PAN-Aadhaar linking : ಪ್ಯಾನ್‌ -ಆಧಾರ್‌ ಮಾತ್ರವಲ್ಲ, ಈ ಹಣಕಾಸು ವಿಚಾರಗಳಿಗೂ ಗಡುವು ವಿಸ್ತರಣೆ - Vistara News

ಪ್ರಮುಖ ಸುದ್ದಿ

PAN-Aadhaar linking : ಪ್ಯಾನ್‌ -ಆಧಾರ್‌ ಮಾತ್ರವಲ್ಲ, ಈ ಹಣಕಾಸು ವಿಚಾರಗಳಿಗೂ ಗಡುವು ವಿಸ್ತರಣೆ

ಪ್ಯಾನ್‌ – ಆಧಾರ್‌ ಮಾತ್ರವಲ್ಲದೆ, ಮ್ಯೂಚುವಲ್‌ ಫಂಡ್‌, ಡಿಮ್ಯಾಟ್‌, ಟ್ರೇಡಿಂಗ್‌ ಖಾತೆಗೆ ನಾಮಿನಿ ( PAN-Aadhaar linking) ಹೆಸರಿಸಲು ನಿಗದಿಯಾಗಿದ್ದ ಗಡುವನ್ನು ಮುಂದೂಡಲಾಗಿದೆ. ವಿವರ ಇಲ್ಲಿದೆ.

VISTARANEWS.COM


on

Demat account
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪ್ಯಾನ್ -ಆಧಾರ್‌ ಕಾರ್ಡ್‌ ಲಿಂಕ್‌ ಮಾಡಲು (PAN-Aadhaar linking deadline) ನಿಗದಿಯಾಗಿದ್ದ 2023ರ ಮಾರ್ಚ್‌ 31ರ ಗಡುವನ್ನು ಜೂನ್‌ 30ಕ್ಕೆ ವಿಸ್ತರಿಸಲಾಗಿದೆ. ಆದರೆ ಇದೊಂದೇ ಅಲ್ಲದೆ, ಇನ್ನೂ ಕೆಲವು ಹಣಕಾಸು ವಿಷಯಗಳ ಗಡುವನ್ನು ವಿಸ್ತರಿಸಲಾಗಿದೆ. ವಿವರ ಇಂತಿದೆ.

ಉದಾಹರಣೆಗೆ ಮ್ಯೂಚುವಲ್‌ ಫಂಡ್‌ ಹೂಡಿಕೆದಾರರು ತಮ್ಮ ನಾಮಿನಿ ವಿವರಗಳನ್ನು (mutual fund nomination) ಸಲ್ಲಿಸಲು ನಿಗದಿಯಾಗಿದ್ದ ಗಡುವು 2023ರ ಮಾರ್ಚ್‌ 31ರಿಂದ 2023ರ ಸೆಪ್ಟೆಂಬರ್‌ 30ಕ್ಕೆ ವಿಸ್ತರಣೆಯಾಗಿದೆ. ಮಾರುಕಟ್ಟೆ ನಿಯಂತ್ರಕ ಸೆಬಿಯು ಈ ಬಗ್ಗೆ ಮಂಗಳವಾರ ಸುತ್ತೋಲೆ ಹೊರಡಿಸಿದೆ. ಮ್ಯೂಚುವಲ್‌ ಫಂಡ್‌ ಸಂಸ್ಥೆಗಳು ನಾಮಿನೇಶನ್‌ ಪ್ರಕ್ರಿಯೆಯನ್ನು ಇದುವರೆಗೆ ಮಾಡದಿರುವ ಹೂಡಿಕೆದಾರರಿಗೆ, ಪೂರ್ಣಗೊಳಿಸಲು ಉತ್ತೇಜನ ನೀಡಬೇಕು. ಇ-ಮೇಲ್‌, ಎಸ್ಸೆಮ್ಮೆಸ್‌ಗಳನ್ನು ಕಳಿಸಬೇಕು ಎಂದು ಸೆಬಿ ತಿಳಿಸಿದೆ.

2022ರ ಜೂನ್‌ 15ರ ಸುತ್ತೋಲೆಯಲ್ಲಿ ಸೆಬಿಯು ಮ್ಯೂಚುವಲ್‌ ಫಂಡ್‌ ಹೂಡಿಕೆಗೆ ನಾಮಿನೇಶನ್‌ ಕಡ್ಡಾಯ ಎಂದು ತಿಳಿಸಿತ್ತು. ಬಳಿಕ ಗಡುವನ್ನು 2022ರ ಅಕ್ಟೋಬರ್‌ 1ಕ್ಕೆ ವಿಸ್ತರಿಸಲಾಯಿತು. ಬಳಿಕ 2023ರ ಮಾರ್ಚ್‌ 31ಕ್ಕೆ ಹಾಗೂ ಇದೀಗ 2023ರ ಸೆಪ್ಟೆಂಬರ್‌ 30ಕ್ಕೆ ವಿಸ್ತರಿಸಲಾಗಿದೆ.

ನಾಮಿನೇಶನ್‌ ಏಕೆ? ಮ್ಯೂಚುವಲ್‌ ಫಂಡ್‌ ಹೂಡಿಕೆದಾರರು ಮೃತಪಟ್ಟ ಸಂದರ್ಭದಲ್ಲಿ ಅವರ ಉತ್ತರಾಧಿಕಾರಿ ಯಾರು ಎಂಬುದನ್ನು ನಾಮಿನೇಶನ್‌ ಮೂಲಕ ತಿಳಿಸಲಾಗುತ್ತದೆ. ಇದರಿಂದ ಹೂಡಿಕೆಯ ಹಿಂತೆಗೆತ ಪ್ರಕ್ರಿಯೆ ಸುಗಮವಾಗುತ್ತದೆ. ಆದ್ದರಿಂದ ನಾಮಿನೇಶನ್‌ ಸಲ್ಲಿಕೆ ಕಡ್ಡಾಯಗೊಳಿಸಲಾಗಿದೆ. ನಿಮ್ಮ ಮ್ಯೂಚುವಲ್‌ ಫಂಡ್‌ ಸಂಸ್ಥೆಯ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ನಲ್ಲೂ ನಾಮಿನೇಶನ್‌ ಪ್ರಕ್ರಿಯೆ ಪೂರ್ಣಗೊಳಿಸಬಹುದು.

ಮ್ಯೂಚುವಲ್‌ ಫಂಡ್‌ ಖಾತೆಗೆ ನಾಮಿನಿಯನ್ನು ಸೇರಿಸುವುದು ಹೇಗೆ?

ಮ್ಯೂಚುವಲ್‌ ಫಂಡ್‌ ಹೂಡಿಕೆದಾರರು ನಾಮಿನೇಶನ್‌ ಅರ್ಜಿಯನ್ನು ಮೊದಲು ಭರ್ತಿಗೊಳಿಸಬೇಕು. ಸಹಿ ಹಾಕಬೇಕು, ಬಳಿಕ ಮ್ಯೂಚುವಲ್‌ ಫಂಡ್‌ ಕಂಪನಿಗೆ ಅಥವಾ ನೋಂದಾಯಿತ ಏಜೆನ್ಸಿಗೆ ರವಾನಿಸಬೇಕು. ಆನ್‌ಲೈನ್‌ ಮೂಲಕವೂ ನಾಮಿನಿಯನ್ನು ಸೇರಿಸಬಹುದು.

