ಸಾಗರ: “ಇಲ್ಲಿನ ಉಪ ವಿಭಾಗಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದವರು ನನ್ನ ವಿರುದ್ಧ ಜೀವ ಬೆದರಿಕೆ (Threat to life) ಹಾಕಿರುವುದಾಗಿ ಆರೋಪಿಸಿ ಪ್ರತಿಭಟನೆ ಮಾಡಿದ್ದು ಗಮನಕ್ಕೆ ಬಂದಿದೆ. ಸಂಘ ಆರೋಪಿಸಿದಂತೆ ನಾನು ಯಾವುದೇ ಪತ್ರಕರ್ತರಿಗಾಗಲೀ, ಯಾರಿಗೆ ಆಗಲೀ ಜೀವ ಬೆದರಿಕೆ ಹಾಕಿರುವುದಿಲ್ಲ” ಎಂದು ಶಾಸಕ ಹರತಾಳು ಹಾಲಪ್ಪ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: IPL 2023 : ಜಾನಿ ಬೇರ್ಸ್ಟೋವ್ ಅಲಭ್ಯತೆ ಖಾತರಿ, ಪಂಜಾಬ್ ತಂಡ ಸೇರಿದ ಮ್ಯಾಥ್ಯೂ ಶಾರ್ಟ್ಸ್
ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಗೊಂಡಿರುವ ಈ ಮಾಹಿತಿಯು ಸುಳ್ಳು ಹಾಗೂ ದುರುದ್ದೇಶಪೂರಿತವಾಗಿದೆ. ರಾಜ್ಯ ಪೊಲೀಸ್ ಆಡಳಿತ ವ್ಯವಸ್ಥೆಯು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಪತ್ರಕರ್ತರಿಗೆ ಬೆದರಿಕೆ ಅಥವಾ ಜೀವ ಬೆದರಿಕೆ ಬಂದಲ್ಲಿ ತಕ್ಷಣ ದೂರು ನೀಡುವಂತೆ ಹಾಲಪ್ಪ ಹರತಾಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Weekend Style: ಸೆಲೆಬ್ರೆಟಿ ಸ್ಟೈಲಿಸ್ಟ್ ನೈನಾಗೆ ಆತ್ಮವಿಶ್ವಾಸವೇ ಬಿಂದಾಸ್ ಫ್ಯಾಷನ್ ಮಂತ್ರ
ಸಂಘ ಸ್ಪಷ್ಟನೆ
ಮಾ.24ರಂದು ಉಪ ವಿಭಾಗಾಧಿಕಾರಿಗಳ ಕಚೇರಿ ಎದುರು ಪತ್ರಕರ್ತರ ಸಂಘ ಪ್ರತಿಭಟನೆ ನಡೆಸಿದಾಗ ಶಾಸಕ ಹರತಾಳು ಹಾಲಪ್ಪ ಪತ್ರಕರ್ತರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಭಾಷಣದಲ್ಲಿ ಮತ್ತು ಮನವಿಯಲ್ಲಿ ಹೇಳಲಿಲ್ಲ. ಶಾಸಕರು ವರದಿ ಮಾಡಿದ ಪತ್ರಕರ್ತರನ್ನು ಪ್ರಶ್ನೆ ಮಾಡಿದ್ದಾರೆ ಎಂದು ಮಾತ್ರ ಉಲ್ಲೇಖಿಸಲಾಗಿದೆ. ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಶಾಸಕರು ಪತ್ರಕರ್ತರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪ್ರಚುರಪಟ್ಟಿರುವುದಕ್ಕೂ ಸಂಘಕ್ಕೂ ಸಂಬಂಧವಿಲ್ಲ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಸಾಗರ ಶಾಖೆ ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ: Congress ticket : ಮೂಡುಬಿದಿರೆಯಿಂದ ಡಿಕೆಶಿ ಆಪ್ತ, ಬೆಳ್ತಂಗಡಿಯಿಂದ ಬಿ.ಕೆ. ಹರಿಪ್ರಸಾದ್ ಸಂಬಂಧಿಗೆ ಟಿಕೆಟ್