Site icon Vistara News

Sagara News | ಮಾರಿಕಾಂಬಾ ದೇವಸ್ಥಾನದ ಜಾತ್ರೆ: ಹೈಕೋರ್ಟ್‌ ಆದೇಶ ಜಾರಿಗೊಳಿಸಲು ಒತ್ತಾಯಿಸಿ ಮನವಿ

High Court Marikamba temple

ಸಾಗರ: ಇಲ್ಲಿನ ಮಾರಿಕಾಂಬಾ ದೇವಸ್ಥಾನದ ಆಡಳಿತ ಮತ್ತು ಜಾತ್ರೆ ಸಂಬಂಧ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶವನ್ನು ಶೀಘ್ರವಾಗಿ ಜಾರಿಗೊಳಿಸುವಂತೆ ಒತ್ತಾಯಿಸಿ ಮಂಗಳವಾರ (ಡಿ.೨೦) ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ವತಿಯಿಂದ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಸಾಗರದ ಮಾರಿಕಾಂಬಾ ದೇವಸ್ಥಾನದ ಆಡಳಿತವನ್ನು ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಎನ್ನುವ ಸಂಸ್ಥೆ ಅನಧಿಕೃತವಾಗಿ ನಿರ್ವಹಣೆ ಮಾಡುತ್ತಿದೆ. ಈ ಸಮಿತಿಯು 12 ವರ್ಷಗಳಿಂದ ಅನಧಿಕೃತವಾಗಿ ಅಸ್ತಿತ್ವದಲ್ಲಿದ್ದು ಜಾತ್ರೆಯನ್ನು ನಡೆಸಿಕೊಂಡು ಬರುತ್ತಿದೆ. ಇದುವರೆಗೂ ಸಮಿತಿಯು ಲೆಕ್ಕಪತ್ರ ನೀಡಿಲ್ಲ. ಅಲ್ಲದೆ, ಸಾಮಾನ್ಯ ಸಭೆಯನ್ನೂ ನಡೆಸದೆ ಮುಂದುವರಿಯುತ್ತಿದೆ. ಸಮಿತಿಯ ವಿರುದ್ಧ ಸಾಕಷ್ಟು ಪ್ರತಿಭಟನೆ ನಡೆದಿದ್ದು, ಸಾಕಷ್ಟು ದೂರುಗಳು ಕೇಳಿ ಬಂದಿದ್ದರೂ ಯಾವುದೇ ಕ್ರಮವನ್ನು ತಾಲೂಕು ಆಡಳಿತ ಕೈಗೊಂಡಿಲ್ಲ ಎಂದು ಮನವಿಯಲ್ಲಿ ದೂರಲಾಗಿದೆ.

ಇದನ್ನೂ ಓದಿ | Model School | ಅಜ್ಜರಣಿ ಸ.ಹಿ.ಪ್ರಾ.ಶಾಲೆಯಲ್ಲಿ ಕೃಷಿ ಪಾಠ; ಆವರಣದಲ್ಲಿದೆ ತರಕಾರಿ ತೋಟ, ಇದರಿಂದಲೇ ಇಲ್ಲಿ ಬಿಸಿಯೂಟ!