ಡಿಮ್ಯಾಟ್‌, ಟ್ರೇಡಿಂಗ್‌ ಖಾತೆಗೆ ನಾಮಿನಿ ಸೇರಿಸಲು ಗಡುವು ವಿಸ್ತರಣೆ:

ಮಾರುಕಟ್ಟೆ ನಿಯಂತ್ರಕ ಸೆಬಿಯು ಡಿಮ್ಯಾಟ್‌ ಮತ್ತು ಟ್ರೇಡಿಂಗ್‌ ಖಾತೆಗೆ ನಾಮಿನಿಯನ್ನು ಸೇರಿಸಲು ಗಡುವನ್ನು 2023ರ ಸೆಪ್ಟೆಂಬರ್‌ 30 ತನಕ ವಿಸ್ತರಿಸಿದೆ.

ಡಿಮ್ಯಾಟ್‌ ಖಾತೆಗೆ ನಾಮಿನಿಯನ್ನು ಸೇರಿಸುವ ವಿಧಾನ:

ಆನ್‌ಲೈನ್‌ ಮತ್ತು ಆಫ್‌ಲೈನ್‌ ಮೂಲಕ ಡಿಮ್ಯಾಟ್‌ ಖಾತೆಗೆ ನಾಮಿನಿಯನ್ನು ಸೇರಿಸಬಹುದು. ಡಿಮ್ಯಾಟ್‌ ಖಾತೆಯನ್ನು ತೆರೆದು ಪ್ರೊಫೈಲ್‌ ಸೆಗ್ಮೆಂಟ್‌ಗೆ (Profile Segment) ತೆರಳಬೇಕು.

ಡಿಮ್ಯಾಟ್‌ ಅಕೌಂಟ್‌ಗೆ ಲಾಗಿನ್‌ ಆದ ಬಳಿಕ Add Nominee ಅಥವಾ Opt-out ಆಯ್ಕೆ ಮಾಡಿಕೊಳ್ಳಿ.

ವಿವರಗಳನ್ನು ಭರ್ತಿಗೊಳಿಸಿ, ಐಡಿ ಪ್ರೂಫ್‌ ಸಲ್ಲಿಸಿ.

ಆಧಾರ್‌ ಒಟಿಪಿ ಮೂಲಕ ಇ-ಸೈನ್‌ ಪ್ರಕ್ರಿಯೆ ಪೂರ್ಣಗೊಳಿಸಿ. ನಾಮಿನಿಯ ವಿವರಗಳನ್ನು ನಮೂದಿಸಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka: ದೇಶದ ಜನ ಎಂದೂ ಉಚಿತ ರೇಷನ್ ಸಿಗುತ್ತದೆ ಅಂತ ಅನ್ನಿಸಿರಲಿಲ್ಲ. ನಿಮ್ಮ ಮೋದಿ ಅದನ್ನು ಈಡೇರಿಸಿದ್ದಾರೆ. ಇಂದು ಚಿಕ್ಕಬಳ್ಳಾಪುರದ ಎಂಟು ಲಕ್ಷಕ್ಕೂ ಹೆಚ್ಚು ಜನರಿಗೆ ಉಚಿತ ರೇಷನ್ ಕೊಡುತ್ತಿದ್ದೇವೆ. ಇದೇ ರೀತಿ ಮುಂದಿನ ಐದು ವರ್ಷವೂ ಉಚಿತ ಅಕ್ಕಿ ನಿಮಗೆ ಸಿಗಲಿದೆ. ಕರ್ನಾಟಕದ ಲಕ್ಷಾಂತರ ಜನರಿಗೆ ಉಚಿತ ಚಿಕಿತ್ಸೆ ಸಿಗುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಮಂದಿ ಆಯುಷ್ಮಾನ್ ಯೋಜನೆ ಮೂಲಕ ಐದು ಲಕ್ಷ ರೂಪಾಯಿವರೆಗೂ ಚಿಕಿತ್ಸೆ ಸಿಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

VISTARANEWS.COM


on

Modi in Karnataka Congress snatches Rs 4000 under Kisan Samman says PM Narendra Modi
Koo

ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಮೂರನೇ ಬಾರಿ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ (Modi in Karnataka) ಅವರು ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ ರೈತರಿಗೆ ಯಾವ ರೀತಿಯ ಮೋಸ ಮಾಡುತ್ತದೆ ಎನ್ನುವುದಕ್ಕೆ ಕರ್ನಾಟಕ ಕಾಂಗ್ರೆಸ್‌ ಸರ್ಕಾರವೇ ಸಾಕ್ಷಿ. ನಾವು ರೈತರ ಬಗ್ಗೆ ಕಳಕಳಿಯಿಂದ ಯೋಜನೆಯಿಂದ ಕಿಸಾನ್‌ ಸಮ್ಮಾನ್‌ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಇದಕ್ಕೆ ಈ ಹಿಂದಿನ ಸರ್ಕಾರವು ಕೇಂದ್ರ ಸರ್ಕಾರ ಕೊಡುತ್ತಿದ್ದ 6 ಸಾವಿರ ರೂಪಾಯಿ ಜತೆಗೆ 4 ಸಾವಿರ ರೂಪಾಯಿಯನ್ನು ಕೊಡುತ್ತಲಿತ್ತು. ಆದರೆ, ಈ ಸರ್ಕಾರ ಅದನ್ನು ನಿಲ್ಲಿಸಿದೆ. ಹೀಗಾಗಿ ರೈತ ವಿರೋಧಿ ಸರ್ಕಾರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದರು.

ಚಿಕ್ಕಬಳ್ಳಾಪುರದಲ್ಲಿ ಶನಿವಾರ (ಏಪ್ರಿಲ್‌ 20) ಏರ್ಪಡಿಸಲಾಗಿದ್ದ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್‌ ಹಾಗೂ ಕೋಲಾರ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಮಲ್ಲೇಶ್‌ ಬಾಬು ಪರವಾಗಿ ಮತಯಾಚಿಸಿದರು.

ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಿ

ಈ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. 150 ಅಮೃತ ಸರೋವರ ಯೋಜನೆ ಮಾಡಲಾಗಿದೆ. 2.70 ಲಕ್ಷ ಕುಟುಂಬಕ್ಕೆ ಕುಡಿಯುವ ನೀರನ್ನು ಕೊಡುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ. ಆದರೆ, ಕಾಂಗ್ರೆಸ್‌ ಸರ್ಕಾರವು ರೈತ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ಇಂಥ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುತ್ತೀರಿ ಎಂಬುದಾಗಿ ಭಾವಿಸಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ರೇಷ್ಮೆ ಉದ್ಯಮಕ್ಕೆ ಉತ್ತೇಜನ ನೀಡಲಾಗಿತ್ತು. 1,300 ಕೋಟಿ ರೂಪಾಯಿ ಸಹಾಯಧನ ನೀಡಲಾಗಿದೆ. ಶಿಡ್ಲಘಟ್ಟದಲ್ಲಿ ರೇಷ್ಮೆ ಉದ್ಯಮಕ್ಕೆ ಸಹಾಯ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿವರಿಸಿದರು.

