್ತವೆ ಅಂತ ನಾವೂ ನೋಡುತ್ತೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ದೇಶದ್ರೋಹಿ ಚಟುವಟಿಕೆಗಳು ಹೆಚ್ಚಾಗುತ್ತಿದೆ. ಕೆಲವು ಕಡೆ ಪಾಕಿಸ್ತಾನದ ಜಂಡಾಗಳು ಹಾರಾಡುತ್ತಿವೆʼʼ ಎಂದು ಯತ್ನಾಳ್‌ ಹೇಳಿದರು.

2024ರಲ್ಲಿ ಅವರ ಗ್ಯಾರಂಟಿ ಕಾರ್ಡ್‌ಗಳು ಮುಕ್ತಾಯ

ಕಾಂಗ್ರೆಸ್‌ ಈ ಬಾರಿ ಗ್ಯಾರಂಟಿ ಕಾರ್ಡ್‌ಗಳಿಂದಾಗಿ ಅಧಿಕಾರಕ್ಕೆ ಬಂದಿದೆ. ಶೀಘ್ರದಲ್ಲೇ ಈ ಗ್ಯಾರಂಟಿ ಕಾರ್ಡ್‌ಗಳ ವಾರಂಟಿ ಮುಗಿಯಲಿದೆ. ಲೋಕಸಭೆವರೆಗೂ ಮಾತ್ರ ಗ್ಯಾರಂಟಿ ಕಾರ್ಡ್ ಇರುತ್ತದೆ ಅವರ ಗ್ಯಾರಂಟಿ ಕಾರ್ಡ್‌ ಎಂದರು ಯತ್ನಾಳ್‌.

2024ಕ್ಕೆ ಮತ್ತೆ ಮೋದಿ ಪ್ರಧಾನಿಯಾಗಲಿದ್ದಾರೆ. ಭಾರತ ಹಿಂದೂ ದೇಶವಾಗಲಿದೆ. ಇಂತಹ ನೂರು ಡಿಕೆ ಶಿವಕುಮಾರ್‌ಗಳು ಬಂದರೂ ಏನೂ ಆಗುವುದಿಲ್ಲ ಎಂದು ಯತ್ನಾಳ್‌ ಎಚ್ಚರಿಸಿದರು.

135 ಸೀಟಿದ್ದರೂ ಏನು ಬೇಕಾದರೂ ಆಗಬಹುದು

ʻʻರಾಜ್ಯದಲ್ಲಿ ಬಿಜೆಪಿ ಮುಗಿದು ಹೋಗಿಲ್ಲ. ನಾವು ಹೋರಾಡ ಮಾಡುತ್ತೇವೆ. 66 ಜನ ನಾವು ವಿರೋಧ ಪಕ್ಷದಲ್ಲಿದ್ದೇವೆ. ಕಾಂಗ್ರೆಸ್‌ 135 ಸ್ಥಾನ ಸಿಕ್ಕಿದೆ ಅಂತ ಬೀಗಬೇಕಾಗಿಲ್ಲ. ಐದು ವರ್ಷ ಅವರು ಏನು ಮಾಡಿದರೂ ನಡೆಯುತ್ತದೆ ಎಂದು ಹೇಳುವ ಹಾಗಿಲ್ಲ. ರಾಜಕಾರಣದಲ್ಲಿ ಏನುಬೇಕಾದರೂ ಆಗಬಹುದು. 135 ಅಲ್ಲ 200 ಸೀಟು ಬಂದ್ರು ಏನು ಬೇಕಾದರೂ ಆಗಬಹುದು. ಮಹಾರಾಷ್ಟ್ರದಲ್ಲಿ ಏನಾಯಿತು ಅಂತ ಗೊತ್ತಲ್ವಾ? ಎಂದು ಕೇಳಿದರು ಯತ್ನಾಳ್‌. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌, ಎನ್‌ಸಿಪಿ ಮತ್ತು ಶಿವಸೇನೆ ಮೂರೂ ಪಕ್ಷಗಳು ಸೇರಿ ಸರ್ಕಾರ ರಚಿಸಿದ್ದರೂ ಬಿಜೆಪಿ ಶಿವಸೇನೆಯನ್ನೇ ಒಡೆದು ತನ್ನ ಸರ್ಕಾರ ರಚಿಸಿಕೊಂಡಿದೆ

ಇದನ್ನೂ ಓದಿ : Saffronisation issue : ಬಿಜೆಪಿಯವರಿಗೆ ತೊಂದರೆ ಇದ್ರೆ ಪಾಕಿಸ್ತಾನಕ್ಕೆ ಹೋಗಲಿ; ಪ್ರಿಯಾಂಕ್‌ ಖರ್ಗೆ ವಿವಾದಿತ ಹೇಳಿಕೆ

Exit mobile version