Site icon Vistara News

Salon On Fire | ಮನಿ ಕಿರಿಕ್‌: ತಮ್ಮನ ಮೇಲಿನ ಸಿಟ್ಟಿಗೆ ಅಕ್ಕನ ಸೆಲೂನ್‌ಗೆ ಬೆಂಕಿ ಇಟ್ಟರು; ಕಂಬಿ ಹಿಂದೆ ಬಂದಿಯಾದರು

ಆನೇಕಲ್‌ (ಬೆಂಗಳೂರು ಗ್ರಾಮಾಂತರ): ಇಲ್ಲಿನ ಬೆಂಗಳೂರು ಹೊರವಲಯದ ಆನೇಕಲ್‌ ತಾಲೂಕಿನ ಚಂದಾಪುರ ಸರ್ಕಲ್‌ನಲ್ಲಿದ್ದ ವಿಶ್ ಫ್ಯಾಮಿಲಿ ಸೆಲೂನ್‌ಗೆ ಬೆಂಕಿ ಹಚ್ಚಿ (Salon On Fire) ಪರಾರಿ ಆಗಿದ್ದ ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹೊಸೂರು ಮೂಲದ ಬೇಬಿ ರಾಣಿ ಎಂಬುವವರಿಗೆ ಸೇರಿದ ಸೆಲೂನ್‌ಗೆ ಕಿಡಿಗೇಡಿಗಳು ಹೊಸ ವರ್ಷದಂದು ಬಾಗಿಲು ಒಡೆದು ಬೆಂಕಿ ಇಟ್ಟಿದ್ದರು. ಕಿಡಿಗೇಡಿಗಳ ಕೃತ್ಯದಿಂದಾಗಿ ವಿಶ್‌ ಫ್ಯಾಮಿಲಿ ಸೆಲೂನ್ ಸಂಪೂರ್ಣ ಸುಟ್ಟು ಕರಕಲಾಗಿ, 60 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ವಸ್ತುಗಳು ಬೆಂಕಿಗಾಹುತಿ ಆಗಿದ್ದವು.

ಸಲೂನ್‌ ಒಳ ನುಗ್ಗಿದ್ದ ಶಿವಕುಮಾರ್‌ ಹಾಗೂ ಸಹಚರರು

ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಕೃತ್ಯ
ಮೊದಲ ಮಹಡಿಯಲ್ಲಿದ್ದ ಬೋಟಿಕ್ ಸೆಲೂನ್‌ಗೆ ಬೆಂಕಿ ಹಚ್ಚಲು ಹೊಸ ವರ್ಷದ ರಾತ್ರಿಯನ್ನೇ ಆರೋಪಿಗಳು ಹೊಂಚು ಹಾಕಿದ್ದರು. ಅಕ್ಕ ಪಕ್ಕದವರಿಗೆ ತಿಳಿಯಬಾರದೆಂದು ನಾಲ್ವರು ಕಿರಾತಕರು ಮಾಸ್ಟರ್‌ ಪ್ಲ್ಯಾನ್‌ ಮಾಡಿದ್ದರು. ಹೊಸ ವರ್ಷದ ಸೆಲೆಬ್ರೇಷನ್ ನೆಪದಲ್ಲಿ ಪಟಾಕಿ ಸಿಡಿಸಿದರು. ಪಟಾಕಿ ಶಬ್ದದ ನಡುವೆ ಸೆಲೂನ್‌ ಗಾಜು ಪುಡಿ ಪುಡಿ ಮಾಡಿದರು. ಬಳಿಕ ಬಾಗಿಲು ಒಡೆದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿ ಆಗಿದ್ದರು. ನ್ಯೂ ಇಯರ್ ದಿನ ಕಿಡಿಗೇಡಿಗಳು ನಡೆಸಿದ್ದ ದುಷ್ಕೃತ್ಯ ಎಲ್ಲವೂ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದ್ದವು.

ರಿವೆಂಜ್‌ ತೀರಿಸಿಕೊಂಡ ಪುಪ್ಪಾ

ಹಣಕ್ಕಾಗಿ ರಿವೆಂಜ್‌
ಬೇಬಿ ರಾಣಿಯ ತಮ್ಮನಿಗೆ ಪುಷ್ಪಾ ಎಂಬಾಕೆ ಮೂರು ಲಕ್ಷ ರೂ. ಹಣವನ್ನು ನೀಡಿದ್ದರು. ಆದರೆ ರಾಣಿ ತಮ್ಮ ಹಣ ವಾಪಸ್ ಕೊಡುವುದನ್ನು ವಿಳಂಬ ಮಾಡಿದ್ದರು. ಪದೆಪದೇ ಹಣ ವಾಪಸ್‌ ಕೊಡುವಂತೆ ಒತ್ತಾಯಿಸಿದ್ದರೂ ಆತ ನಿರ್ಲಕ್ಷ್ಯಸಿದ್ದ ಎನ್ನಲಾಗಿದೆ. ಹೀಗಾಗಿ ತಮ್ಮನ ಮೇಲಿನ ಸಿಟ್ಟಿಗೆ ಅಕ್ಕನ ಬೋಟಿಕ್‌ ಸೆಲೂನ್‌ಗೆ ಬೆಂಕಿ ಹಚ್ಚಿ ರಿವೆಂಜ್‌ ತೀರಿಸಿಕೊಳ್ಳಲು ಸಂಚು ರೂಪಿಸಿದ್ದರು.

ಅಕ್ರಮ ಸಂಬಂಧ ಹೊಂದಿದ್ದ ಪುಷ್ಪಾ- ಶಿವಕುಮಾರ್‌
ಶಿವಕುಮಾರ್ ಎಂಬಾತನೊಂದಿಗೆ ಪುಷ್ಪಾ ಅಕ್ರಮ ಸಂಬಂಧ ಹೊಂದಿದ್ದಳು. ಹೀಗಾಗಿ ಬೇಬಿ ರಾಣಿ ತಮ್ಮ ಕೊಟ್ಟ ಹಣ ವಾಪಸ್‌ ಕೊಡದಿರುವುದನ್ನು ತಿಳಿಸಿದ್ದಳು. ಹೀಗಾಗಿ ಸೇಡು ತೀರಿಸಿಕೊಳ್ಳಲು ಮುಂದಾಗಿ ಶಿವಕುಮಾರ್‌ಗೆ ಡೀಲ್‌ ಕೊಟ್ಟಳು. ಶಿವಕುಮಾರ್ ಹಾಗೂ ಮೂವರು ಸಹಚರರು ಸೇರಿ ಹೊಸ ವರ್ಷದಂದು ಸೆಲೂನ್‌ಗೆ ಬೆಂಕಿ ಹಚ್ಚಿ ಪರಾರಿ ಆಗಿದ್ದರು. ಸದ್ಯ ತನಿಖೆ ನಡೆಸಿದ ಸೂರ್ಯನಗರ ಪೊಲೀಸರು ಶಿವಕುಮಾರ್‌ ಸೇರಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ತಲೆಮರೆಸಿಕೊಂಡಿರುವ ಪುಷ್ಪಾಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ | Boy drowned | ತಾಯಿ ಜತೆಗೆ ಹೋಗಿದ್ದ ಬಾಲಕ ಆಟವಾಡುತ್ತಾ ಹೊಳೆ ನೀರಿಗೆ ಬಿದ್ದು ಮೃತ್ಯು

Exit mobile version