ಕರ್ನಾಟಕದ ಕಮಿಟ್ಮೆಂಟ್‌ ಗೊತ್ತಾಗುತ್ತಿದೆ

ಸಂತ ಕೈವಾರ ತಾತಯ್ಯ, ಸರ್.ಎಂ ವಿಶ್ವೇಶ್ವರಯ್ಯ, ಈ ಮಣ್ಣಿನಲ್ಲಿ ಜನರ ದರ್ಶನ ನನ್ನ ಸೌಭಾಗ್ಯ ಎಂದು ಮಾತು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಉತ್ಸಾಹ ಹೆಚ್ಚಾಗಿದೆ. ಆ ಉತ್ಸಾಹ ನನಗೆ ಕಾಣುತ್ತಿದೆ. ಯುವಕರಿಗೆ ಪ್ರೇರಣೆ ಸಿಗಲಿದೆ. ನನಗೆ ಭಾಷೆ ಅರ್ಥ ಆಗಲ್ಲ. ಆದರೆ, ಕರ್ನಾಟಕದ ಕಮಿಟ್ಮೆಂಟ್‌ ಗೊತ್ತಾಗುತ್ತಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ನನ್ನ ಹೃದಯದಿಂದ ಅಭಾರಿಯಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ದೇವೇಗೌಡರು ಇಂಡಿ ಮೈತ್ರಿ ಬಗ್ಗೆ ಹೇಳಿದ್ದಾರೆ. ಇಂಡಿ ಮೈತ್ರಿಯಲ್ಲಿ ನಾಯಕರಿಲ್ಲ, ಭವಿಷ್ಯದ ಬಗ್ಗೆ ಚಿಂತನೆಯೇ ಅವರಲ್ಲಿ ಇಲ್ಲ. ಅವರ ಇತಿಹಾಸ ಕೇವಲ ಹಗರಣ ಮಾತ್ರ ಎಂದು ಗುಡುಗಿದರು.

ದೇಶದ ಬಗ್ಗೆ 24×7 ಕೆಲಸ

ದೇಶದ ಜನತೆಗೆ ನನ್ನ ಕೆಲಸದ ಬಗ್ಗೆ ತಿಳಿಸಿದ್ದೇನೆ. ನಾನು ನಿಮ್ಮ ನಡುವೆ ನಮ್ಮ ರಿಪೋರ್ಟ್‌ ಕಾರ್ಡ್ ಹಿಡಿದು ಆಶೀರ್ವಾದ ಪಡೆಯಲು ಬಂದಿದ್ದೇನೆ. ನಾನು ಎಲ್ಲರನ್ನೂ ಪರಿವಾರ ಅಂತ ತಿಳಿದಿದ್ದೇನೆ. ನಿಮ್ಮ ಕನಸು, ಮೋದಿಯ ಸಂಕಲ್ಪವಾಗಿದೆ. ಪ್ರತಿ ಕ್ಷಣದಲ್ಲೂ ನಿಮ್ಮ ಹಾಗೂ ದೇಶದ ಬಗ್ಗೆ 24×7 ಕೆಲಸ ಮಾಡಲು ಬಂದಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾನ ಮಾಡಿದರು.

ಮುಂದಿನ ಐದು ವರ್ಷವೂ ಉಚಿತ ರೇಷನ್

ದೇಶದ ಜನ ಎಂದೂ ಉಚಿತ ರೇಷನ್ ಸಿಗುತ್ತದೆ ಅಂತ ಅನ್ನಿಸಿರಲಿಲ್ಲ. ನಿಮ್ಮ ಮೋದಿ ಅದನ್ನು ಈಡೇರಿಸಿದ್ದಾರೆ. ಇಂದು ಚಿಕ್ಕಬಳ್ಳಾಪುರದ ಎಂಟು ಲಕ್ಷಕ್ಕೂ ಹೆಚ್ಚು ಜನರಿಗೆ ಉಚಿತ ರೇಷನ್ ಕೊಡುತ್ತಿದ್ದೇವೆ. ಇದೇ ರೀತಿ ಮುಂದಿನ ಐದು ವರ್ಷವೂ ಉಚಿತ ಅಕ್ಕಿ ನಿಮಗೆ ಸಿಗಲಿದೆ. ಕರ್ನಾಟಕದ ಲಕ್ಷಾಂತರ ಜನರಿಗೆ ಉಚಿತ ಚಿಕಿತ್ಸೆ ಸಿಗುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಮಂದಿ ಆಯುಷ್ಮಾನ್ ಯೋಜನೆ ಮೂಲಕ ಐದು ಲಕ್ಷ ರೂಪಾಯಿವರೆಗೂ ಚಿಕಿತ್ಸೆ ಸಿಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ‌

25 ಕೋಟಿ ಜನ ಬಡತನದಿಂದ ಹೊರ ಬಂದಿದ್ದಾರೆ

ಮೋದಿ ಸರ್ಕಾರದ ಯೋಜನೆ ಮೂಲಕ ಕೋಟ್ಯಂತರ ಮಂದಿ ಲಾಭ ಪಡೆದಿದ್ದಾರೆ. ಎಸ್‌ಸಿ, ಎಸ್‌ಟಿ, ಒಬಿಸಿ ಕುಟುಂಬದವರಿಗೆ ಭರಪೂರ ಯೋಜನೆ ನೀಡಲಾಗಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬರುವ ಮೊದಲು ಕೊಳಗೇರಿಯಲ್ಲಿ ವಾಸ ಮಾಡುವಂತಾಗಿತ್ತು. ವಿದ್ಯುತ್, ನೀರು ಕೂಡ ಸಿಗುತ್ತಿರಲಿಲ್ಲ. ಜನರೂ ಹಿಂದಿನ ಸರ್ಕಾರದ ಮೇಲೆ ಭರವಸೆ ಕೂಡ ಬಿಟ್ಟುಬಿಟ್ಟಿದ್ದರು. ಆದರೆ, ನಿಮ್ಮ ಭರವಸೆಯನ್ನು ಮೋದಿ ಗ್ಯಾರಂಟಿ ನಿಜ ಮಾಡಿದೆ. 25 ಕೋಟಿ ಜನ ಬಡತನದಿಂದ ಹೊರ ಬಂದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಇನ್ನೈದು ವರ್ಷದಲ್ಲಿ ಸೂರಿಲ್ಲದವರಿಗೆ ಮನೆ

ಹಿಂದಿನ ಹತ್ತು ವರ್ಷಗಳಲ್ಲಿ ಚಿಕ್ಕಬಳ್ಳಾಪುರದಲ್ಲಿ 14 ಕೋಲಾರ 24 ಸಾವಿರ ಮನೆ ನಿರ್ಮಾಣ ಮಾಡಿ ನೀಡಲಾಗಿದೆ. ಮೋದಿ ಸರ್ಕಾರ ಹೊಸ ಮನೆಗಳ ನಿರ್ಮಾಣ ಮಾಡುವ ಭರವಸೆ ನೀಡಿದೆ. ಯಾರಿಗೆ ಈವರೆಗೆ ಮನೆ ಸಿಕ್ಕಿಲ್ಲವೋ ಅವರಿಗೆ ಮುಂದಿನ ಐದು ವರ್ಷಗಳಲ್ಲಿ ಖಂಡಿತವಾಗಿಯೂ ಸಿಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದರು.

ಎಸ್‌ಸಿ ಸಮುದಾಯದವರನ್ನು ರಾಷ್ಟ್ರಪತಿ ಮಾಡಿದ್ದು ಎನ್‌ಡಿಎ

2014ರಲ್ಲಿ ಎನ್‌ಡಿಎ ಸರ್ಕಾರ ಬಂದ ಬಳಿಕ ಎಸ್‌ಸಿ ಸಮುದಾಯದವರನ್ನು ರಾಷ್ಟ್ರಪತಿ ಮಾಡುವ ಮೂಲಕ ಮೊದಲ ಪ್ರಜೆಯನ್ನು ಆಯ್ಕೆ ಮಾಡಿತು. ಹಿಂದುಳಿದ ಸಮುದಾಯದ ಮಹಿಳೆಯನ್ನು ರಾಷ್ಟ್ರಪತಿ ಮಾಡಲಾಗಿದೆ ಎಂದು ಎನ್‌ಡಿಎ ಸರ್ಕಾರ ಕೈಗೊಂಡ ಕ್ರಮಗಳು, ನಿರ್ಧಾರಗಳ ಬಗ್ಗೆ ಪ್ರಧಾನಿ ಮೋದಿ ವಿವರಿಸಿದರು.

ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ 10ರಿಂದ 20 ಲಕ್ಷ ರೂಪಾಯಿ ವರೆಗೂ ಸಾಲ

ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮೂಲಕ ಎಲ್ಲರನ್ನೂ ಜತೆಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಲಾಗಿದೆ. ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣಕ್ಕೆ‌ ಒತ್ತು ನೀಡಲಾಗಿದೆ. ಉನ್ನತ ಶಿಕ್ಷಣದಲ್ಲಿ ದಾಖಲಾತಿ ಹೆಚ್ಚಾಗಿದೆ. ಗ್ಯಾರಂಟಿ ಇಲ್ಲದೆ, ಮುದ್ರಾ ಲೋನ್ ಮೂಲಕ ಸಾಲ ನೀಡಲಾಗಿದೆ. ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ 10ರಿಂದ 20 ಲಕ್ಷ ರೂಪಾಯಿ ವರೆಗೂ ಸಾಲ ನೀಡಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿವರಿಸಿದರು.

ಒಂದು ಕೋಟಿ ಮಹಿಳೆಯರನ್ನು ಲಕ್ಷಪತಿಯರನ್ನಾಗಿ ಮಾಡಿದ್ದೇವೆ

ಇಂದು ಇಷ್ಟು ಹೆಚ್ಚಿನ ಸಂಖ್ಯೆಯಲ್ಲಿ ತಾಯಂದಿರು ಬಂದಿದ್ದಾರೆ. ನಿಮ್ಮ ಕಷ್ಟವನ್ನು ಮೋದಿ ನೋಡಿದ್ದಾರೆ. ದೇಶದ ಅನೇಕರು ಮೋದಿಯನ್ನು ಅಧಿಕಾರದಿಂದ ಕೆಳಗೆ ಇಳಿಸಲು ಪ್ರಯತ್ನ ಮಾಡಿದ್ದಾರೆ. ಆದರೆ, ತಾಯಂದಿರ ಆಶೀರ್ವಾದ ಇದೆ. ನಿಮ್ಮೆಲ್ಲರ ಆಶೀರ್ವಾದಿಂದ ನಾನು ಎದುರಿಸುತ್ತೇನೆ. ಪ್ರತಿ ತಾಯಂದಿರ ಸೇವೆ ಮಾಡುವುದು ಮೋದಿ ಗ್ಯಾರಂಟಿಯಾಗಿದೆ. ಒಂದು ಕೋಟಿ ಮಹಿಳೆಯರನ್ನು ಲಕ್ಷಪತಿಯರನ್ನಾಗಿ ತಯಾರು ಮಾಡಲಾಗಿದೆ. ಮೂರು ಕೋಟಿ ಮಹಿಳೆಯರ ವಾರ್ಷಿಕ ಆದಾಯ ಲಕ್ಷ‌ ರೂಪಾಯಿ ಮೀರಲಿದೆ. ಎನ್‌ಡಿಎ ಸರ್ಕಾರದಿಂದ ಡ್ರೋನ್ ಪೈಲೆಟ್ ಟ್ರೈನಿಂಗ್ ಕೊಡಲಾಗುತ್ತಿದೆ. ಯುವತಿಯರು ಡ್ರೋನ್ ಮೂಲಕ ಸಾಧನೆ ಮಾಡಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಇದನ್ನೂ ಓದಿ: Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಈ ನೆಲದಲ್ಲಿ ಮಾವು, ಪಶುಪಾಲನೆ ನಡೆಯುತ್ತಿದೆ. ಎನ್‌ಡಿಎ ಸರ್ಕಾರ ಹಳ್ಳಿಗಳ ಅಭಿವೃದ್ಧಿಗೆ ಶ್ರಮ ವಹಿಸುತ್ತಿದೆ. ನಮ್ಮ ಜತೆ ದೇವೇಗೌಡರಂತಹ ಹಿರಿಯ ರಾಜಕಾರಣಿ ಇದ್ದಾರೆ. ಅಂಥವರ ಮಾರ್ಗದರ್ಶನ ನಮಗಿದೆ. ಪಶು ಪಾಲನೆ ಮಾಡುವವರಿಗೂ ಕಿಸಾನ್ ಕಾರ್ಡ್ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕೋಲಾರ ಸಂಸದ ಮುನಿಸ್ವಾಮಿ, ಯಲಹಂಕ ಶಾಸಕರಾದ ವಿಶ್ವನಾಥ್, ಸಮೃದ್ಧಿ ಮಂಜುನಾಥ್, ಮಾಜಿ ಶಾಸಕ ವೈ. ಸಂಪಂಗಿ, ವಿಧಾನ ಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ, ಕೇಶವ ಪ್ರಸಾದ್ ಸೇರಿ ಪ್ರಮುಖರು ಉಪಸ್ಥಿತರಿದ್ದರು.

Continue Reading

ದೇಶ

CJI Chandrachud: ಹೊಸ ಕಾನೂನುಗಳ ಜಾರಿ ಐತಿಹಾಸಿಕ; ಸಿಜೆಐ ಡಿ.ವೈ.ಚಂದ್ರಚೂಡ್‌ ಬಣ್ಣನೆ

CJI Chandrachud: ಐಪಿಸಿಯನ್ನು ಭಾರತೀಯ ನ್ಯಾಯ ಸಂಹಿತೆ-2023, ಸಿಆರ್‌ಪಿಸಿಯನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023 ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಯನ್ನು ಭಾರತೀಯ ಸಾಕ್ಷ್ಯ ವಿಧೇಯಕ-2023 ಎಂಬುದಾಗಿ ಮಾರ್ಪಡಿಸಲಾಗಿದೆ. ಹೊಸ ಕಾನೂನುಗಳು ಜುಲೈ 1ರಿಂದ ಜಾರಿಗೆ ಬರಲಿವೆ. ಈ ಕಾನೂನುಗಳ ಕುರಿತು ಸಿಜೆಐ ಡಿ.ವೈ.ಚಂದ್ರಚೂಡ್‌ ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

VISTARANEWS.COM


on

CJI Chandrachud
Koo

ನವದೆಹಲಿ: ದೇಶದಲ್ಲಿ ವಸಾಹತು ಕಾಲದ ಕ್ರಿಮಿನಲ್‌ ಕಾನೂನುಗಳ (Criminal Laws) ಸಂಪೂರ್ಣ ತಿದ್ದುಪಡಿ ದಿಸೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದ್ದು, ಭಾರತೀಯ ದಂಡ ಸಂಹಿತೆ (IPC-1860), ಭಾರತೀಯ ಅಪರಾಧ ಪ್ರಕ್ರಿಯಾ ಸಂಹಿತೆ (CrPC-1973) ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳನ್ನು (Indian Evidence Act-1872) ತಿದ್ದುಪಡಿಗೊಳಿಸಲಾಗಿದೆ. ಇವುಗಳ ಬದಲಾಗಿ ಮೂರು ಹೊಸ ಕಾನೂನುಗಳು (New Laws) ಜುಲೈ 1ರಿಂದಲೇ ದೇಶಾದ್ಯಂತ ಜಾರಿಗೆ ಬರಲಿವೆ. ಇದರ ಬೆನ್ನಲ್ಲೇ, ಹೊಸ ಕಾನೂನುಗಳ ಜಾರಿಯ ಕುರಿತು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸಿಜೆಐ ಡಿ.ವೈ.ಚಂದ್ರಚೂಡ್‌ (CJI Chandrachud) ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಭಾರತವು ಬದಲಾಗುತ್ತಿದೆ ಎಂಬುದಕ್ಕೆ ಹೊಸ ಕಾನೂನುಗಳ ಜಾರಿಯೇ ಸಾಕ್ಷಿಯಾಗಿದೆ. ಭಾರತ ಹೊಸ ಹಾದಿಯತ್ತ ಸಾಗುತ್ತಿದೆ. ಆಧುನಿಕ ಭಾರತದ ಸವಾಲುಗಳನ್ನು ಎದುರಿಸಲು ಹಾಗೂ ಭವಿಷ್ಯದ ದೃಷ್ಟಿಯಿಂದ ಕಾನೂನುಗಳ ಬದಲಾವಣೆಯು ಪ್ರಮುಖವಾಗಿದೆ. ಇದರಿಂದ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ಆಗುತ್ತದೆ. ಹಾಗಾಗಿ, ಹೊಸ ಕಾನೂನುಗಳ ಜಾರಿಯು ಭಾರತವು ಬದಲಾಗುತ್ತಿದೆ ಎಂಬುದಕ್ಕೆ ಕುರುಹು” ಎಂದು ಹೊಸ ಕಾನೂನುಗಳನ್ನು ಶ್ಲಾಘಿಸಿದರು.

