Site icon Vistara News

Pathaan Film: ಕೇಸರಿ ತ್ಯಾಗದ ಸಂಕೇತ, ಬುದ್ಧ-ಬಸವಣ್ಣರೂ ಈ ಬಣ್ಣ ಧರಿಸಿದ್ದರು; ಪಠಾಣ್‌ ಸಿನಿಮಾ ಬಿಕಿನಿಗೆ ಅಹಿಂಸಾ ಚೇತನ್‌ ಬೆಂಬಲ

ahimsa chethan ಪಠಾಣ್‌ ಸಿನಿಮಾ ಬಿಕನಿ ವಿವಾದ

ಮೈಸೂರು: ಕೇಸರಿ ತ್ಯಾಗದ ಸಂಕೇತ. ಬಸವಣ್ಣ, ಬುದ್ಧ ಸೇರಿ ಬಹಳ ಜನರು ಈ ಬಣ್ಣದ ವಸ್ತ್ರವನ್ನು ಧರಿಸಿದ್ದಾರೆ. ಇಂತಹ ಬಣ್ಣವನ್ನು ಒಂದು ಸಿದ್ಧಾಂತಕ್ಕೆ ಸೀಮಿತ ಮಾಡುವುದು ಸರಿಯಲ್ಲ ಎಂದು ನಟ ಅಹಿಂಸಾ ಚೇತನ್‌ ಹೇಳಿದ್ದಾರೆ. ಈ ಮೂಲಕ ಪಠಾಣ್ ಸಿನಿಮಾದಲ್ಲಿ (Pathaan Film) ಚಿತ್ರದ ನಾಯಕಿ ದೀಪಿಕಾ ಪಡುಕೋಣೆ ಧರಿಸಿದ್ದ ಕೇಸರಿ ಬಣ್ಣದ ಬಿಕಿನಿ ಬಗ್ಗೆ ವಿವಾದ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

ಯಾರೂ ಕೂಡ ಇದನ್ನು ಹೈಜಾಕ್ ಮಾಡಬಾರದು. ಕೇಸರಿ‌ ಹಿಂದುತ್ವದ ಬಣ್ಣ ಆಗಲಾರದು. ನಮ್ಮ ದೇಶದ ತ್ರಿವರ್ಣ ಧ್ವಜದಲ್ಲೂ ಕೇಸರಿ ಇದೆ. ಹಾಗಾಗಿ ಈಗ ಮಾಡುತ್ತಿರುವುದು ಅನ್ಯಾಯದ ಹೋರಾಟವಾಗಿದೆ. ಹಸಿರು ಬಣ್ಣ ಕೂಡ ಒಂದು ವರ್ಗದ ಬಣ್ಣ ಅಲ್ಲ ಎಂದು ಮಾಧ್ಯಮದವರಿಗೆ ಚೇತನ್‌ ಪ್ರತಿಕ್ರಿಯೆ ನೀಡಿದರು.

ಸಣ್ಣ ಸಣ್ಣ ವಿಷಯಕ್ಕೂ ತಪ್ಪು ಹುಡುಕುವುದು ಕೆಲವರ ಕೆಲಸವಾಗಿಬಿಟ್ಟಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಹುನ್ನಾರವಾಗಿದೆ. ಇದನ್ನು ರಾಜಕೀಯವಾಗಿ ಬಳಸುತ್ತಿರುವುದು ಸರಿಯಲ್ಲ. ಕೇಸರಿ ಬಣ್ಣದ ಬಿಕಿನಿ ಬಗ್ಗೆ ವಿರೋಧ ಮಾಡುತ್ತಿರುವವರು ವಿಚಾರದ ಕೊರತೆಯನ್ನು ಎದುರಿಸುತ್ತಿದ್ದಾರೆ ಎಂದು ಚೇತನ್‌ ಟೀಕಿಸಿದರು.

ಇದನ್ನೂ ಓದಿ | Kottur Manjunath: ನಕಲಿ ಜಾತಿ ಪ್ರಮಾಣ ಪತ್ರ; ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ಕೊತ್ತೂರು ಮಂಜುನಾಥ್‌ಗೆ ಸುಪ್ರೀಂ ಅವಕಾಶ

Exit mobile version