Site icon Vistara News

Sanjay Raut: ಪ್ರಚೋದನಾತ್ಮಕ ಭಾಷಣ; ಶಿವಸೇನೆ ವಕ್ತಾರ ಸಂಜಯ್ ರಾವುತ್‌ ಸೇರಿ ಇಬ್ಬರಿಗೆ ನಿರೀಕ್ಷಣಾ ಜಾಮೀನು

Sanjay Raut claims that 2000 crore spent to purchase party symbol by Shinde Camp

ಬೆಳಗಾವಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಕನ್ನಡಿಗರ ವಿರುದ್ಧ ಪ್ರಚೋದನಾತ್ಮಕ ಭಾಷಣ ಮಾಡಿದ್ದ ಪ್ರಕರಣದಲ್ಲಿ ಮಹಾರಾಷ್ಟ್ರದ ಶಿವಸೇನೆ ವಕ್ತಾರ, ರಾಜ್ಯ ಸಭೆ ಸದಸ್ಯ ಸಂಜಯ್ ರಾವುತ್‌ (Sanjay Raut) ಸೇರಿ ಇಬ್ಬರಿಗೆ ಬೆಳಗಾವಿಯ ಜಿಲ್ಲಾ ಮತ್ತು ಪ್ರಧಾನ ಸತ್ರ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

2018ರಲ್ಲಿ ಮೇ 12ರಂದು ಬೆಳಗಾವಿಯಲ್ಲಿ ನಡೆದಿದ್ದ ಖಾಸಗಿ ಕಾರ್ಯಕ್ರಮದಲ್ಲಿ ಪ್ರಚೋದನಾತ್ಮಕ ಭಾಷಣ ನೀಡಿದ್ದರಿಂದ ಟಿಳಕವಾಡಿ ಠಾಣೆಯಲ್ಲಿ ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಚುನಾವಣೆ ಆಯೋಗದ ಅಧಿಕಾರಿಗಳು ದೂರು ದಾಖಲಿಸಿದ್ದರು. ಈ ಸಂಬಂಧ ಸಂಜಯ್‌ ರಾವುತ್‌ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ | D.K. Shivakumar: ಆಸ್ತಿಯಲ್ಲಿ ಏರಿಕೆ ಪ್ರಕರಣ; ಮಗಳು ಐಶ್ವರ್ಯಳಿಗೂ ಬಂದಿದೆ ಸಿಬಿಐ ನೋಟಿಸ್‌ ಎಂದ ಡಿಕೆಶಿ

ಎರಡು ತಿಂಗಳ ಹಿಂದಷ್ಡೇ ಸಂಜಯ್ ರಾವುತ್‌ಗೆ ನ್ಯಾಯಾಲಯ ಸಮನ್ಸ್ ನೀಡಿತ್ತು. ಡಿಸೆಂಬರ್ 1ಕ್ಕೆ ಕೋರ್ಟ್‌ಗೆ ಸಂಜಯ್ ರಾವುತ್ ಪರ ವಕೀಲರು ಹಾಜರಾಗಿ ಸಮಯ ಕೇಳಿದ್ದರು. ಇದಕ್ಕೆ ನ್ಯಾಯಾಧೀಶ ಮುಸ್ತಫಾ ಹುಸೇನ್‌ ಅವರು ಸಮ್ಮತಿ ನೀಡಿ, 50 ಸಾವಿರ ರೂಪಾಯಿ ಭದ್ರತೆ, ನಿಗದಿತ ಸಮಯದಲ್ಲಿ ಕೋರ್ಟ್‌ಗೆ ಹಾಜರಾಗಬೇಕೆಂದು ಸೂಚನೆ ನೀಡಿ ಜಾಮೀನು ಮಂಜೂರು ಮಾಡಿದ್ದಾರೆ.

Exit mobile version