“ದೇಶದ ಕಾನೂನು ವ್ಯವಸ್ಥೆ, ಕ್ರಿಮಿನಲ್‌ ಕಾನೂನುಗಳ ಬದಲಾವಣೆಯು ಅತ್ಯಗತ್ಯವಾಗಿತ್ತು. ಇದರ ದಿಸೆಯಲ್ಲಿ ಹೊಸ ಕಾನೂನುಗಳನ್ನು ಜಾರಿಗೊಳಿಸುತ್ತಿರುವುದು, ಮಹತ್ವದ ಬದಲಾವಣೆ ಮಾಡುತ್ತಿರುವುದು ಸಂತಸವಾಗಿದೆ. ಅದರಲ್ಲೂ, ಸಂತ್ರಸ್ತರನ್ನು ರಕ್ಷಿಸಿ, ಅಪರಾಧ ಎಸಗುವವರ ವಿರುದ್ಧ ಕೂಲಂಕಷ ತನಿಖೆಗೆ ಹೊಸ ಕಾನೂನುಗಳು ಸಹಕಾರಿಯಾಗಿವೆ” ಎಂದು ಬಣ್ಣಿಸಿದರು.

ಐಪಿಸಿಯನ್ನು ಭಾರತೀಯ ನ್ಯಾಯ ಸಂಹಿತೆ-2023, ಸಿಆರ್‌ಪಿಸಿಯನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023 ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಯನ್ನು ಭಾರತೀಯ ಸಾಕ್ಷ್ಯ ವಿಧೇಯಕ-2023 ಎಂಬುದಾಗಿ ಮಾರ್ಪಡಿಸಲಾಗಿದೆ. ಹೊಸ ಕಾನೂನುಗಳು ಜುಲೈ 1ರಿಂದ ಜಾರಿಗೆ ಬರಲಿವೆ.

ಈಗಿರುವ ಭಾರತೀಯ ದಂಡ ಸಂಹಿತೆಯಲ್ಲಿ 420 ಸೆಕ್ಷನ್ ಅನ್ನು ವಂಚನೆ ಅಪರಾಧಕ್ಕೆ ಅನ್ವಯಿಸಲಾಗುತ್ತದೆ. ಆದರೆ, ಭಾರತೀಯ ನ್ಯಾಯ ಸಂಹಿತೆಯ ಈ ಅಪರಾಧಕ್ಕೆ 316(2), (3) ಮತ್ತು (4) ಸೆಕ್ಷನ್‌ಗಳು ಇರಲಿವೆ. ವಂಚನೆ ಅಪರಾಧಕ್ಕಾಗಿ ಈ ಸೆಕ್ಷನ್‌ಗಳಡಿ ಅಪರಾಧಿಗೆ ಮೂರು ವರ್ಷ, ಐದು ವರ್ಷ ಅಥವಾ ಏಳು ವರ್ಷಗಳವರೆಗೆ ದಂಡ ಸಹಿತ ಜೈಲು ಶಿಕ್ಷೆಯನ್ನು ವಿಸ್ತರಿಸಬಹುದಾಗಿದೆ.

ದೇಶದ್ರೋಹ ಕಾನೂನು ಬದಲು

ಬ್ರಿಟಿಷರ ಕಾಲದಲ್ಲಿ ಜಾರಿಗೆ ತಂದ ದೇಶದ್ರೋಹದ ಕಾನೂನು ನೂತನ ಕ್ರಿಮಿನಲ್‌ ಕಾನೂನಿನಲ್ಲಿ ಇರುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಾಹಿತಿ ನೀಡಿದ್ದಾರೆ. ದೇಶದ್ರೋಹ ಕಾನೂನಿನಲ್ಲಿ ಬಂಧಿತರಾದವರಿಗೆ ಮೂರು ವರ್ಷದಿಂದ ಜೀವಾವಧಿ ಶಿಕ್ಷೆ ನೀಡಬಹುದಾಗಿದ್ದು, ಈ ಕಾನೂನು ರದ್ದುಗೊಳಿಸಲಾಗುತ್ತದೆ ಎಂದು ಹೇಳಿದರು. ಇದರ ಬದಲಾಗಿ ಹೊಸ ನಿಯಮಗಳು ಜಾರಿಗೆ ಬರಲಿವೆ ಎಂದು ಕೂಡ ತಿಳಿಸಿದರು.

ಅತ್ಯಾಚಾರಿಗಳಿಗೆ 20 ವರ್ಷ ಜೈಲು

ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಜಾಸ್ತಿಯಾಗುತ್ತಿರುವ ಬೆನ್ನಲ್ಲೇ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವುದು ನೂತನ ಕಾನೂನುಗಳನ್ನು ಜಾರಿಗೊಳಿಸಲಾಗುತ್ತಿದೆ. “ಹೊಸ ಕಾನೂನುಗಳ ಅಡಿಯಲ್ಲಿ ಅತ್ಯಾಚಾರಿಗಳಿಗೆ ಗರಿಷ್ಠ 20 ವರ್ಷ ಅಥವಾ ಅವರು ಜೀವಿತಾವಧಿವರೆಗೆ ಜೈಲಿನಲ್ಲಿ ಕಾಲ ಕಳೆಯುವ ರೀತಿ ಶಿಕ್ಷೆ ವಿಧಿಸಲಾಗುತ್ತದೆ. ಹಾಗೆಯೇ, ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದವರಿಗೆ ಗಲ್ಲು ಶಿಕ್ಷೆ ವಿಧಿಸುವ, ಅತ್ಯಾಚಾರ ಸಂತ್ರಸ್ತೆಯರ ಮಾಹಿತಿ ಬಹಿರಂಗಪಡಿಸಿದವರಿಗೂ ಶಿಕ್ಷೆ ವಿಧಿಸುವ ಕಾನೂನು ಇರಲಿದೆ” ಎಂದು ಅಮಿತ್‌ ಶಾ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Parliament Session: ಅಪರಾಧ ಎಸಗಿ ದೇಶ ಬಿಟ್ಟು ಹೋದವರಿಗೆ ಇನ್ನಿಲ್ಲ ನೆಮ್ಮದಿ; ಬರ್ತಿದೆ ಹೊಸ ಕಾನೂನು!

