Site icon Vistara News

Sagara News: ಶಾಸಕ ಹಾಲಪ್ಪರಿಂದ ಬ್ರಾಹ್ಮಣ ಸಮುದಾಯದ ಮೇಲೆ ನಿರಂತರ ಬೆದರಿಕೆ: ರವೀಶ್

President of Brahmin Mahasabha Ravish sagara

#image_title

ಸಾಗರ: “ಕಳೆದ ಐದು ವರ್ಷದಲ್ಲಿ ಶಾಸಕ ಹರತಾಳು ಹಾಲಪ್ಪ ಅವರು ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲ ವರ್ಗದ ಜನರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವಲ್ಲಿ ವಿಫಲವಾಗಿದ್ದು, ಬ್ರಾಹ್ಮಣ ಸಮುದಾಯದ ಮೇಲೆ ನಿರಂತರ ಬೆದರಿಕೆ, ದಾಳಿಯಂತಹ ಕೃತ್ಯಗಳನ್ನು ನಡೆಸುವ ಮೂಲಕ ಸಮಾಜವನ್ನು ದುರ್ಬಲಗೊಳಿಸುವ ಕೆಲಸ ಮಾಡುತ್ತಿದ್ದಾರೆ” ಎಂದು ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ರವೀಶ್ ದೂರಿದರು.

ಗುರುವಾರ (ಮಾ.30) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಹರತಾಳು ಹಾಲಪ್ಪ ಅವರು ಬ್ರಾಹ್ಮಣ ಸಮುದಾಯವನ್ನು ದುರ್ಬಲಗೊಳಿಸಲು ನಡೆಸುತ್ತಿರುವ ಪ್ರಯತ್ನವನ್ನು ಮಹಾಸಭಾ ತೀವ್ರವಾಗಿ ಖಂಡಿಸುತ್ತದೆ” ಎಂದರು.

ಇದನ್ನೂ ಓದಿ: PAN-Aadhaar linking : ಪ್ಯಾನ್‌ -ಆಧಾರ್‌ ಮಾತ್ರವಲ್ಲ, ಈ ಹಣಕಾಸು ವಿಚಾರಗಳಿಗೂ ಗಡುವು ವಿಸ್ತರಣೆ

“ಈಚೆಗೆ ಪತ್ರಕರ್ತ ಮಹೇಶ್ ಹೆಗಡೆ ನಿರ್ಭೀತಿಯಿಂದ ವರದಿ ಮಾಡಿದ್ದನ್ನು ಶಾಸಕ ಹಾಲಪ್ಪ ಹರತಾಳು ಪ್ರಶ್ನೆ ಮಾಡಿ ನೀವು ನನ್ನ ವಿರುದ್ಧ ವರದಿ ಬರೆಯುತ್ತಿದ್ದೀರಿ. ನಿಮ್ಮನ್ನು ಕೆಲಸದಿಂದ ತೆಗೆಸಿ ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಮಹೇಶ್ ಹೆಗಡೆ ಅವರು ಮಾಡಿದ ವರದಿಯನ್ನೇ ಇತರೆ ಪತ್ರಕರ್ತರು ಪ್ರಕಟ ಮಾಡಿದ್ದಾರೆ. ಮಹೇಶ್ ಹೆಗಡೆ ಬ್ರಾಹ್ಮಣ ಸಮುದಾಯಕ್ಕೆ ಸೇರಿದವನು ಎನ್ನುವ ಕಾರಣಕ್ಕೆ ಹಾಲಪ್ಪ ಉದ್ದಟತನ ಪ್ರದರ್ಶನ ಮಾಡಿದ್ದಾರೆ. ತಮ್ಮ ವಿರುದ್ಧ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಖಚಿತವಾಗಿರುವ ಹಿನ್ನೆಲೆಯಲ್ಲಿ ನಾನು ಬೆದರಿಕೆ ಹಾಕಿದ್ದರೆ ಪೊಲೀಸರಿಗೆ ದೂರು ಕೊಡಿ ಎಂದು ಹೇಳಿದ್ದಾರೆ” ಎಂದರು.

