Site icon Vistara News

New Parliament Building: ವಿಜಯಪುರದ ಸಾರಂಗ ಮಠದಲ್ಲೂ ಇದೆ ಚಿನ್ನದ ಸೆಂಗೋಲ್ ಹೋಲುವ ಧರ್ಮದಂಡ!

Sengol in new Parliament‌ and vijayapura sarangi mutt dharmadanda

ವಿಜಯಪುರ: ನೂತನ ಸಂಸತ್‌ ಭವನದಲ್ಲಿ (New Parliament Building) ಲೋಕಸಭಾಧ್ಯಕ್ಷರ ಪೀಠದ ಬಳಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಚಿನ್ನದ ಸೆಂಗೋಲ್‌ ಅನ್ನು ಭಾನುವಾರ ಪ್ರತಿಷ್ಠಾಪನೆ ಮಾಡಿದ್ದಾರೆ. ಇದು ಚಿನ್ನದ ರಾಜದಂಡವಾಗಿದ್ದರೆ, ಇದನ್ನೇ ಹೋಲುವ ಬೆಳ್ಳಿಯ ಧರ್ಮದಂಡವು ವಿಜಯಪುರದ (Vijayapura) ಸಾರಂಗ ಮಠದಲ್ಲಿದೆ.

ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿರುವ ಸಾರಂಗ ಮಠದಲ್ಲಿ ಈಗ ಬೆಳ್ಳಿಯ ಧರ್ಮದಂಡ ಬಹು ಚರ್ಚಿತವಾಗುತ್ತಿದೆ. ಉಜ್ಜಯಿನಿ ಪೀಠಕ್ಕೆ ಸೇರಿದ ಈ ಧರ್ಮದಂಡದ ಮೇಲೆ ನಂದಿ ಮೂರ್ತಿಯೂ ಇದೆ. ಈ ಧರ್ಮದಂಡವನ್ನು ಸಿಂದಗಿ ಸಾರಂಗ ಮಠದ ಗುರುಗಳು ಬಳಸುತ್ತಾರೆ.

ಉಜ್ಜಯಿನಿ ಪೀಠದ ಧರ್ಮದಂಡ

ನ್ಯಾಯ ಮತ್ತು ಧರ್ಮ ಸಂಸ್ಕೃತಿಯನ್ನು ರಕ್ಷಿಸಲು ಉಜ್ಜಯಿನಿ ಪೀಠದಿಂದ ಈ ಧರ್ಮದಂಡವನ್ನು ಬಳಕೆ ಮಾಡಲಾಗುತ್ತದೆ. ಉಜ್ಜಯಿನಿ ಪೀಠದಿಂದ ಅನುಸರಣಾ ಪೀಠಾಧಿಪತಿಗಳಿಗೆ ಈ ಬೆಳ್ಳಿ ನಂದಿ ಇರುವ ಧರ್ಮದಂಡವನ್ನು ನೀಡಲಾಗುತ್ತದೆ. ಇದು ಪೀಠಾಧಿಪತಿಗಳಿಂದ ಮುಂದಿನ ಪೀಠಾಧಿಪತಿಗಳಿಗೆ ಹಸ್ತಾಂತರವಾಗುತ್ತಾ ಬರುತ್ತಿದೆ.

ಇದನ್ನೂ ಓದಿ: New Parliament Building: ಹೊಸ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ ಲಾಲು ಪ್ರಸಾದ್ ಯಾದವರ ಆರ್‌ಜೆಡಿ ಪಕ್ಷ!

ಕೆಳಗೆ ಬಿದರಿನ ದಂಡ, ಮೇಲೆ ಬೆಳ್ಳಿಯಲ್ಲಿ ಮಾಡಲಾಗಿರುವ ನಂದಿ ಮೂರ್ತಿ ಇರುವುದು ಇದರ ವಿಶೇಷತೆಯಾಗಿದೆ. ಸಾರಂಗಮಠದ ಸ್ವಾಮೀಜಿಗಳು ಈ ಧರ್ಮದಂಡ ಹಿಡಿದು ಭಕ್ತರ ಮನೆಗಳಿಗೆ, ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಾರೆ.