Continue Reading

Lok Sabha Election 2024

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka: ಸಿಎಂ ಸಿದ್ದರಾಮಯ್ಯ, ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ರಾಜ್ಯವನ್ನು ಲೂಟಿ ಮಾಡಿದ್ದಾರೆ. ಈಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ 2014ರಲ್ಲಿ ಬರಿ ಚೆಂಬನ್ನು ಕೊಡುತ್ತಾರೆ. ಆ ಖಾಲಿ ಚೆಂಬನ್ನು ಪಡೆದ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 10 ವರ್ಷದಿಂದ ಅಕ್ಷಯ ಪಾತ್ರೆಯನ್ನು ಮಾಡಿದರು. ಈ ದೇಶದ ಬಡವರು, ಹಿಂದುಳಿದ ವರ್ಗದವರು, ಮಹಿಳೆಯರು ಹಾಗೂ ಸಣ್ಣ ಸಣ್ಣ ಸಮಾಜದವರನ್ನು ಮೇಲಕ್ಕೆ ಎತ್ತುವ ಕೆಲಸವನ್ನು ಮಾಡಿದ ಮಹಾನ್‌ ಭಾವ ಯಾರೆಂದರೆ ಅದು ನರೇಂದ್ರ ಮೋದಿ ಎಂದು ಎಚ್.ಡಿ. ದೇವೇಗೌಡ ಹೇಳಿದ್ದಾರೆ.

VISTARANEWS.COM


on

Modi in Karnataka HD Deve Gowda attack on Congess
Koo

ಚಿಕ್ಕಬಳ್ಳಾಪುರ: ಈ ದೇಶದಲ್ಲಿ 60 ವರ್ಷಗಳ ಕಾಲ ಆಡಳಿತವನ್ನು ನಡೆಸಿ ಸಂಪತ್ತನ್ನು ಲೂಟಿ ಮಾಡಿ 2014ರಲ್ಲಿ ಖಾಲಿ ಚೆಂಬನ್ನು ನರೇಂದ್ರ ಮೋದಿ ಅವರಿಗೆ ಕೊಟ್ಟಿದ್ದು ಇದೇ ಕಾಂಗ್ರೆಸ್‌ ಆಗಿದೆ. ಆದರೆ, ಆ ಖಾಲಿ ಚೆಂಬನ್ನು ಅಕ್ಷಯ ಪಾತ್ರೆ ಮಾಡಿದವರು ಪ್ರಧಾನಿ ಮೋದಿ (PM Narendra Modi) ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ (HD Devegowda) ಗುಡುಗಿದರು. ಪ್ರಧಾನಿ ನರೇಂದ್ರ ಮೋದಿ (Modi in Karnataka) ಅವರ ಚಿಕ್ಕಬಳ್ಳಾಪುರ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಚಿಕ್ಕಬಳ್ಳಾಪುರದಲ್ಲಿ ಶನಿವಾರ (ಏಪ್ರಿಲ್‌ 20) ಏರ್ಪಡಿಸಲಾಗಿದ್ದ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಜತೆ ವೇದಿಕೆ ಹಂಚಿಕೊಂಡು ಮಾತನಾಡಿದ ಎಚ್.ಡಿ. ದೇವೇಗೌಡ, ಈ ಹಿಂದೆ ಯುಪಿಎ ಸರ್ಕಾರ ಇದ್ದಾಗ ಕೋಲ್, 2ಜಿ ಸ್ಪೆಕ್ಟ್ರಂ ಸೇರಿದಂತೆ ಎಷ್ಟು ಭ್ರಷ್ಟಾಚಾರ ಮಾಡಿದ್ದಾರೆ. ಈ ನಾಡಿನ ಸಂಪತ್ತನ್ನು ಲೂಟಿ ಹೊಡೆದಿದ್ದಾರೆ. ಆ ಬರಿಯ ಚೆಂಬನ್ನು ಯಾರ ಕೈಗೆ ಕೊಟ್ಟಿದ್ದಾರೆ? ಈ ಕಾಂಗ್ರೆಸ್‌ನವರು ಯಾರಿಗೆ ಕೊಟ್ಟರು? ಸಿಎಂ ಸಿದ್ದರಾಮಯ್ಯ, ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ರಾಜ್ಯವನ್ನು ಲೂಟಿ ಮಾಡಿದ್ದಾರೆ. ಈಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ 2014ರಲ್ಲಿ ಬರಿ ಚೆಂಬನ್ನು ಕೊಡುತ್ತಾರೆ. ಆ ಖಾಲಿ ಚೆಂಬನ್ನು ಪಡೆದ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 10 ವರ್ಷದಿಂದ ಅಕ್ಷಯ ಪಾತ್ರೆಯನ್ನು ಮಾಡಿದರು. ಈ ದೇಶದ ಬಡವರು, ಹಿಂದುಳಿದ ವರ್ಗದವರು, ಮಹಿಳೆಯರು ಹಾಗೂ ಸಣ್ಣ ಸಣ್ಣ ಸಮಾಜದವರನ್ನು ಮೇಲಕ್ಕೆ ಎತ್ತುವ ಕೆಲಸವನ್ನು ಮಾಡಿದ ಮಹಾನ್‌ ಭಾವ ಯಾರೆಂದರೆ ಅದು ನರೇಂದ್ರ ಮೋದಿ ಎಂದು ಎಚ್.ಡಿ. ದೇವೇಗೌಡ ಹೇಳಿದರು.

ಇಂಥ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡುತ್ತೀರಾ? ಇದು ಕ್ಷುಲ್ಲಕ ರಾಜಕಾರಣ ಅಲ್ಲವೇ? ನಾಚಿಕೆಯಾಗಬೇಕು ನಿಮಗೆ. ಈ ದೇಶಕ್ಕೆ ಸುಮಾರು 34 ಪ್ರೋಗ್ರಾಂಗಳನ್ನು ಕೊಟ್ಟಿದ್ದಾರೆ. ಬಡವರಿಗೋಸ್ಕರ, ನಿರೋದ್ಯೋಗವನ್ನು ಬಗೆಹರಿಸಲು ಸೇರಿದಂತೆ ಎಷ್ಟು ಕಾರ್ಯಕ್ರಮಗಳು ಇವೆ? ಸಿಎಂ ಸಿದ್ದರಾಮಯ್ಯ ಮತ್ತು ಅವರ ಭಾಷಣದಲ್ಲಿ ಏನು ಹೇಳುತ್ತಾರೆ? ಅವರ ಬಗ್ಗೆ, ಅವರ ಭಾಷಣದ ಬಗ್ಗೆ ವ್ಯಾಖ್ಯಾನ ಮಾಡಲು ನಾನು ಹೋಗುವುದಿಲ್ಲ ಎಚ್.ಡಿ. ದೇವೇಗೌಡ ಹೇಳಿದರು.

ಮೋದಿ ಕಾರ್ಯಕ್ರಮದ ಲೈವ್‌ ಅಪ್ಡೇಟ್‌ ಇಲ್ಲಿದೆ

ಚಿಕ್ಕಬಳ್ಳಾಪುರದಲ್ಲಿ ನನ್ನ ನಿಜವಾದ ಕಾರ್ಯಕರ್ತರು ಇದ್ದರೆ ನಿಮ್ಮ ವೋಟನ್ನು ಚಿಕ್ಕಬಳ್ಳಾಪುರ ಲೋಕಸಭಾ ಅಭ್ಯರ್ಥಿ ಡಾ. ಕೆ. ಸುಧಾಕರ್‌ ಅವರಿಗೆ ನೀಡಿ. ನಾವು ನಮ್ಮ ಗುರಿಯನ್ನು ಮುಟ್ಟಲು, ದೇಶದಲ್ಲಿ 400ಕ್ಕೂ ಹೆಚ್ಚು ಸ್ಥಾನವನ್ನು ಪಡೆಯಲು, ರಾಜ್ಯದಲ್ಲಿ 28ಕ್ಕೆ 28 ಸ್ಥಾನಗಳನ್ನು ಗೆಲ್ಲಲು ನಮ್ಮ ಕಾಣಿಕೆ ಇದಾಗಬೇಕು ಎಂದು ಎಚ್.ಡಿ. ದೇವೇಗೌಡ ಮನವಿ ಮಾಡಿದರು.

