Site icon Vistara News

Sakleshpur Road Accident: ಅತಿ ವೇಗ ತಂದ ಆಪತ್ತು; ಚಾಲಕನ ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿದ ಕಾರು

Sakleshpur Road Accident

Sakleshpur Road Accident

ಹಾಸನ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 75ರ ಸಕಲೇಶಪುರ ಪಟ್ಟಣದ ಹೊಸ ಬಸ್ ನಿಲ್ದಾಣ (Sakleshpur Road Accident) ಸಮೀಪ ಚಾಲಕನ ನಿಯಂತ್ರಣ ತಪ್ಪಿ ಅಂಗಡಿಗೆ ಕಾರೊಂದು ನುಗ್ಗಿದ ಘಟನೆ ಬೆಳಗಿನ ಜಾವ ನಡೆದಿದೆ.

ಅಂಗಡಿಯೊಳಗೆ ನುಗ್ಗಿದ ಕಾರು

ವೇಗವಾಗಿ ಬಂದ ಕಾರು ಚಾಲಕನಿಗೆ ತಿರುವು ಇರುವುದು ಕಾಣದೆ ನೇರವಾಗಿ ಅಂಗಡಿಯೊಳಗೆ ನುಗ್ಗಿದೆ. ಕಾರು ಗುದ್ದಿದ ರಭಸಕ್ಕೆ ಅಂಗಡಿ ಸಂಪೂರ್ಣವಾಗಿ ಕುಸಿದಿದೆ. ಕಾರು ಸಹ ಅಂಗಡಿಯೊಳಗೆ ಹುದುಗಿಹೋಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದು, ಕಾರಿನೊಳಗೆ ಸಿಲುಕಿಕೊಂಡಿದ್ದವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಸಣ್ಣ ಪುಟ್ಟ ಗಾಯಗೊಂಡಿದ್ದವರನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.‌

ಕಾರು ನುಗ್ಗಿದ ರಭಸಕ್ಕೆ ಅಂಗಡಿ ಧ್ವಂಸ

ಇನ್ನು ಅಂಗಡಿ ಬಾಗಿಲು ಮುಚ್ಚಿದ್ದರಿ‌ಂದ ಅನಾಹುತವೊಂದು ತಪ್ಪಿದೆ. ಸ್ಥಳಕ್ಕೆ ಸಕಲೇಶಪುರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಂಗಡಿಯೊಳಗೆ ನುಗ್ಗಿದ ಕಾರನ್ನು ಕ್ರೇನ್‌ ಮೂಲಕ ಮೇಲಕ್ಕೆ ಎತ್ತುವ ಕೆಲಸ ಮಾಡಿದ್ದು, ಇತ್ತ ವಿಷಯ ತಿಳಿಯುತ್ತಿದ್ದಂತೆ ಒಬ್ಬರ ಹಿಂದೆ ಒಬ್ಬರಂತೆ ಜನರು ಜಮಾಯಿಸಿದ್ದರು.

ನಿಯಂತ್ರಣ ತಪ್ಪಿ ಮನೆಯ ಮೇಲೆಯೇ ಉರುಳಿತ್ತು ಟ್ರ್ಯಾಕ್ಟರ್‌

ಈ ರೀತಿಯ ಅವಘಡಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಏಪ್ರಿಲ್‌ 4ರಂದು ಶೃಂಗೇರಿ ತಾಲೂಕಿನ ಮಾರುತಿ ಬೆಟ್ಟ ಗ್ರಾಮದ ತಿರುವಿನಲ್ಲಿ ಸಾಗುತ್ತಿದ್ದ ಟ್ರ್ಯಾಕ್ಟರ್‌ ಒಂದು ಚಾಲಕನ ನಿಯಂತ್ರಣ ತಪ್ಪಿ ಮನೆಯ ಮೇಲೆ ಉರುಳಿ ಬಿದ್ದಿತ್ತು. ಟ್ರ್ಯಾಕ್ಟರ್ ಬಿದ್ದ ರಭಸಕ್ಕೆ ಕಿರಣ್‌ ಎಂಬುವವರ ಮನೆ ಸಂಪೂರ್ಣ ನಜ್ಜುಗುಜ್ಜಾಗಿತ್ತು. ಕಿರಣ್ ಪತ್ನಿ ಅಡುಗೆ ಮನೆಯಲ್ಲಿದ್ದರೆ, ಪುಟ್ಟ ಮಗು ಅಲ್ಲೇ ಆಟವಾಡುತ್ತಿತ್ತು. ಟ್ರ್ಯಾಕ್ಟರ್‌ ಬಿದ್ದ ರಭಸಕ್ಕೆ ಅಡುಗೆ ಮನೆಯ ಭಾಗವೂ ಸ್ವಲ್ಪ ಜಖಂ ಆಗಿತ್ತು. ಆದರೆ, ಅದೃಷ್ಟಕ್ಕೆ ತಾಯಿ ಮತ್ತು ಮಗು ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವಾಗಿದ್ದರು.

ಇದನ್ನೂ ಓದಿ: Kiccha Sudeep: ನಟ ಕಿಚ್ಚ ಸುದೀಪ್ ಚಲನಚಿತ್ರ, ಟಿವಿ ಶೋ, ಜಾಹೀರಾತು ತಡೆ ಹಿಡಿಯಿರಿ; ಚುನಾವಣಾ ಆಯೋಗಕ್ಕೆ ಮನವಿ

ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ್ದ ಕಾರು

ಮಾರ್ಚ್‌ 25ರಂದು ಕಳಸ ತಾಲೂಕಿನ ಗಂಗನಕುಡಿಕೆ ಗ್ರಾಮದಲ್ಲಿ (Road Accident) ಬೆಳಗಿನ ಜಾವ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪ್ರಪಾತಕ್ಕೆ ಉರುಳಿದ ಘಟನೆ ನಡೆದಿತ್ತು. ಪ್ರಪಾತದಿಂದ ಉರುಳಿ ಮನೆಯ ಗೋಡೆಗೆ ಗುದ್ದಿತ್ತು, ಅದೃಷ್ಟವಶಾತ್ ಕಾರಿನಲ್ಲಿದ್ದ ಐವರು ಪ್ರಾಣಾಪಾಯದಿಂದ ಪಾರಾಗಿದ್ದರು. ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಹೊರಟಿದ್ದಾಗ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ್ದು ನೇರ ಪ್ರಪಾತಕ್ಕೆ ಬಿದ್ದಿತ್ತು.

Exit mobile version