ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ (Amrit Mahotsav) ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಆಯಾ ವಲಯ ಜಂಟಿ ಆಯುಕ್ತರ ಕಚೇರಿ, ವಾರ್ಡ್ ಕಚೇರಿಗಳಲ್ಲಿ ನಾಗರಿಕರಿಗೆ ಧ್ವಜಗಳನ್ನು ಮಾರಾಟ ಮಾಡಲಾಗುತ್ತಿದೆ. ಅಲ್ಲದೆ, ವಲಯದ ಪ್ರಮುಖ ಸ್ಥಳ/ಮಾಲ್‌ಗಳಲ್ಲಿ ಧ್ವಜಗಳನ್ನು ಮಾರಾಟ ಮಾಡಲಾಗುತ್ತಿದ್ದು, ಅವುಗಳ ವಲಯವಾರು ಮಾಹಿತಿ ಈ ಕೆಳಕಂಡಂತಿದೆ.
1. ಪಶ್ಚಿಮ ವಲಯದಲ್ಲಿ ಮಂತ್ರಿ ಮಾಲ್, ಒರಾಯನ್ ಮಾಲ್, ಲುಲು ಮಾಲ್ (ಗ್ಲೋಬಲ್ ಮಾಲ್), ಗೋಪಾಲನ್ ಮಾಲ್
2.ಪೂರ್ವ ವಲಯದಲ್ಲಿ ಗರುಡ ಮಾಲ್, ಸೆಂಟ್ರಲ್ ಮಾಲ್, ಎಂ.ಜಿ ಮಾಲ್, ಎಂ.ಎಸ್. ಬಿಲ್ಡಿಂಗ್
3.ದಕ್ಷಿಣ ವಲಯದಲ್ಲಿ ಲೈಫ್‌ಸ್ಟೈಲ್ ಮಾಲ್, ಜಿಟಿ ವರ್ಲ್ಡ್ ಮಾಲ್, ಸ್ವಾಗತ್ ಗರುಡ ಮಾಲ್, ಫೋರಂ ಮಾಲ್ ಮೋರ್ ಮಾರ್ಟ್, ಬುಲ್ ಟೆಂಪಲ್ ರಸ್ತೆ, ಗೋಪಾಲನ್ ಮಾಲ್, ಸೆಂಟ್ರಲ್ ಮಾಲ್
ಇದನ್ನೂ ಓದಿ | ನಕಲಿ ಡೀಲ್ ರಾಜ V/S ಮಿಸ್ಟರ್ ಬ್ಲ್ಯಾಕ್‌ಮೇಲರ್: ಎಚ್‌ಡಿಕೆ, ಅಶ್ವತ್ಥನಾರಾಯಣ ಸಮರ
4.ಮಹದೇವಪುರ ವಲಯದಲ್ಲಿ ಫೀನಿಕ್ಸ್ ಮಾಲ್, ಫೋರಂ ಮಾಲ್, ವೈಟ್ ಫೀಲ್ಡ್, ಶಾಂತಿನಿಕೇತನ್ ಫೋರಮ್ ಮಾಲ್, ಮಾರತಹಳ್ಳಿಯ ಮೋರ್ ಮಾರ್ಕೆಟ್, ಕೆ.ಎಲ್.ಎಂ ಮಾಲ್, ಮಲ್ಟಿಪ್ಲೆಕ್ಸ್, ಬ್ರ್ಯಾಂಡ್ ಫ್ಯಾಕ್ಟರಿ, ಬೆಳಂದೂರು ಟೋಟಲ್ ಮಾಲ್, ಸೆಂಟ್ರಲ್ ಮಾಲ್, ಸಿದ್ದಾಪುರದ ಡಿ ಮಾರ್ಟ್, ತೂಬರ ಹಳ್ಳಿ ಹೈಪರ್ ಸಿಟಿ ಮಾಲ್, ಕುಂದರಹಳ್ಳಿ ಬ್ರೂಕ್ ಫೀಲ್ಡ್ ಮಾಲ್, ಟಿನ್ ಫ್ಯಾಕ್ಟರಿ ಬಸ್ ನಿಲ್ದಾಣ
5.ಯಲಹಂಕ ವಲಯದಲ್ಲಿ ಆರ್.ಎಂ.ಝಡ್ ಮಾಲ್, ಎಸ್ಟಿಮ್ ಮಾಲ್, ಎಲಿಮಂಟ್ಸ್ ಮಾಲ್
6.ರಾಜರಾಜೇಶ್ವರಿನಗರ ವಲಯದಲ್ಲಿ ಜೆ.ಪಿ ಪಾರ್ಕ್, ಗೋಪಾಲನ್ ಆರ್ಕೇಡ್, ರಾಯಲ್ ಮಾರ್ಟ್
7. ಬೊಮ್ಮನಹಳ್ಳಿ ವಲಯದಲ್ಲಿ ರಾಯಲ್ ಮಿನಾಕ್ಷಿ ಮಾಲ್, ವೆಗಾಸಿಟಿ ಮಾಲ್, ರಿಲಯನ್ಸ್ ಮಾರ್ಟ್
8.ದಾಸರಹಳ್ಳಿ ವಲಯದಲ್ಲಿ ಐಕಿಯಾ, ಬಾಗಲಗುಂಟೆ ರಂಗ ಮಂದಿರದಲ್ಲಿ ಧ್ಜಜಗಳನ್ನು ಮಾರಾಟ ಮಾಡುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | ಪರ್ಮಿಷನ್ ಕೊಡೋಕೆ ಜಮೀರ್ ಯಾರು? ಮೈದಾನ ಏನು ಅವರಪ್ಪಂದಾ ಎಂದು ಕೇಳಿದ ಸಿ.ಟಿ ರವಿ