ಇದನ್ನೂ ಓದಿ: ‌CM Siddaramaiah: ಸಿಎಂ ಸಿದ್ದರಾಮಯ್ಯ ಬಳಿ ಗನ್‌ ತಂದಿದ್ದ ಕೇಸ್;‌ ನಾಲ್ವರು ಪೊಲೀಸರು ಸಸ್ಪೆಂಡ್

ಈಗ 25 ಗ್ಯಾರಂಟಿಯನ್ನು ಕೊಡುತ್ತೇನೆ ಎಂದು ಹೇಳುತ್ತಿದ್ದಾರೆ.

ಈ ದೇಶದಲ್ಲಿ 60 ವರ್ಷ ಆಡಳಿತ ನಡೆಸಿ, ಈ ಹತ್ತು ವರ್ಷದಲ್ಲಿ ವಿರೋಧಿ ಪಕ್ಷದ ಸ್ಥಾನವನ್ನು ಪಡೆಯಲು ಯೋಗ್ಯತೆ ಇಲ್ಲದ ಈ ಕಾಂಗ್ರೆಸ್‌ ಪಕ್ಷವು 400 ಸೀಟುಗಳನ್ನು ಗೆಲ್ಲುತ್ತದೆಯಾ? ಈಗ ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಈ ಇಬ್ಬರು (ಡಾ. ಕೆ. ಸುಧಾಕರ್‌ ಮತ್ತು ಮಲ್ಲೇಶ್‌ ಬಾಬು) ಅಭ್ಯರ್ಥಿಗಳನ್ನು ಗೆಲ್ಲಿಸಿ. 28 ಕ್ಷೇತ್ರಗಳನ್ನು ಗೆದ್ದುಕೊಂಡು ನಾವೆಲ್ಲರೂ ಹೋಗಿ ಕಾವೇರಿ ನೀರು ಸೇರಿದಂತೆ ರಾಜ್ಯದ ಇನ್ನಿತರ ಸಮಸ್ಯೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಹೋಗಿ ಕೇಳಲು ಅನುವು ಮಾಡಿಕೊಡಬೇಕು ಎಂದು ಎಚ್.ಡಿ. ದೇವೇಗೌಡ ಮನವಿ ಮಾಡಿದರು.

Continue Reading

ಉದ್ಯೋಗ

Job Alert: ಉದ್ಯೋಗ ಆಕಾಂಕ್ಷಿಗಳಿಗೆ ಗುಡ್‌ನ್ಯೂಸ್‌; ಬಿಬಿಎಂಪಿಯಿಂದ ಬರೋಬ್ಬರಿ 11,307 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Job Alert: ಬೆಂಗಳೂರಿನಲ್ಲೇ ಕೆಲಸ ಹುಡುಕುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಗುಡ್‌ನ್ಯೂಸ್‌. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಖಾಲಿ ಇರುವ ಬರೋಬ್ಬರಿ 11,307 ಡಿ ಗ್ರೂಪ್‌ನ ಪೌರ ಕಾರ್ಮಿಕರ ನೇಮಕಕ್ಕೆ ಅಧಿಸೂಚನೆ ಪ್ರಕಟಿಸಿದೆ. ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಮೇ 15. ಈ ಹುದ್ದೆಗೆ ಯಾವುದೇ ಶೈಕ್ಷಣಿಕ ವಿದ್ಯಾರ್ಹತೆ ಅಗತ್ಯವಿಲ್ಲ. ಕನ್ನಡ ಮಾತನಾಡಲು ತಿಳಿದಿರುವವರು ಅರ್ಜಿ ಸಲ್ಲಿಸಬಹುದು.

VISTARANEWS.COM


on

Job Alert
Koo

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (BBMP) ಘನತ್ಯಾಜ್ಯ ನಿರ್ವಹಣೆ ಹಾಗೂ ವಿವಿಧ ಸ್ವಚ್ಛತಾ ಕಾರ್ಯಗಳ ನಿರ್ವಹಣೆಗಾಗಿ ಬರೋಬ್ಬರಿ 11,307 ಡಿ ಗ್ರೂಪ್‌ನ ಪೌರ ಕಾರ್ಮಿಕರ ನೇಮಕಕ್ಕೆ ಅಧಿಸೂಚನೆ ಪ್ರಕಟಿಸಿದೆ (BBMP Recruitment 2024). ಘನತ್ಯಾಜ್ಯ ನಿರ್ವಹಣೆ ವಿಭಾಗದಡಿ ನೇಮಕಾತಿ ನಡೆಯಲಿದೆ. ಕನ್ನಡ ಬಲ್ಲವರು ಅರ್ಜಿ ಸಲ್ಲಿಸಬಹುದು. ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಮೇ 15 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಸ್ಥಳೀಯ ವೃಂದದ-ಹುದ್ದೆಗಳು, ಕಲ್ಯಾಣ ಕರ್ನಾಟಕ (KK)-905 ಮತ್ತು ಉಳಿಕೆ ಮೂಲ ವೃಂದ (RPC)-10,402 ಹುದ್ದೆಗಳಿವೆ. ಈ ಹುದ್ದೆಗೆ ಯಾವುದೇ ಶೈಕ್ಷಣಿಕ ವಿದ್ಯಾರ್ಹತೆ ಅಗತ್ಯವಿಲ್ಲ. ಕನ್ನಡ ಮಾತನಾಡಲು ತಿಳಿದಿರುವವರು ಅರ್ಜಿ ಸಲ್ಲಿಸಬಹುದು.

ವಯೋಮಿತಿ

ಅಭ್ಯರ್ಥಿಗಳ ಗರಿಷ್ಠ ವಯಸ್ಸು 55 ವರ್ಷ. ಅಭ್ಯರ್ಥಿಗಳು ಭಾರತೀಯ ನಾಗರೀಕರಾಗಿರಬೇಕು. ಬಿಬಿಎಂಪಿಯಲ್ಲಿ ನೇರ ಪಾವತಿ / ಕ್ಷೇಮಾಭಿವೃದ್ಧಿ / ದಿನಗೂಲಿ ಆಧಾರದಲ್ಲಿ ಎರಡು ವರ್ಷ ಕಡಿಮೆ ಇಲ್ಲದಂತೆ, ನಿರಂತರವಾಗಿ ಕೆಲಸ ನಿರ್ವಹಿಸಿರುವ ಮತ್ತು ಎರಡು ವರ್ಷಗಳಿಗೂ ಮೇಲ್ಪಟ್ಟು ಪಾಲಿಕೆಯಿಂದ ವೇತನ ಪಡೆಯುವವರಿಗೆ ಆದ್ಯತೆ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಆಯ್ಕೆಯಾದವರಿಗೆ 17,000 ರೂ. – 28,950 ರೂ. ಮಾಸಿಕ ವೇತನ ದೊರೆಯಲಿದೆ.

