Site icon Vistara News

Sagara News: ಎಲ್ಲರ ಜೀವನಕ್ಕೆ ಪ್ರೇರಣೆಯಾಗಿರುವ ತಾಯಿಗೆ ಪರ್ಯಾಯವಿಲ್ಲ: ಮಧುರಾ ಶಿವಾನಂದ್

nagar sabhe adhyakshe Madhura Shivanand sagara

#image_title

ಸಾಗರ: ಪ್ರತಿಯೊಬ್ಬ ಮಹಿಳೆಗೂ ತಾಯಿಯೇ ಮೊದಲ ಸ್ಫೂರ್ತಿ. ಎಲ್ಲರ ಜೀವನಕ್ಕೆ ಪ್ರೇರಣೆಯಾಗಿರುವ (inspiration ) ತಾಯಿಗೆ ಪರ್ಯಾಯ ಇಲ್ಲ ಎಂದು ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ತಿಳಿಸಿದರು.

ನಗರಸಭೆ ವತಿಯಿಂದ ಇಲ್ಲಿನ ನಗರಸಭೆಯ ರಂಗಮಂದಿರದಲ್ಲಿ ಮಂಗಳವಾರ (ಮಾ.14) ಹಮ್ಮಿಕೊಳ್ಳಲಾಗಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಧೈರ್ಯ, ತಾಳ್ಮೆ, ಸಹನೆಗೆ ಪರ್ಯಾಯ ಪದವೇ ಮಹಿಳೆ. ಕುಟುಂಬದ ಜತೆಗೆ ಸಮಾಜವನ್ನು ನಿರ್ವಹಿಸುವ ಮಹಿಳೆ ತನಗೆ ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸುತ್ತಾಳೆ. ಕೃಷಿ, ಆರೋಗ್ಯ, ರಾಜಕೀಯ, ಶಿಕ್ಷಣ, ಸಾಮಾಜಿಕ, ಧಾರ್ಮಿಕ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಮಹಿಳೆಯರ ಸಾಧನೆ ಗಮನಾರ್ಹವಾಗಿದ್ದು, ಪುರುಷರಿಗೆ ಸರಿಸಮಾನವಾಗಿ ಕೆಲಸ ಮಾಡುತ್ತಿದ್ದಾಳೆ ಎಂದು ಹೇಳಿದರು.

ಇದನ್ನೂ ಓದಿ: Rahul Gandhi: ರಾಹುಲ್ ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ ಎಂದ ಮಲ್ಲಿಕಾರ್ಜುನ ಖರ್ಗೆ

ಆಧುನಿಕ ದಿನಮಾನಗಳಲ್ಲಿ ಯಂತ್ರಗಳು ಮಕ್ಕಳ ಮನಸ್ಸನ್ನು ದಿಕ್ಕು ತಪ್ಪಿಸುತ್ತಿದೆ. ಮಹಿಳೆಯರು ಮನೆಯಲ್ಲಿ ಮಕ್ಕಳಿಗೆ ಸಂಸ್ಕಾರಯುತ ಮಾರ್ಗ ಕಲಿಸುತ್ತಿದ್ದಾರಾ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಾಗಿದೆ. ಆಧುನಿಕತೆಯ ಪ್ರಮಾದಗಳಿಗೆ ಮಕ್ಕಳು ಬಲಿಯಾಗದಂತೆ ನಾವು ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Pathaan Movie: 50 ದಿನಗಳನ್ನು ಪೂರೈಸಿದ ʻಪಠಾಣ್‌ʼ: 20 ದೇಶಗಳಲ್ಲಿ ಇನ್ನೂ ಪ್ರದರ್ಶನ!

ಸಹಾಯಕ ಕಾರ್ಯಪಾಲಕ ಅಭಿಯಂತರ ಎಚ್.ಕೆ. ನಾಗಪ್ಪ ಮಾತನಾಡಿ, ಹೆಣ್ಣು ಕುಟುಂಬದ ಕಣ್ಣು ಎನ್ನುವ ಮಾತು ಎಲ್ಲರೂ ಒಪ್ಪಿಕೊಳ್ಳಬೇಕು. ನಿಗದಿತವಾದ ಗುರಿ ಇರಿಸಿಕೊಂಡು ಮಹಿಳೆ ಮುಂದೆ ಹೆಜ್ಜೆ ಇರಿಸಿದಾಗ ಅವಳು ಎಂತಹ ಸಾಧನೆಯನ್ನು ಬೇಕಾದರೂ ಮಾಡುತ್ತಾಳೆ. ಕೀಳರಿಮೆ ಬಿಟ್ಟು ಕೆಲಸ ಮಾಡಿದಾಗ ನೀವು ಖಂಡಿತಾ ಯಶಸ್ಸು ಗಳಿಸುತ್ತೀರಿ ಎಂದು ಕಿವಿಮಾತು ಹೇಳಿದರು.

ನಗರಸಭೆ ಉಪಾಧ್ಯಕ್ಷ ವಿ.ಮಹೇಶ್, ಸದಸ್ಯೆ ಲಲಿತಮ್ಮ ಮಾತನಾಡಿದರು. ವೇದಿಕೆಯಲ್ಲಿ ಸ್ಥಾಯಿ ಸಮಿತಿಯ ಅಧ್ಯಕ್ಷ ಅರವಿಂದ ರಾಯ್ಕರ್, ಪರಿಸರ ಅಭಿಯಂತರ ಮದನ್, ಪೌರ ಕಾರ್ಮಿಕೆ ಪೊನ್ನಮ್ಮ, ಉಪಸ್ಥಿತರಿದ್ದರು. ನಾದಿರಾ ತಾಹಿರ್ ಕಾರ್ಯಕ್ರಮ ನಿರ್ವಹಿಸಿದರು.

ಇದನ್ನೂ ಓದಿ: IND VS AUS: ಮುಂಬಯಿ ತಲುಪಿದ ಆಸ್ಟ್ರೇಲಿಯಾ​ ಆಟಗಾರರು

Exit mobile version