ಸಮಿತಿಯ ಅಧ್ಯಕ್ಷ ಕೆ.ನಾಗೇಂದ್ರ, ಕಾರ್ಯದರ್ಶಿ ಬಿ. ಗಿರಿಧರ ರಾವ್, ಖಜಾಂಚಿ ನಾಗೇಂದ್ರ ಕುಮಟಾ ಇನ್ನಿತರರು ತಮ್ಮ ಸ್ವಹಿತಾಸಕ್ತಿಗಾಗಿ ಇಡೀ ಊರಿನ ಧಾರ್ಮಿಕ ವಿಧಿವಿಧಾನ, ಜಾತ್ರೆಯನ್ನು ನಡೆಸುವ ಮೂಲಕ ಸತತವಾಗಿ ನಾಲ್ಕನೇ ಬಾರಿ ಜಾತ್ರೆ ನಡೆಸಲು ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಸಮಿತಿಯನ್ನು ಕಾನೂನುಬದ್ಧವಾಗಿ ಶಿವಮೊಗ್ಗ ಡಿ.ಆರ್.ಸಿ.ಎಸ್.ನಲ್ಲಿ ನೋಂದಾಯಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಸಮಿತಿಯು ಧಾರ್ಮಿಕ ವಿಧಿವಿಧಾನಕ್ಕೆ ಬದ್ಧವಾಗಿ ಜಾತ್ರೆ ನಡೆಸಲು ಬದ್ಧವಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ | Supermodel Robot | ದುಬೈ ಹೋಟೆಲ್‌ನಲ್ಲಿ ಇನ್ನು ಸೂಪರ್‌ಮಾಡೆಲ್‌ ರೋಬೊಗಳಿಂದ ಸರ್ವ್, ಇದು ಜಗತ್ತಲ್ಲೇ ಮೊದಲು

2023ರ ಜಾತ್ರೆಯಲ್ಲಿ ಅಕ್ರಮ ನಡೆಯಬಹುದು ಎನ್ನುವ ಉದ್ದೇಶದಿಂದ ನಮ್ಮ ನೋಂದಾಯಿತ ಸಮಿತಿಯು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ನ್ಯಾಯಾಲಯವು ಅ. 31ರಂದು ಆದೇಶ ಹೊರಡಿಸಿ ನಮ್ಮ ಸಮಿತಿಗೆ ಅಧಿಕಾರ ಹಸ್ತಾಂತರ ಮಾಡಲು ಸೂಚಿಸಿತ್ತು. ಆದ್ದರಿಂದ ಹಾಲಿ ದೇವಸ್ಥಾನದ ಆಡಳಿತ ನಡೆಸುತ್ತಿರುವ ಸಮಿತಿ ಕಾನೂನುಬಾಹಿರವಾಗಿದ್ದು, ಈ ಬಗ್ಗೆ ತಾವು ಈವರೆಗೆ ಕ್ರಮ ತೆಗೆದುಕೊಳ್ಳದೆ ಇರುವುದು ನ್ಯಾಯಾಂಗ ನಿಂದನೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ತಕ್ಷಣ ನ್ಯಾಯಾಲಯದ ಆದೇಶದಂತೆ ನಮ್ಮ ಸಮಿತಿಗೆ ಜಾತ್ರೆ ನಡೆಸಲು ಅವಕಾಶ ಕಲ್ಪಿಸಬೇಕು. ಇಲ್ಲವಾದಲ್ಲಿ ತಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಲಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.

ಅಧಿಕೃತ ಎಂದು ಹೇಳಿಕೊಂಡಿರುವ ಮಾರಿಕಾಂಬಾ ದೇವಸ್ಥಾನದ ಆಡಳಿತ ಸಮಿತಿಯ ಗೌರವಾಧ್ಯಕ್ಷ ಎಂ.ನಾಗರಾಜ್, ಅಧ್ಯಕ್ಷ ಮಂಜುನಾಥ ಎಸ್.ಎಲ್., ಕಾರ್ಯದರ್ಶಿ ವಿ. ಗುರು, ಪ್ರಮುಖರಾದ ಕೆ.ವಿ.ಪ್ರವೀಣ್, ಎಲ್.ಚಂದ್ರಪ್ಪ, ಕೆ.ಸಿದ್ದಪ್ಪ, ನಾರಾಯಣಪ್ಪ, ಶಂಕರ ಅಳ್ವಿಕೋಡಿ, ದಳವಾಯಿ ದಾನಪ್ಪ, ಬಸವರಾಜ್ ಹಾಜರಿದ್ದರು.

ಇದನ್ನೂ ಓದಿ | Murugha Seer | ಮಠಾಧೀಶರ ಸಮಾಗಮ; ಮುರುಘಾ ಮಠದ ಆಡಳಿತಾಧಿಕಾರಿ ನೇಮಕ ವಾಪಸ್‌ ಪಡೆಯಲು ಆಗ್ರಹ

Exit mobile version