Site icon Vistara News

Sagara News: ಸಾಗರದ ಹೆಸರು ದೇಶಮಟ್ಟದಲ್ಲಿ ಕುಗ್ಗುವಂತಹ ಸ್ಥಿತಿ ನಿರ್ಮಾಣ: ತೀ.ನ.ಶ್ರೀನಿವಾಸ್

tinsrinivas sagara

#image_title

ಸಾಗರ: “ದೇಶದಲ್ಲಿ ಸಾಗರ ಕ್ಷೇತ್ರಕ್ಕೆ ತನ್ನದೇ ಆದ ಹೆಸರು ಇದೆ. ಆದರೆ, ಕೆಲವು ಚುನಾಯಿತ ಪ್ರತಿನಿಧಿಗಳು ನಡೆಸುತ್ತಿರುವ ಆಟಾಟೋಪದಿಂದ ಸಾಗರದ ಹೆಸರು ದೇಶ ಮಟ್ಟದಲ್ಲಿ ಕುಗ್ಗುವಂತಹ ಸ್ಥಿತಿ ನಿರ್ಮಾಣವಾಗಿದೆ” ಎಂದು ಮಲೆನಾಡು ರೈತ ಹೋರಾಟ ವೇದಿಕೆ ಜಿಲ್ಲಾ ಸಂಚಾಲಕ ತೀ.ನ. ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸೋಮವಾರ (ಮಾ.27) ಮಾತನಾಡಿದ ಅವರು, ಈಚೆಗೆ ಶಾಸಕ ಹರತಾಳು ಹಾಲಪ್ಪ ವಸ್ತುನಿಷ್ಠವಾಗಿ ವರದಿ ಮಾಡಿದ ಪತ್ರಕರ್ತ ಮಹೇಶ್ ಹೆಗಡೆ ಎಂಬುವವರಿಗೆ ಬೆದರಿಕೆ ಹಾಕಿದ್ದಾರೆ. ಹಿಂದೆ ನನಗೂ ಶಾಸಕರ ಬೆಂಬಲಿಗರಿಂದ ಜೀವ ಬೆದರಿಕೆ ಬಂದಿತ್ತು. ಜೀವ ಬೆದರಿಕೆಗೆ ಸಂಬಂಧಪಟ್ಟಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಪತ್ರಕರ್ತರಿಗೆ ಶಾಸಕ ಹರತಾಳು ಹಾಲಪ್ಪ ಅವರು ಬೆದರಿಕೆ ಹಾಕಿರುವುದನ್ನು ನಾನೊಬ್ಬ ಪತ್ರಕರ್ತನಾಗಿ ಖಂಡಿಸುತ್ತೇನೆ” ಎಂದರು.

ಇದನ್ನೂ ಓದಿ: KPSC Recruitment 2023 : ಕೆಪಿಎಸ್‌ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಿರಾ? ಹೊಸದಾಗಿ ಹೆಸರು ನೊಂದಾಯಿಸಿಕೊಳ್ಳಿ!

“ನನ್ನ ಮೇಲೆ ಎರಡು ಮೂರು ಬಾರಿ ಹಲ್ಲೆ, ಕೊಲೆ ಯತ್ನ ನಡೆದಿದೆ. ಹಿಂದೆ ಬಿಜೆಪಿ ಶಾಸಕರಾಗಿದ್ದ ಗೋಪಾಲಕೃಷ್ಣ ಬೇಳೂರು ತಮ್ಮ ಬೆಂಬಲಿಗರ ಮೂಲಕ ನನ್ನ ಧ್ವನಿ ಹತ್ತಿಕ್ಕುವ ಕೆಲಸ ಮಾಡಿದ್ದರು. ಶಾಸಕರಾದವರು ಜನರಿಗೆ ಮಾರ್ಗದರ್ಶನ ಮಾಡುವ ರೀತಿಯಲ್ಲಿ ಬದುಕಬೇಕು. ಅದರ ಬದಲು ದೌರ್ಜನ್ಯ, ದಬ್ಬಾಳಿಕೆ ನಡೆಸುವ ಮೂಲಕ ಶಾಂತಿ ಕದಡುವ ಕೆಲಸವನ್ನು ಜನಪ್ರತಿನಿಧಿಗಳು ಮಾಡುವುದು ನಾಚಿಕೆಗೇಡಿನ ಸಂಗತಿ” ಎಂದು ಹೇಳಿದರು.

