Site icon Vistara News

Santro Ravi Case | ಸ್ಯಾಂಟ್ರೋ ರವಿ ಅನೈತಿಕ ಜಾಲ ಹೆಮ್ಮರವಾಗಿ ಬೆಳೆದದ್ದೇ ಕಾಂಗ್ರೆಸ್‌ ಕಾಲದಲ್ಲಿ ಎಂದ ಬಿಜೆಪಿ

santro ravi

ಬೆಂಗಳೂರು: ರಾಜಕಾರಣಿಗಳು ಮತ್ತು ಅಧಿಕಾರಿಗಳ ಪರಮಾಪ್ತ ಸಖನಾಗಿ, ವೇಶ್ಯಾವಾಟಿಕೆ, ವರ್ಗಾವಣೆ ದಂಧೆ ಮೂಲಕ ಗಮನ ಸೆಳೆದ ಸ್ಯಾಂಟ್ರೋ ರವಿಯ (Santro Ravi Case) ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಾಗ್ವಾದ ಮುಂದುವರಿದಿದೆ.

ಸ್ಯಾಂಟ್ರೋ ರವಿಗೆ ಈಗಿನ ಬಿಜೆಪಿ ಸರಕಾರವೇ ಆಶ್ರಯದಾತ. ಇದರ ಮಂತ್ರಿಗಳ ಜತೆ ಆತನಿಗೆ ಅತ್ಯುತ್ತಮ ಬಾಂಧವ್ಯವಿದೆ ಎಂದು ಕಾಂಗ್ರೆಸ್‌ ಪ್ರಚಾರ ಮಾಡುತ್ತಿದೆ. ಈ ನಡುವೆ ಬಿಜೆಪಿ, ಸ್ಯಾಂಟ್ರೋ ರವಿ ಈ ಕಾಲದಲ್ಲಿ ಚಟುವಟಿಕೆ ನಡೆಸುತ್ತಿದ್ದರೂ ಆತನ ಬೇರುಗಳು ಇರುವುದು ಕಾಂಗ್ರೆಸ್‌ ಕಾಲದಲ್ಲಿ ಎಂದು ಬಿಜೆಪಿ ಹೇಳಿದೆ.

ಸರಣಿ ಟ್ವೀಟ್‌ಗಳ ಮೂಲಕ ಅದು ಕಾಂಗ್ರೆಸ್‌ ನಾಯಕರಿಗೆ ತಿರುಗೇಟು ನೀಡಿದೆ.

೧. ಸ್ಯಾಂಟ್ರೊ ರವಿಯ ಅನೈತಿಕ ಜಾಲ ಬೆಳೆದು ಹೆಮ್ಮರವಾಗಿದ್ದೇ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ. ಆತನ ಮಹಾಪೋಷಕರೇ ಕೈ ಪಕ್ಷ.‌

೨.ಕೊನೆಗೂ ಜೈಲಿಗೆ ಹೋದ ಸ್ಯಾಂಟ್ರೊ ರವಿ ಹೊರ ಬಂದದ್ದು ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲೇ, ಅವನ ವಿಳಾಸ ಕಾಂಗ್ರೆಸ್ ನಾಯಕರಿಗೆ ಗೊತ್ತಿರಬೇಕು. ಗೊತ್ತಿದೆ ಸಹ.

೩. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಯಾಂಟ್ರೊ ರವಿಯ ವಿರುದ್ದ ಸಮಗ್ರ ತನಿಖೆಗೆ ಆದೇಶ ನೀಡಿರುವುದು ಕಾಂಗ್ರೆಸ್ ನಾಯಕರಿಗೆ ನಡುಕ ಹುಟ್ಟಿಸಿದೆ.

೩. ಸ್ಯಾಂಟ್ರೊ ರವಿಯ ಅಕ್ರಮಕ್ಕೆ 20 ವರ್ಷಗಳ ಇತಿಹಾಸವಿದ್ದು, ಆತ ಯಾವ ಯಾವ ನಾಯಕರುಗಳೊಂದಿಗೆ ಸಂಪರ್ಕ ಹೊಂದಿದ್ದ ಎನ್ನುವ ಎಲ್ಲ ಸತ್ಯ ತನಿಖೆಯಿಂದ ಹೊರಬರಲಿದೆ.

ಇದನ್ನೂ ಓದಿ | Santro Ravi case | ಸ್ಯಾಂಟ್ರೋ ರವಿಯ ಇನ್ಸ್‌ಪೆಕ್ಟರ್‌ ವರ್ಗಾವಣೆ ದಂಧೆ, ಸಹಕರಿಸಿದವರ ಫುಲ್ ಡಿಟೇಲ್ಸ್‌ ಬಯಲು!

Exit mobile version