BBMP Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಬಿಬಿಎಂಪಿಯ ಅಧಿಕೃತ ವೆಬ್‌ಸೈಟ್‌ bbmp.gov.in.ಗೆ ಭೇಡಿ ನೀಡಿ.
  • ಈಗ ತೆರೆದುಕೊಳ್ಳುವ ಹೋಮ್‌ಪೇಜ್‌ನಲ್ಲಿ ಕಂಡು ಬರುವ ಪೌರಕಾರ್ಮಿಕರ ಹುದ್ದೆಗಳ ಅರ್ಜಿ ನಮೂನೆ Click here to View ಆಯ್ಕೆಯನ್ನು ಕ್ಲಿಕ್‌ ಮಾಡಿ.
  • ಈಗ ಕಂಡು ಬರುವ ಅರ್ಜಿ ನಮೂನೆಯನ್ನು ಡೌನ್‌ಲೋಡ್‌ ಮಾಡಿ.
  • ಪ್ರಿಂಟ್‌ಔಟ್‌ ತೆಗೆದು ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
  • ಅದರಲ್ಲಿ ಕೇಳಿರುವ ದಾಖಲೆಗಳನ್ನು ಲಗತ್ತಿಸಿ.
  • ಭರ್ತಿ ಮಾಡಿದ ಅರ್ಜಿಯನ್ನು N.R. Square, Bengaluru -560002, Karnataka ಇಲ್ಲಿಗೆ ಸಲ್ಲಿಸಿ.

ಇದನ್ನೂ ಗಮನಿಸಿ

  • ಈ ಹುದ್ದೆಗಳಿಗೆ ಯಾವುದೇ ಸಂದರ್ಶನ ನಿಗದಿಪಡಿಸಿಲ್ಲ.
  • ಅಪೂರ್ಣ ಅರ್ಜಿಗಳನ್ನು ಕಡ್ಡಾಯವಾಗಿ ಸ್ವೀಕರಿಸುವುದಿಲ್ಲ.
  • ಅರ್ಜಿಯೊಂದಿಗೆ ಕಡ್ಡಾಯವಾಗಿ ದಾಖಲೆಗಳನ್ನು ಲಗತ್ತಿಸಬೇಕು.
  • ಒಂದಕ್ಕಿಂತ ಹೆಚ್ಚು ಪತ್ನಿಯರನ್ನು ಹೊಂದಿರುವ ಪುರುಷ ಅಭ್ಯರ್ಥಿ ಮತ್ತು ಈಗಾಗಲೇ ಇನ್ನೊಬ್ಬ ಪತ್ನಿ ಇರುವ ವ್ಯಕ್ತಿಯನ್ನು ಮದುವೆಯಾಗಿರುವ ಮಹಿಳಾ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುವುದಿಲ್ಲ.
  • ಅಭ್ಯರ್ಥಿಗಳು ಯಾವುದೇ ಕ್ರಿಮಿನಲ್‌ ಹಿನ್ನೆಲೆ ಹೊಂದಿರಬಾರದು.
  • ಈಗಾಗಲೇ ಗಂಭೀರ ಪ್ರಕರಣದ ಕಾರಣದಿಂದ ಕರ್ತವ್ಯದಿಂದ ತೆಗೆದು ಹಾಕಿರಬಾರದು.

ಇದನ್ನೂ ಓದಿ: Job Alert: ರೈಲ್ವೆ ಪ್ರೊಟೆಕ್ಷನ್ ಫೋರ್ಸ್‌ನಲ್ಲಿದೆ 4,660 ಹುದ್ದೆ; ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

Continue Reading
Advertisement
Lok Sabha Election 2024
ಕರ್ನಾಟಕ2 mins ago

Lok Sabha Election 2024: ನಾಚಿಗೆ ಇಲ್ಲದೆ 3 ಸೀಟಿಗಾಗಿ ಬಿಜೆಪಿ ಜತೆ ಹೋಗಿದ್ದಾರೆ: ದೇವೇಗೌಡರ ವಿರುದ್ಧ ಸಿಎಂ ವಾಗ್ದಾಳಿ

Lok Sabha Election 2024
Lok Sabha Election 202414 mins ago

Lok Sabha Election 2024: ಮೊದಲ ಹಂತದ ಮತದಾನ ವೇಳೆ ಗುಂಡಿನ ದಾಳಿ ನಡೆಸಿದ್ದ ಮೂವರ ಬಂಧನ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ21 mins ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

tiger attack
ಚಾಮರಾಜನಗರ21 mins ago

Tiger Attack : ಮರಿಯಾನೆ ಕೊಂದ ಹುಲಿ; ಶವ ಬಿಟ್ಟು ಕದಲದ ತಾಯಿ ಆನೆ ರೋಧನೆ

PBKS vs GT
ಕ್ರೀಡೆ41 mins ago

PBKS vs GT: ಗುಜರಾತ್​ ವಿರುದ್ಧವಾದರೂ ಪಂಜಾಬ್​ಗೆ ಒಲಿದೀತೇ ಗೆಲುವಿನ ಅದೃಷ್ಟ?

CJI Chandrachud
ದೇಶ53 mins ago

CJI Chandrachud: ಹೊಸ ಕಾನೂನುಗಳ ಜಾರಿ ಐತಿಹಾಸಿಕ; ಸಿಜೆಐ ಡಿ.ವೈ.ಚಂದ್ರಚೂಡ್‌ ಬಣ್ಣನೆ

Forest bathing activity begins at Cubbon Park
ಬೆಂಗಳೂರು55 mins ago

Forest Bathing: ಬೆಂಗಳೂರಲ್ಲೂ ಶುರು ಫಾರೆಸ್ಟ್‌ ಬಾಥಿಂಗ್‌; ಕಬ್ಬನ್ ಪಾರ್ಕ್‌ನಲ್ಲಿ ಮರ ಅಪ್ಪಲು ಕೊಡಬೇಕು 1500 ರೂ.!

Modi in Karnataka HD Deve Gowda attack on Congess
Lok Sabha Election 202455 mins ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Lok Sabha Election 2024
ಕರ್ನಾಟಕ58 mins ago

Lok Sabha Election 2024: ದಾರಿ ತಪ್ಪಿದ್ದಾರೆ ಎಂದ ಕುಮಾರಸ್ವಾಮಿಗೆ ಹೆಣ್ಣು ಮಕ್ಕಳು ತಕ್ಕ ಉತ್ತರ ಕೊಡಬೇಕು: ಡಿಕೆಶಿ

Job Alert
ಉದ್ಯೋಗ1 hour ago

Job Alert: ಉದ್ಯೋಗ ಆಕಾಂಕ್ಷಿಗಳಿಗೆ ಗುಡ್‌ನ್ಯೂಸ್‌; ಬಿಬಿಎಂಪಿಯಿಂದ ಬರೋಬ್ಬರಿ 11,307 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ21 mins ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 202455 mins ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20243 hours ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

Rain News
ಮಳೆ5 hours ago

Rain News : ಸಿಡಿಲಿಗೆ ವ್ಯಕ್ತಿ ಸೇರಿ ಜಾನುವಾರುಗಳು ಮೃತ್ಯು; ವ್ಯಾಪಕ ಮಳೆಗೆ ಜನರು ಕಂಗಾಲು

Neha Murder Case
ಹುಬ್ಬಳ್ಳಿ5 hours ago

Neha Murder Case : ನನ್ನ ಮಗನಿಗೆ ಶಿಕ್ಷೆ ಆಗಲಿ; ಇಬ್ಬರೂ ಲವ್‌ ಮಾಡ್ತಿದ್ದರು ಅನ್ನೋದು ಸತ್ಯ ಎಂದ ಫಯಾಜ್‌ ತಾಯಿ

Dina Bhavishya
ಭವಿಷ್ಯ12 hours ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ1 day ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ1 day ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

ಟ್ರೆಂಡಿಂಗ್‌