ಸೆಂಗೋಲ್‌ ಭಾರತದ ಸ್ವಾತಂತ್ರ್ಯದ ಪ್ರತೀಕ

ʼ‘ಸೆಂಗೋಲ್ ಅಂದರೆ ರಾಜದಂಡವಾಗಿದ್ದು, ಇದು ಭಾರತದ ಸ್ವಾತಂತ್ರ್ಯದ ಪ್ರತೀಕವಾಗಿದೆ. ಬ್ರಿಟಿಷರು ಭಾರತಕ್ಕೆ ಆಡಳಿತ/ಅಧಿಕಾರವನ್ನು ಹಸ್ತಾಂತರ ಮಾಡಿ ಹೋದ ನಂತರ ತಮಿಳುನಾಡಿನ ಜನರು, ಅಂದಿನ ಪ್ರಧಾನಿ ಜವಾಹರ್​ಲಾಲ್​ ನೆಹರೂ ಅವರಿಗೆ ಈ ರಾಜದಂಡ ನೀಡಿದ್ದರು. ಭಾರತದಲ್ಲಿ ಆಡಳಿತ ನಡೆಸುವ ಅಧಿಕಾರ ಭಾರತಕ್ಕೇ ಸಿಕ್ಕಿದ್ದರಿಂದ 1947ರ ಆಗಸ್ಟ್​ 14ರಂದು ಬೆಳಗ್ಗೆ 10.45ಕ್ಕೆ ಈ ಸೆಂಗೋಲ್​​ನ್ನು ನೆಹರೂ ಅವರಿಗೆ ನೀಡಲಾಗಿತ್ತು. ಇದು ಸಂಪೂರ್ಣವಾಗಿ ಚಿನ್ನದ್ದು ʼ’ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ಇದು ಎಲ್ಲಿತ್ತು?

ʼ‘ಕ್ರಿಸ್ತಪೂರ್ವ 3ನೇ ಶತಮಾನದಲ್ಲಿ ಆಡಳಿತ ನಡೆಸಿದ್ದ ಚೋಳ ರಾಜನ ಅವಧಿಯಲ್ಲಿ (ತಮಿಳು ರಾಜ) ಮಹತ್ವ ಪಡೆದ ರಾಜದಂಡ ಇದಾಗಿತ್ತು. ಈ ರಾಜದಂಡದ ಬಗ್ಗೆ ಪ್ರಧಾನಿ ಮೋದಿಯವರಿಗೆ ಗೊತ್ತಾಗುತ್ತಿದ್ದಂತೆ, ಅದನ್ನು ಹೊಸ ಸಂಸತ್​ ಭವನದಲ್ಲಿ ಇಡಲು ತೀರ್ಮಾನಿಸಿದ್ದಾರೆ. ಸೆಂಗೋಲ್​ ಎಂದರೆ ತಮಿಳಿನ ಭಾಷೆಯಲ್ಲಿ ಸಮೃದ್ಧ ಸಂಪತ್ತು ಎಂದರ್ಥ’ʼ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದರು.

ಇದನ್ನೂ ಓದಿ: Bandipur National Park: ಬಂಡೀಪುರವೀಗ ಫುಲ್‌ ರಶ್, ದಿನಕ್ಕೆ 8 ಲಕ್ಷ ರೂ. ಆದಾಯ; ಇದು ಮೋದಿ ಎಫೆಕ್ಟ್‌!

ಏನೀ ಸೆಂಗೋಲ್‌ನ ಇತಿಹಾಸ?

ತಮಿಳುನಾಡು ಮೂಲದ ಚೋಳ ರಾಜವಂಶ ವಾಸ್ತುಶಿಲ್ಪ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗಳಿಗೆ ಅಸಾಧಾರಣ ಕೊಡುಗೆ ನೀಡಿತ್ತು. ಚೋಳರ ಕಾಲದಲ್ಲಿ ಸೆಂಗೋಲ್ ಎಂಬುದು ರಾಜರ ಪಟ್ಟಾಭಿಷೇಕದಲ್ಲಿ ಅಪಾರ ಪ್ರಾಮುಖ್ಯತೆ ಹೊಂದಿತ್ತು. ಇದೊಂದು ಧಾರ್ಮಿಕ ಮಹತ್ವ ಹೊಂದಿರುವ ರಾಜದಂಡ. ಚಂದದ ಕೆತ್ತನೆಗಳು, ಸಂಕೀರ್ಣವಾದ ಅಲಂಕಾರಿಕ ಅಂಶಗಳು ಇದರ ವೈಶಿಷ್ಟ್ಯ. ರಾಜಪರಂಪರೆಯ ಪಾಲಿಗೆ ಇದು ಪವಿತ್ರ ಲಾಂಛನ. ಒಬ್ಬ ಆಡಳಿತಗಾರನಿಂದ ಮುಂದಿನವರಿಗೆ ಅಧಿಕಾರದ ವರ್ಗಾವಣೆಯನ್ನು ಇದು ಪ್ರತಿನಿಧಿಸುತ್ತಿತ್ತು.

Exit mobile version