ಇದನ್ನೂ ಓದಿ: World Theatre Day : ರಂಗಭೂಮಿ ನಿಂತಿರುವುದೇ ಬದ್ಧತೆಯ ಮೇಲೆ

“ಕ್ಷೇತ್ರ ವ್ಯಾಪ್ತಿಯಲ್ಲಿ ಗೂಂಡಾ ಸಂಸ್ಕೃತಿ, ದಬ್ಬಾಳಿಕೆ, ದೌರ್ಜನ್ಯ ಸಂಪೂರ್ಣವಾಗಿ ಮಟ್ಟ ಹಾಕಬೇಕು ಎನ್ನುವ ಉದ್ದೇಶದಿಂದ ನಾನು ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ಮತದಾರರು ಗೂಂಡಾ ಸಂಸ್ಕೃತಿ ಬೆಂಬಲಿಸುವವರಿಗೆ ಯಾವುದೇ ರೀತಿಯ ಮತಾಶೀರ್ವಾದ ನೀಡುವುದಿಲ್ಲ ಎನ್ನುವ ನಂಬಿಕೆ ನನಗಿದೆ. ಈಗಾಗಲೆ ಎಲ್ಲ ಜಾತಿ ವರ್ಗ, ಪಕ್ಷದವರನ್ನು ಭೇಟಿ ಮಾಡಿ ಬೆಂಬಲ ಕೋರಿದ್ದೇನೆ. ಹಣ ಮತ್ತು ಜಾತಿ ಬಲ ಇಲ್ಲದೇ ಚುನಾವಣೆ ಎದುರಿಸಿ ಗೆಲ್ಲಬಹುದು ಎನ್ನುವುದನ್ನು ನಾನು ತೋರಿಸಿಕೊಡುತ್ತೇನೆ. ಕ್ಷೇತ್ರ ವ್ಯಾಪ್ತಿಯ ಜಲ್ವಂತ ಸಮಸ್ಯೆಗಳನ್ನು ಜನರ ಎದುರಿಗೆ ಇರಿಸಿ ಮತ ಯಾಚನೆ ಮಾಡುತ್ತೇನೆ. ಕ್ಷೇತ್ರ ವ್ಯಾಪ್ತಿಯಲ್ಲಿ ಕಾಲ್ನಡಿಗೆಯಲ್ಲಿ ಮತದಾರರ ಮನೆ ಮನೆಗೆ ತೆರಳಿ ಮತ ಯಾಚನೆ ಮಾಡುವ ಮೂಲಕ ನ್ಯಾಯ ಸಮ್ಮತ ಚುನಾವಣೆಗೆ ಮುನ್ನುಡಿ ಬರೆಯುತ್ತೇನೆ” ಎಂದರು.

ಸುದ್ದಿಗೋಷ್ಠಿಯಲ್ಲಿ ಎಲ್.ವಿ.ಸುಭಾಷ್, ವಿಶ್ವನಾಥ ಗೌಡ ಅದರಂತೆ, ಗೋಪಾಲಕೃಷ್ಣ ಕಾರಂತ, ಟೀಟೂ ಸಾಗರ್ ಹಾಜರಿದ್ದರು.

ಇದನ್ನೂ ಓದಿ: Karnataka Election: ಕಾಂಗ್ರೆಸ್‌ನಲ್ಲಿ ಸಿಎಂ ಆಗೋಕೆ ಮೂರು ಜನ ಚಡ್ಡಿ ಹೊಲಿಸ್ಕೊಂಡು ಕೋತಾರ: ಗೋವಿಂದ ಕಾರಜೋಳ ವ್ಯಂಗ್ಯ

Exit mobile version