ಎಂಡಿಎಫ್ ಗಲಾಟೆಯಲ್ಲಿ ಶ್ರೀಪಾದ ಹೆಗಡೆ ನಿಸ್ರಾಣಿ ಮತ್ತು ಜಗದೀಶ ಗೌಡ ಅವರ ಮೇಲೆ ಹಲ್ಲೆ ಮಾಡಿಸಿದಾಗ ಹಾಲಪ್ಪ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿತ್ತು. ಈತನಕ ಅವರ ವಿರುದ್ಧ ಎಫ್‍ಐಆರ್ ದಾಖಲು ಮಾಡಿಲ್ಲ. ಈಗ ಮಹೇಶ್ ಹೆಗಡೆಗೆ ಬೆದರಿಕೆ ಹಾಕಿ ದೂರು ಕೊಡಿ ಎನ್ನುತ್ತಿದ್ದಾರೆ. ಹರತಾಳು ಹಾಲಪ್ಪ ಈಗ ಶಾಸಕರಲ್ಲ. ಪೊಲೀಸ್ ಇಲಾಖೆಯು ಹಾಲಪ್ಪ ವಿರುದ್ಧ ಎಫ್‍ಐಆರ್ ದಾಖಲಿಸಲಿ” ಎಂದು ಒತ್ತಾಯಿಸಿದರು.

ಇದನ್ನೂ ಓದಿ: Gubbi News: ಅರಣ್ಯ ಒತ್ತುವರಿ ತೆರವಿಗೆ ಮುಂದಾದ ಅಧಿಕಾರಿಗಳು, ಸಿಬ್ಬಂದಿ ಮೇಲೆರಗಿದ ರೈತರು; ಇಬ್ಬರಿಗೆ ತೀವ್ರ ಗಾಯ

ಬ್ರಾಹ್ಮಣರಿಗೆ ಟಿಕೆಟ್ ಕೇಳಿದ್ದೇವೆ

ಈಗಾಗಲೇ ಕ್ಷೇತ್ರ ವ್ಯಾಪ್ತಿಯಲ್ಲಿ ಹಾಲಪ್ಪ ವಿರೋಧಿ ಅಲೆ ಇದ್ದು, ಇದನ್ನು ಬಿಜೆಪಿ ವರಿಷ್ಠರ ಗಮನಕ್ಕೆ ತರಲಾಗಿದ್ದು ವಿಧಾನಸಭಾ ಚುನಾವಣೆಗೆ ಸಾಗರ ಕ್ಷೇತ್ರದಿಂದ ಬ್ರಾಹ್ಮಣ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಮನವಿ ಮಾಡಲಾಗಿದೆ. ಬ್ರಾಹ್ಮಣ ಸಮುದಾಯದಲ್ಲಿ ಕೆ.ಎಸ್.ಗುರುಮೂರ್ತಿ, ಪ್ರಸನ್ನ ಕೆರೆಕೈ, ಅಬಸೆ ದಿನೇಶ್ ಕುಮಾರ್ ಜೋಷಿಯಂತಹ ಸಮರ್ಥರಿದ್ದು, ಅವರಿಗೆ ಟಿಕೆಟ್ ಕೊಡುವ ಮೂಲಕ ಹಾಲಪ್ಪ ಅವರನ್ನು ಬದಲಾವಣೆ ಮಾಡಬೇಕು” ಎಂದು ಮನವಿ ಮಾಡಿದರು. ಗೋಷ್ಠಿಯಲ್ಲಿ ಮಹಾಸಭಾದ ಕೆ.ಎನ್.ಶ್ರೀಧರ್, ರಜನೀಶ್ ಹೆಗಡೆ, ಮಹಾಬಲೇಶ್ವರ ತಾಳಗುಪ್ಪ ಹಾಜರಿದ್ದರು.

Exit mobile version